Largest Railway Station : ವಿಶ್ವದ ಅತಿ ದೊಡ್ಡ ರೈಲು ನಿಲ್ದಾಣ ಯಾವುದು ? ಈ ನಿಲ್ದಾಣ ದ ಬಗ್ಗೆ ಹಲವು ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿದೆ!
Largest railway station: ರೈಲ್ವೆ ಸಂಚಾರವು ಇತ್ತೀಚಿಗೆ ಹೆಚ್ಚಿನ ಅಭಿವೃದ್ಧಿ (development )ಹೊಂದಿದ್ದು, ರೈಲು (Train)ಕೇವಲ ನಮಗೆ ಪ್ರಯಾಣ ಮಾಡಲು ಮಾತ್ರವಲ್ಲದೆ ಸರಕು ಸಗಟುಗಳ ರವಾನೆಯನ್ನು ಮಾಡುವಲ್ಲಿ ರೈಲುಗಳ ಪಾತ್ರ ಬಹಳ ಮಹತ್ವವಾದದ್ದು. ಯಾಕೆಂದರೆ ರೈಲು ವ್ಯವಸ್ಥೆ ಇಲ್ಲದೇ ಇದ್ದಲ್ಲಿ ಸಂಚಾರ ಮಾಡಲು ಮತ್ತು ಸರಕುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಲು ಕಷ್ಟಕರವಾಗಿತ್ತು.
ಮುಖ್ಯವಾಗಿ ದೂರದ ಪ್ರಯಾಣಕ್ಕೆ ರೈಲು ಸಂಚಾರವನ್ನು ನಾವು ಆಯ್ಕೆ ಮಾಡಿಕೊಳ್ಳುವುದು ಸಹಜ. ಯಾಕೆಂದರೆ ಅಗ್ಗದ ದರದಲ್ಲಿ ಬೇಗನೆ ಪ್ರಯಾಣ ಮಾಡಲು ರೈಲು ಪ್ರಯಾಣ ಸೂಕ್ತವಾಗಿದೆ. ಇನ್ನು ಸಣ್ಣ(small)ರೈಲು ನಿಲ್ದಾಣಗಳಲ್ಲಿ ಒಂದರಿಂದ ಎರಡು ಪ್ಲ್ಯಾಟ್‌ಫಾರ್ಮಗಳಿದ್ದರೆ, ದೊಡ್ಡ ನಿಲ್ದಾಣಗಳಲ್ಲಿ ಅನೇಕ ಫ್ಲ್ಯಾಟ್‌ಫಾರ್ಮ್‌ಗಳಿರುತ್ತವೆ. ಹಿಂದಿನ ಕಾಲದಲ್ಲಿ ಪ್ರಯಾಣಿಕರು ಹಾಗೂ ಸಾಮನು ಸಾಗಣೆಗೆ ಒಂದೇ ನಿಲ್ದಾಣವನ್ನ ಉಪಯೋಗಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸರಕು ಸಾಗಣೆಗೆ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಮುಖ್ಯವಾಗಿ ವಿಶ್ವದ(world)ಅತಿದೊಡ್ಡ ರೈಲು ನಿಲ್ದಾಣ(Largest railway station) ಯಾವುದು ಎಂದು ನಿಮಗೆ ಪ್ರಶ್ನೆ ಮೂಡುವುದು ಸಹಜ. ಹಾಗಿದ್ದರೆ ಇಲ್ಲಿದೆ ಪೂರ್ಣ ಮಾಹಿತಿ(information).
