ಬಾಲದ ಜೊತೆಗೇ ಹುಟ್ಟಿದ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ !

Long tail Baby : ನಾವು ವಾಸಿಸುವ ಸುತ್ತ ಮುತ್ತಲೂ ಅಸಾಧ್ಯ ಆಗಿರುವ ಘಟನೆಗಳು ನಡೆಯುತ್ತಿರುವುದು ನಾವು ಎಷ್ಟೋ ನೋಡಿರುತ್ತೇವೆ ಮತ್ತು ಇನ್ನೆಷ್ಟೋ ಕೇಳಿರುತ್ತೇವೆ. ಹೌದು ನಮ್ಮ ಭೂಮಿ ಅಪರಿಮಿತ ಅಚ್ಚರಿಗಳ ಆಗರ. ಮನುಷ್ಯ ಸೌರ ಮಂಡಲಗಳನ್ನು ಅಧ್ಯಯನ ಮಾಡಿದರೂ ಸಹ ಸ್ವಂತ ಭೂಮಿಯಲ್ಲೇ (Earth) ಆತನ ಅರಿವಿಗೆ ಬಾರದಿರುವ ಅಚ್ಚರಿಗಳು ಹಲವಾರು ಇದೆ. ಇನ್ನು ಅಲ್ಲೊಂದು ಇಲ್ಲೊಂದು ಹೊಸ ಹೊಸ ಪ್ರಭೇದಗಳ ಜೀವಸಂಕುಲಗಳು ಪತ್ತೆಯಾಗುತ್ತಿರುತ್ತವೆ.

ಸದ್ಯ ಇಲ್ಲೊಂದು ಕಡೆ ಹೆಣ್ಣು(ಹೆಣ್ಣು) ಮಗು (long tail Baby) ವಲ್ಲಿ 6 ಸೆಂ.ಮೀ. ಬಾಲ ಕಂಡುಬಂದಿದ್ದು, ಅದನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕುವಲ್ಲಿ ವೈದ್ಯರು (doctor) ಯಶಸ್ವಿಯಾಗಿದ್ದಾರೆ( success). ಹೌದು ನೀವು ನಂಬಲೇ ಬೇಕು.

ಬ್ರೆಜಿಲ್‌ನಲ್ಲಿ ಜನಿಸಿದ ಹೆಣ್ಣು ಮಗುವೊಂದರಲ್ಲಿ 6 ಸೆಂ.ಮೀ. ಉದ್ದದ ಬಾಲದಂಥ ರಚನೆ ಕಂಡುಬಂದಿದ್ದು, ಇದನ್ನು ಅಪರೂಪದ ಜೆನೆಟಿಕ್ ಡಿಸಾರ್ಡ‌ನಿಂದ ಕಂಡುಬರುವ ಈ ಬೆಳವಣಿಗೆಯನ್ನು ಸೋನಾ ಬೈಫಿಡಾ ಎಂದು ಕರೆಯಲಾಗುತ್ತದೆ ಎನ್ನಲಾಗಿದೆ. ಆದರೆ ಬೆನ್ನುಮೂಳೆಯ ಸಮಸ್ಯೆ ಅಥವಾ ಗಡ್ಡೆಯಿಂದಾಗಿ ಈ ರೀತಿ ಆಗುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯವಾಗಿ ಈ ಬಾಲಕಿಯ ಬೆನ್ನುಹುರಿ ಸರಿಯಾಗಿ ಬೆಳವಣಿಗೆ ಆಗದೇ ಈ ರೀತಿ ಆಗಿದೆ ಎನ್ನಲಾಗಿದೆ. ಸ್ಪೇನ್ ಮತ್ತು ಪೆಲ್ವಿಸ್ ಸಂಪರ್ಕಿಸುವ ಲಂಬೋಸ್ಯಾಕ್ರಲ್ ಪ್ರದೇಶದಲ್ಲಿ ಈ ಬಾಲದಂಥ ರಚನೆ ಕಂಡುಬಂದಿದ್ದು, ಪರಿಣತ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಅದನ್ನು ತೆಗೆದುಹಾಕಿದ್ದಾರೆ. ಹೂಮನ್ ಸೀಡೋ ಟೇಲ್ ಎನ್ನಲಾಗುವ ಇದು ಬಾಲದಂತೆ ಕಾಣಿಸುತ್ತದೆ.

ಒಟ್ಟಿನಲ್ಲಿ ನಾವು ಭೂಮಿಯಲ್ಲಿ ನಡೆಯುವ ಕೆಲವೊಂದು ಅಚ್ಚರಿಗಳನ್ನು ಒಪ್ಪಿ ಕೊಳ್ಳಲೇ ಬೇಕಾಗುತ್ತದೆ.

Leave A Reply

Your email address will not be published.