ಇನ್ನು ಮುಂದೆ ಆಸ್ಪತ್ರೆಯಲ್ಲಿ ವೈದ್ಯರನ್ನು ಭೇಟಿ ಮಾಡಲು ಕ್ಯೂ ನಲ್ಲಿ ನಿಲ್ಲೋದು ಬೇಡ ! ಬಂದಿದೆ ಹೊಸ ವ್ಯವಸ್ಥೆ, ಏನದು? ಇಲ್ಲಿದೆ ವಿವರ

Karnataka Health Department: ಸದ್ಯ ಸರ್ಕಾರಿ ಆಸ್ಪತ್ರೆಯಲ್ಲಿ (government hospital )ರೋಗಿಗಳು ಚಿಕಿತ್ಸೆ ಪಡೆಯಬೇಕಾದಲ್ಲಿ ಗಂಟೆಗಳ ಕಾಲ ಕಾಯಬೇಕು ಅಷ್ಟರಲ್ಲಿ ರೋಗಿಯ ಆರೋಗ್ಯ (health )ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಈ ಸಮಸ್ಯೆಗೆ ಪರಿಹಾರವಾಗಿ QR ಕೋಡ್ ವ್ಯವಸ್ಥೆ ಜಾರಿ ಮಾಡಲಾಗಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಗಂಟೆಗಟ್ಟಲೆ ಕ್ಯೂ ನಿಲ್ಲುವುದನ್ನು ತಪ್ಪಿಸಲು ಖಾಸಗಿ ಅಸ್ಪತ್ರೆಯಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಟೋಕನ್ ವ್ಯವಸ್ಥೆ ಶುರುವಾಗಲಿದೆ. ದೆಹಲಿ ಮಾದರಿಯಂತೆ ಬೆಂಗಳೂರಿನಲ್ಲೂ ಈ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಜಾರಿ ಮಾಡುತ್ತಿದೆ.

ಹೌದು ಆರೋಗ್ಯ ಸಚಿವ ಡಾ. ಕೆ ಸುಧಾಕರ್​(Dr. K sudhakar)ಪ್ರಕಾರ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಅಥವಾ ರೋಗಿಯ ಸಂಬಂಧಿಕರು ವೈದ್ಯರನ್ನು ಭೇಟಿಯಾಗಲು ಸರದಿ-ಸಾಲಿನಲ್ಲಿ ನಿಂತು ಕಾಯುವ ಅವಶ್ಯಕತೆ ಇಲ್ಲ. ಇದಕ್ಕಾಗಿ ಹೊಸ QR ಕೋಡ್ ವ್ಯವಸ್ಥೆ ಜಾರಿ ಮಾಡಿದ್ದು ಇದರಿಂದ ಕಾಯುವ ಸನ್ನಿವೇಶ ತಪ್ಪುತ್ತದೆ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಕಾಂಗ್ರೆಸ್​ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಸ್ಕಿಪ್​ ದ ಕ್ಯೂ (Skip the queue) ಅಂತ ಕಾರ್ಯಕ್ರಮ ಮಾಡಿದ್ದೇವೆ. ಇದರ ಮೂಲಕ ರೋಗಿಗಳು ಚಿಕಿತ್ಸೆ ಪಡೆಯಬೇಕಾದಲ್ಲಿ ಗಂಟೆಗಳ ಕಾಲ ಕಾಯಬೇಕಾದ ಅವಶ್ಯಕತೆ ಇಲ್ಲ ಎಂದಿದ್ದಾರೆ. ಅದಲ್ಲದೆ ಎಷ್ಟು ಜನ ರೋಗಿಗಳು ಇದ್ದಾರೆ ಮಾಹಿತಿ ಆಸ್ಪತ್ರ ಸಿಬ್ಬಂದಿಗೆ ಸಿಗಲಿದೆ ಮತ್ತು ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್ ತೆರಯಲು ಮುಂದಾಗಿದ್ದು, ಈಗಾಗಲೇ 19 ಜಿಲ್ಲೆಯಲ್ಲಿ ತೆರೆಯಲಾಗಿದೆ ಎಂದು ತಿಳಿಸಿದರು.