ವಿಶ್ವದ ಅತಿದೊಡ್ಡ ರೈಲು ನಿಲ್ದಾಣದ ಶೀರ್ಷಿಕೆಯನ್ನು ಗ್ರ್ಯಾಂಡ್ ಸೆಂಟ್ರಲ್ ಟರ್ಮಿನಲ್ ಹೆಸರಿನಲ್ಲಿ ನೋಂದಾಯಿಸಲಾಗಿದ್ದು ಸದ್ಯ ಅಮೆರಿಕದ (ಯುಎಸ್) ನ್ಯೂಯಾರ್ಕ್ ನಗರದಲ್ಲಿ ಜಗತ್ತಿನ ಅತಿ ದೊಡ್ಡ ರೈಲು ನಿಲ್ದಾಣ ಇದೆ. ಈ ನಿಲ್ದಾಣವನ್ನು 1901 ರಿಂದ 1903 ರ ಅವಧಿಯಲ್ಲಿ ನಿರ್ಮಿಸಲಾಯಿತು ಎಂದು ಮಾಹಿತಿ ಇದೆ.
ವಿಶೇಷ ಎಂದರೆ 1901 ರಿಂದ 1903 ರ ಆ ಸಮಯದಲ್ಲಿ ಪೆನ್ಸಿಲ್ವೇನಿಯಾದ ರೈಲು ನಿಲ್ದಾಣದೊಂದಿಗೆ ಸ್ಪರ್ಧಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆಯಂತೆ. ಭಾರೀ ಯಂತ್ರಗಳು ಇಲ್ಲದ ಕಾಲದಲ್ಲಿ ಈ ಅತಿದೊಡ್ಡ ರೈಲು ನಿಲ್ದಾಣವನ್ನು ನಿರ್ಮಿಸಲು ಎರಡು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಲಾಗಿದೆ. ಈ ನಿಲ್ದಾಣದಲ್ಲಿ ಒಟ್ಟು 44 ಪ್ಲಾಟ್‌ಫಾರ್ಮ್‌ಗಳಿದ್ದು, ಇಲ್ಲಿ 44 ರೈಲುಗಳು ಏಕಕಾಲದಲ್ಲಿ ನಿಲ್ಲಬಹುದಾಗಿದೆ. ಗ್ರ್ಯಾಂಡ್ ಸೆಂಟ್ರಲ್ ಟರ್ಮಿನಲ್‌ನಲ್ಲಿ ಅನೇಕ ಚಲನಚಿತ್ರಗಳನ್ನು ಸಹ ಚಿತ್ರೀಕರಿಸಲಾಗಿದೆ.
ವರದಿ ಪ್ರಕಾರ ಈ ರೈಲು ನಿಲ್ದಾಣವು ಎಷ್ಟು ದೊಡ್ಡದಾಗಿದೆ ಎಂದರೆ ಇದನ್ನು ನಿರ್ಮಿಸಲು ಒಂದೇ ಸಮಯದಲ್ಲಿ 10,000 ಪುರುಷರು ಒಟ್ಟಾಗಿ ಕೆಲಸ ಮಾಡುತ್ತಿದ್ದು, ನಿಲ್ದಾಣವು ಅದರ ಗಾತ್ರಕ್ಕೆ ಮಾತ್ರವಲ್ಲದೆ ಅದರ ವಾಸ್ತುಶಿಲ್ಪ ಮತ್ತು ವಿನ್ಯಾಸಕ್ಕೂ ಹೆಸರುವಾಸಿಯಾಗಿದೆ. ಈ ರೈಲು ನಿಲ್ದಾಣ ನೋಡುವಾಗ ವಿಶಾಲವಾಗಿರುವುದರ ಜೊತೆಗೆ ಆಶ್ಚರ್ಯ ಕೂಡ ಆಗುತ್ತದೆ.
ಇನ್ನು ನಮ್ಮ ದೇಶದಲ್ಲಿ ಇತ್ತೀಚಿಗೆ ರೈಲ್ವೇ ಅಭಿವೃದ್ಧಿ ಸಾದಿಸಿದ್ದು ದೇಶದಲ್ಲಿ ಆರ್ಥಿಕ ಪ್ರಗತಿಗೆ ಕೂಡ ಕಾರಣವಾಗಿದ್ದು ಇನ್ನು ಹೆಚ್ಚಿನ ಪ್ರಗತಿಯನ್ನು ಕಾಣುವ ಭರವಸೆ ಇದೆ.