Laziest Cricketer : ವಿಶ್ವದ ಅತಿ ಸೋಮಾರಿ ಕ್ರಿಕೆಟಿಗ ಇವರೇ ನೋಡಿ!
Laziest Cricketer : ಕ್ರಿಕೆಟ್ ನಲ್ಲಿ ಉತ್ತಮ ಆಟಗಾರ ಮಾತ್ರವಲ್ಲ. ಅದರಲ್ಲಿ ಅತಿ ಸೋಮಾರಿ ಕೂಡ ಇರುತ್ತಾರೆ. ಆದರೆ ಗೆಲುವನ್ನು ಎಲ್ಲರು ಬೇಗನೆ ಗುರುತಿಸೋದ್ರಿಂಂದ, ಸೋಲು, ಸೋಮಾರಿ ಎಲ್ಲಾ ಹಿಂದೆ ಇರುತ್ತದೆ. ಕ್ರಿಕೆಟ್ ನಲ್ಲಿ ಉತ್ತಮ ಆಟಗಾರ ಯಾರು ಎಂದು ಎಲ್ಲರಿಗೂ ಗೊತ್ತಿದೆ. ಟೀಂ ಇಂಡಿಯಾದ ಡ್ಯಾಶಿಂಗ್ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಟಾಪ್ ಸ್ಥಾನದಲ್ಲಿದ್ದಾರೆ. ಇನ್ನು ಹಲವು ಆಟಗಾರರು ಉತ್ತಮ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಆದರೆ ವಿಶ್ವದ ಅತ್ಯಂತ ಸೋಮಾರಿ ಕ್ರಿಕೆಟಿಗ (Laziest Cricketer) ಯಾರು ಗೊತ್ತಾ? ಗೊತ್ತಿಲ್ಲ ಅಲ್ವಾ? ಹಾಗಾದ್ರೆ ಈ ಲೇಖನ ಓದಿ.
ಆ ಸೋಮಾರಿ ಕ್ರಿಕೆಟಿಗ ಯಾರು ಗೊತ್ತಾ? ಅವರು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ( Inzamam Ul Haq). ಹೌದು, ಈತ ವಿಶ್ವದ ಅತ್ಯಂತ ಸೋಮಾರಿ ಕ್ರಿಕೆಟಿಗ ಎಂದು ಗುರುತಿಸಲ್ಪಟ್ಟಿದ್ದಾರೆ. ಇಂಜಮಾಮ್-ಉಲ್-ಹಕ್ ತಮ್ಮ ವೃತ್ತಿಜೀವನದಲ್ಲಿ 120 ಟೆಸ್ಟ್ ಮತ್ತು 378 ODIಗಳನ್ನು ಆಡಿದ್ದಾರೆ. ODI ಮಾದರಿಯಲ್ಲಿ, ಅವರು 40 ಬಾರಿ ರನೌಟ್ ಆಗಿದ್ದಾರೆ.
ಇಂಜಮಾಮ್ ಟೆಸ್ಟ್ ನಲ್ಲೂ ಆರು ಬಾರಿ ರನ್ ಔಟ್ ಆಗಿದ್ದಾರೆ. ಕ್ರಿಕೆಟ್‌ನ ಸುದೀರ್ಘ ಸ್ವರೂಪದಲ್ಲಿ (ಟೆಸ್ಟ್‌ನಲ್ಲಿ) ರನ್ ಔಟ್ ಆಗಿದ್ದು, 120 ಟೆಸ್ಟ್ ಪಂದ್ಯಗಳ 200 ಇನ್ನಿಂಗ್ಸ್‌ಗಳಲ್ಲಿ 25 ಶತಕಗಳು ಮತ್ತು 46 ಅರ್ಧ ಶತಕಗಳನ್ನು ಸೇರಿದಂತೆ ಒಟ್ಟು 8830 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳ 350 ಇನ್ನಿಂಗ್ಸ್‌ಗಳಲ್ಲಿ 10 ಶತಕ ಮತ್ತು 83 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಈ ಮಾದರಿಯಲ್ಲಿ ಇಂಜಮಾಮ್ ಒಟ್ಟು 11739 ರನ್ ಗಳಿಸಿದ್ದಾರೆ. ಸದ್ಯ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ವಿಶ್ವದ ಅತ್ಯಂತ ಸೋಮಾರಿ ಕ್ರಿಕೆಟಿಗ (Laziest Cricketer) ಆಗಿದ್ದಾರೆ.