TVS Ronin Bike : ಅತ್ಯಂತ ಕಡಿಮೆ ದರದಲ್ಲಿ ಟಿವಿಎಸ್‌ ರೋನಿನ್‌ ಬೈಕ್‌ ನಿಮಗೆ ಲಭ್ಯ ! ಎಂ ಎಸ್‌ ಧೋನಿ ಮನಸೂರೆಗೊಂಡ ಈ ಬೈಕ್‌ನ ವಿಶೇಷತೆ ಏನು?

TVS Ronin Bike: ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾ ಮಾಜಿ ನಾಯಕನ ಬೈಕ್ ಕ್ರೇಸ್ ಬಗ್ಗೆ ಕೇಳಿದರೆ ನೀವು ಆಶ್ಚರ್ಯ ಪಡುವುದು ಖಂಡಿತಾ. ಹೌದು ಧೋನಿ ಅವರ ಗ್ಯಾರೇಜ್ ನಲ್ಲಿ ಹಲವಾರು ಬೈಕ್ ಗಳ ಸಂಗ್ರಹ ಇದೆಯಂತೆ. ವಿಶೇಷ ಎಂದರೆ ಭಾರತದಲ್ಲಿ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಟಿವಿಎಸ್ ಕಂಪನಿಯ ಕೈಗೆಟುಕುವ ಬೆಲೆಯ ‘ರೋನಿನ್’ ಪ್ರೀಮಿಯಂ ಬೈಕ್‌ನ್ನು ಎಂ.ಎಸ್ ಧೋನಿ ವಿತರಣೆ ಪಡೆದಿದ್ದಾರೆ.

ಸದ್ಯ ರೋನಿನ್ ಪ್ರೀಮಿಯಂ ಬೈಕ್ ಟಿವಿಎಸ್ ರೋನಿನ್ ಮೋಟಾರ್‌ಸೈಕಲ್‌, ರಾಯಲ್ ಎನ್‌ಫೀಲ್ಡ್ ಹಂಟರ್, ಯಮಹಾ FZ-X, ಮತ್ತು ಯೆಜ್ಡಿ ಸ್ಕ್ರ್ಯಾಂಬ್ಲರ್ ಬೈಕ್ ಗಳಿಗೆ ಭಾರೀ ಪೈಪೋಟಿ ನೀಡಲಿದ್ದು, ಈ ಬೈಕ್ ಹತ್ತು ಹಲವು ವೈಶಿಷ್ಟ್ಯಗಳ ಮೂಲಕ ಈಗಾಗಲೇ ಸಾಕಷ್ಟು ಯುವ ಗ್ರಾಹಕರನ್ನು ಆಕರ್ಷಿಸಲಿದೆ. ಅದಲ್ಲದೆ ಇದು ಧೋನಿ ಅವರ ಎರಡನೇ ಟಿವಿಎಸ್ ಮೋಟಾರ್‌ಸೈಕಲ್‌ ಆಗಿದೆ.

ಮೋಟಾರ್‌ಸೈಕಲ್‌ ಬಿಸಿನೆಸ್ ಹೆಡ್ ವಿಮಲ್ ಸುಂಬ್ಲಿ ಅವರು, ರೋನಿನ್ ಬೈಕ್ ಕೀಯನ್ನು ವಿತರಿಸಿದ್ದು ಇದೊಂದು ಪ್ರೀಮಿಯಂ ಮೋಟಾರ್‌ಸೈಕಲ್ ಆಗಿದ್ದು, ಹೆಚ್ಚಿನ ಖರೀದಿದಾರರು ಲೈಕ್ ಮಾಡುತ್ತಾರೆ ಎಂಬ ವಿಶ್ವಾಸವನ್ನು ಕಂಪನಿ ಇರಿಸಿದೆ. ಧೋನಿ ಅವರು ಟಿವಿಎಸ್ ರೋನಿನ್‌ ಬೈಕ್ ಮಾಲೀಕರಾಗುತ್ತಿರುವುದು ಸಂತೋಷ ತಂದಿದೆ ಎಂದು ಸುಂಬ್ಲಿ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.

