Aadhaar Card Toll Free Number : ಆಧಾರ್‌ ಕಾರ್ಡ್‌ ಹೊಂದಿರುವವರಿಗೆ ಟೋಲ್‌ ಫ್ರೀ ನಂಬರ್‌ ಕೊಟ್ಟ UIDAI

Aadhaar Card : ದೇಶದಲ್ಲಿ ಆಧಾರ್ ಕಾರ್ಡ್ ತುಂಬಾನೇ ಅತ್ಯಗತ್ಯ. ಇಂದಿನ ದಿನದಲ್ಲಿ ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ (Aadhaar Card) ಬೇಕೇ ಬೇಕು. ಹಾಗೆಯೇ ಆಧಾರ್ ಕಾರ್ಡ್ ನಲ್ಲಿ ಅಪ್ಡೇಟ್ ಬರುತ್ತಲೇ ಇವೆ. ಸದ್ಯ UIDAI ಆಧಾರ್ ನ ಅಗತ್ಯತೆಯನ್ನು ಪರಿಗಣಿಸಿ, ನಾಗರಿಕರಿಗೆ ಉತ್ತಮ ಸೇವೆಗಳನ್ನು ಒದಗಿಸುವ ಸಲುವಾಗಿ ಹಲವು ಹೊಸ ಹೊಸ ಸೇವೆಗಳನ್ನು ಪರಿಚಯಿಸುತ್ತಿದೆ. ಇದೀಗ UIDAI ಆಧಾರ್ ಹೊಂದಿರುವವರಿಗೆ ಟೋಲ್ ಫ್ರೀ ಸಂಖ್ಯೆ(Toll-free telephone number) ಯ ಸೌಲಭ್ಯದಲ್ಲಿ ಹೊಸ ಸೇವೆ ಆರಂಭಿಸಿದೆ.

ಈ ಬಗ್ಗೆ UIDAI ತನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, IVRS ನಲ್ಲಿ ಹೊಸ ಸೇವೆಗಳನ್ನು ಆರಂಭಿಸಲಾಗಿದೆ. ಆಧಾರ್ ಕಾರ್ಡ್ ಹೊಂದಿರುವ ನಾಗರಿಕರು ಇದೀಗ ಟೋಲ್ ಫ್ರೀ ಸಂಖ್ಯೆ 1947 ಗೆ ಕರೆ ಮಾಡಿ, 24×7 IVRS ಸೇವೆಗಳನ್ನು ಪಡೆಯಬಹುದು ಎಂದು UIDAI ತಿಳಿಸಿದೆ.

ಈ ಸೇವೆಯಲ್ಲಿ, ನಾಗರಿಕರು ಹೊಸ ಆಧಾರ್ ಕಾರ್ಡ್ ನೋಂದಣಿಯ ಸ್ಥಿತಿ, ಆಧಾರ್ ಕಾರ್ಡ್‌ನಲ್ಲಿನ ಯಾವುದೇ ನವೀಕರಣದ ಸ್ಥಿತಿ, PVC ಆಧಾರ್ ಕಾರ್ಡ್ ಆದೇಶದ ಸ್ಥಿತಿ, ಯಾವುದೇ ದೂರಿನ ಸ್ಥಿತಿ ಮತ್ತು ಹತ್ತಿರದ ಆಧಾರ್ ನೋಂದಣಿ ಕೇಂದ್ರದ ಬಗ್ಗೆ ತಿಳಿಯಲು ಆಧಾರ್ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬಹುದು. ಇದರಿಂದ ನಾಗರೀಕರಿಗೆ ಸರಿಯಾದ ಮಾಹಿತಿ ದೊರೆಯಲಿದೆ. ಇದು ಆಧಾರ್ ಕಾರ್ಡ್ ಬಳಕೆದಾರರಿಗೆ ಪ್ರಯೋಜನಕಾರಿಯಾಗಿದೆ.

ಇದಿಷ್ಟೇ ಅಲ್ಲದೆ, ಆಧಾರ್ ಕಾರ್ಡ್ ಒಂದು ಬಾರಿಯೂ ನವೀಕರಿಸದಿದ್ದವರು, ಬೇಗನೆ ನವೀಕರಿಸಬೇಕು ಎಂದು UIDAI ನಾಗರಿಕರಿಗೆ ತಿಳಿಸಿದೆ. ಅಂದ್ರೆ, ನಿಮ್ಮ ಆಧಾರ್ 10 ವರ್ಷಗಳ ಹಿಂದೆ ರಚನೆ ಆದದ್ದು, ಒಂದು ಬಾರಿಯೂ ನವೀಕರಣ ಆಗಿಲ್ಲ ಎಂದಾದರೆ, ನವೀಕರಿಸಬೇಕು ಎನ್ನಲಾಗಿದೆ.

Leave A Reply

Your email address will not be published.