ಅಟಲ್ ಬಿಹಾರಿ ವಾಜಪೇಯಿ ಜನರಲ್ ಸ್ಕಾಲರ್‌ಶಿಪ್ : ವಿದ್ಯಾರ್ಥಿಗಳೇ ಇಂದೇ ಅರ್ಜಿ ಸಲ್ಲಿಸಿ!

Atal Bihari Vajpayee Scolorship : ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಹ ನೀಡುವ ನಿಟ್ಟಿನಲ್ಲಿ ಹಲವು ಸಂಸ್ಥೆಗಳು ಪ್ರೋತ್ಸಾಹಧನವನ್ನು ನೀಡುತ್ತಾ ಬಂದಿದ್ದಾರೆ. ಅದರಂತೆ, ಇದೀಗ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್(ICCR) ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಟಲ್ ಬಿಹಾರಿ ವಾಜಪೇಯಿ ಜನರಲ್ ಸ್ಕಾಲರ್‌ಶಿಪ್ (Atal Bihari Vajpayee Scolorship) ಯೋಜನೆಗಾಗಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ವಿದೇಶದಲ್ಲಿ ಭಾರತೀಯ ಮಿಷನ್‌ನಿಂದ ವಿದ್ಯಾರ್ಥಿವೇತನವನ್ನು ನಿಯೋಜಿಸಲು ಮತ್ತು ಆಫರ್ ಲೆಟರ್‌ಗಳನ್ನು ರಚಿಸಲು ಕೊನೆಯ ದಿನಾಂಕ ಜೂನ್ 30. ಅಭ್ಯರ್ಥಿಗಳು ಜುಲೈ 15 ರೊಳಗೆ ಆಫರ್ ಲೆಟರ್ ಅನ್ನು ಸ್ವೀಕರಿಸಬಹುದು. ಮೊದಲ ಸುತ್ತಿನ ನಂತರ ಸೀಟುಗಳು ಲಭ್ಯವಿದ್ದರೆ, ಇತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲು ಭಾರತೀಯ ಮಿಷನ್‌ಗಳಿಗೆ ಕೊನೆಯ ದಿನಾಂಕ ಜುಲೈ 22. ಜುಲೈ 30 ರಂದು ಅದು ಮುಕ್ತಾಯಗೊಳ್ಳುತ್ತದೆ.

ಅಧಿಕೃತ ಅಧಿಸೂಚನೆಯ ಪ್ರಕಾರ, ICCR A2R ಪೋರ್ಟಲ್ ಈಗ ಅಭ್ಯರ್ಥಿಗಳಿಗೆ ಮುಕ್ತವಾಗಿದೆ. ಫೆಬ್ರವರಿ 20 ರಿಂದ ನೋಂದಣಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಏಪ್ರಿಲ್ 30 ರೊಳಗೆ ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಮೇ 31ರವರೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಹಿತಿ ನೀಡಲು ವಿವಿಗಳಿಗೆ ಸಮಯವಿರುತ್ತದೆ.

ಅಧಿಕೃತ ವೆಬ್‌ಸೈಟ್ : a2ascholarships.iccr.gov.in

Leave A Reply

Your email address will not be published.