ಸದ್ಯ 24 ಗಂಟೆ 4 ಜನ ಆಸ್ಪತ್ರೆಯಲ್ಲಿ ಮಾಹಿತಿ ಕೊಡಲಿದ್ದು ಆಯುಷ್ಮಾನ್ ಭಾರತ್ ‌ಮತ್ತು ರಾಜ್ಯದ ಹೆಲ್ತ್ ಕಾರ್ಡ್​ನ್ನು ಸೇರಿಸಿ ಒಂದು ಕಾರ್ಡ್ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. 4 ದಿನಗಳಲ್ಲಿ ಈಗಾಗಲೇ 1 ಕೋಟಿ 28 ಲಕ್ಷ ಕಾರ್ಡ್ ಕೊಡಲಾಗಿದೆ. ಒಟ್ಟು 4 ಕೋಟಿ ಕಾರ್ಡ್ ಕೊಡಬೇಕು. ಎಲ್ಲೇ ಹೋದರು ಈ ಕಾರ್ಡ್ ತೋರಿದರೆ ಚಿಕಿತ್ಸೆ ಕೊಡುವ ವ್ಯವಸ್ಥೆ ಮಾಡುತ್ತಿದ್ದೇವೆ.

QR ಕೋಡ್ ವ್ಯವಸ್ಥೆ ಕ್ರಮ :
• ಸರ್ಕಾರಿ ಆಸ್ಪತ್ರೆಗೆ (Karnataka Health Department) ಚಿಕಿತ್ಸೆಗೆ ರೋಗಿ, ಅವರ ಕಡೆಯವರು ಭೇಟಿ ಕೊಟ್ಟಾಗ ಆ ಅಸ್ಪತ್ರೆಯಲ್ಲಿರುವ Q R ಕೋಡ್ ನಿಮ್ಮ ಮೊಬೈಲ್ ಲ್ಲಿ ಸ್ಕ್ಯಾನ್ ಮಾಡಬೇಕು
• ಸರಕಾರಿ ಆಸ್ಪತ್ರೆ ಕೇಳುವ ಮಾಹಿತಿ ತುಂಬಬೇಕು
• ಇದಾದ ಬಳಿಕ ಟೋಕನ್‌ ನಂಬರ್ ಜನರೇಟ್ ಆಗುತ್ತೆ
• ಆಸ್ಪತ್ರೆಯವರು ನಿಮಗೆ ಸಿಕ್ಕ ಟೋಕನ್ ನಂಬರ್ ಕರೆದಾಗ ಹೋಗಬೇಕು.
• ಆಸ್ಪತ್ರೆ ಸಿಬ್ಬಂದಿ ಕೇಳುವ ಪ್ರಶ್ನೆಗೆ ಉತ್ತಿರಿಸಿ, ಸಂಬಂಧಪಟ್ಟ ವೈದ್ಯರ ಬಳಿ ಚಿಕಿತ್ಸೆಗೆ ತೆರಳಿ
• ಆರಂಭದಲ್ಲಿ ಒಂದು ಸಾರಿ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು

ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಮೂರು ಆಸ್ಪತ್ರೆಗಳಲ್ಲಿ ಜಾರಿಗೆ ತರಲಾಗಿದೆ. ಮುಖ್ಯವಾಗಿ ಸಿ ವಿ ರಾಮನ್​ ಆಸ್ಪತ್ರೆ, ಹಲಸೂರು- ಕೆ ಸಿ ಜನರಲ್​ ಆಸ್ಪತ್ರೆ, ಮಲ್ಲೆಶ್ವರಂ-ಜಯನಗರ ಸರ್ಕಾರಿ ಆಸ್ಪತ್ರೆ ಜಯನಗರದಲ್ಲಿ ಈ ವ್ಯವಸ್ಥೆ ಅಳವಡಿಸಲಾಗಿದೆ.

ಈ ಮೇಲಿನಂತೆ ಇನ್ನುಮುಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಮುಂಗಡವಾಗಿ ಸಮಯ ಮೀಸಲು ಮಾಡಿಕೊಂಡು ವೈದ್ಯರನ್ನು ಭೇಟಿ ಮಾಡುವ ಅವಕಾಶವನ್ನು ಸಾರ್ವಜನಿಕರಿಗೆ ಕಲ್ಪಿಸಲೆಂದು ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿ ಮಾಡಲಾಗಿದೆ.

Leave A Reply

Your email address will not be published.