ಟಿವಿಎಸ್ ರೋನಿನ್ (TVS Ronin Bike) ವಿಶೇಷತೆ ಇಲ್ಲಿ ತಿಳಿಯಿರಿ :
• 225.9 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು 7750 rpmನಲ್ಲಿ 20.4 bhp ಗರಿಷ್ಠ ಪವರ್ ಹಾಗೂ 3750 rpmನಲ್ಲಿ 19.93 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
• 5 ಸ್ವೀಡ್ ಗೇರ್ ಬಾಕ್ಸ್ ನೊಂದಿಗೆ ಖರೀದಿಗೆ ಲಭ್ಯವಿದ್ದು, ಸ್ಲಿಪ್ಪರ್-ಕ್ಲಚ್ ಹಾಗೂ ಸೈಲೆಂಟ್ ಸ್ಟಾರ್ಟ್‌ಗಾಗಿ ಇಂಟಿಗ್ರೇಟೆಡ್ ಸ್ಟಾರ್ಟರ್ ಆಯ್ಕೆಯನ್ನು ಪಡೆದಿದೆ.
• ಇದು ಎಲ್ಇಡಿ ಹೆಡ್‌ಲ್ಯಾಂಪ್ಸ್, ಟಿ-ಆಕಾರದ ಎಲ್ಇಡಿ DRLಗಳು, ಸಿಂಗಲ್ ಪೀಸ್ ಬ್ಲ್ಯಾಕ್ ಕಲರ್ ಸೀಟ್, ಬ್ಲೂಟೂತ್ ಕನೆಕ್ಟಿವಿಟಿ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್,ವಾಯ್ಸ್ ಅಸಿಸ್ಟಂಟ್ಸ್ ಹಾಗೂ ಕಾಲ್, ಮೆಸೇಜ್ ಅಲರ್ಟ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.
• ಇದು ಎರಡು ರೈಡಿಂಗ್ ಮೋಡ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, ಅರ್ಬನ್ ಹಾಗೂ ರೇನ್ ಆಗಿದೆ.
• ಇದು ಫ್ರಂಟ್ 41 ಎಂಎಂ USD ಫೋರ್ಕ್ ಹಾಗೂ ರೇರ್ ಗ್ಯಾಸ್-ಚಾರ್ಜ್ಡ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ.
• 17-ಇಂಚಿನ ಅಲಾಯ್ ವೀಲ್ಸ್ ಹೊಂದಿರುವ ಈ ಬೈಕ್, ಫ್ರಂಟ್ ಮತ್ತು ರೇರ್ ಡಿಸ್ಕ್ ಬ್ರೇಕ್ ಅನ್ನು ಪಡೆದಿದೆ.
• ಟಾಪ್ ಎಂಡ್ ಮಾದರಿಗಳಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ.

ಸದ್ಯ ಬೆಂಗಳೂರಿನಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ಸಿಸ್ಟಮ್ ಹೊಂದಿರುವ ಟಿವಿಎಸ್ ರೋನಿನ್ ಬೈಕ್ ಆನ್ ರೋಡ್ ಬೆಲೆ 1,97,820 ಇದ್ದು, ಡ್ಯುಯಲ್ ಚಾನೆಲ್ ಎಬಿಎಸ್ ಸಿಸ್ಟಮ್ ಹೊಂದಿರುವ ಬೈಕ್ ದರ ರೂ. 2,22,480 ಇದೆ. ಇನ್ನು ಧೋನಿ ಅವರು ಟಿವಿಎಸ್ ರೋನಿನ್‌ ಬೈಕ್ ಮಾಲೀಕರಾಗುತ್ತಿರುವುದು ಸಂತೋಷದ ವಿಚಾರವಾಗಿದ್ದು, ಬೈಕ್ ಮಾರಾಟದ ಬಗ್ಗೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

Leave A Reply

Your email address will not be published.