Tata Motors : ಅತ್ಯಂತ ಬೇಡಿಕೆ ಇರುವ ಈ ಕಾರುಗಳ ಬೆಲೆ ಏರಿಸಿದ ಟಾಟಾ ಮೋಟಾರ್ಸ್!

Tata Motors: ಟಾಟಾ ಮೋಟಾರ್ಸ್ ಭಾರತದ(india)ಅತ್ಯಂತ ವಿಶ್ವಾಸಾರ್ಹ ವಾಹನ ತಯಾರಕ ನಂಬರ್ ಒನ್ ಕಂಪನಿಯಾಗಿದೆ. ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡ ಹೊಸ ಹೊಸ ಮಾದರಿ ಕಾರುಗಳನ್ನು ಗ್ರಾಹಕರಿಗೆ ನೀಡುತ್ತಿದ್ದು ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಟಾಟಾ ಮೋಟಾರ್ಸ್ ತಯಾರಿಸುವ ಕಾರುಗಳನ್ನು ಪ್ರತಿಯೊಬ್ಬರು ಇಷ್ಟಪಟ್ಟು ಖರೀದಿಸುತ್ತಾರೆ.

ಆದರೆ 2023 ರಲ್ಲಿ ಕಾರುಗಳ ಬೆಲೆಯನ್ನು ಹೆಚ್ಚಿಸಲು ಕಂಪನಿಗಳು ತಯಾರಾಗುತ್ತಿವೆ. ಮಾರುತಿ ಸುಜುಕಿ, (maruti Suzuki )ಮತ್ತು ಟಾಟಾ ಮೋಟಾರ್ಸ್‌(Tata Motors)ನಂತಹ ಕಂಪನಿಗಳು ಈಗಾಗಲೇ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿವೆ. ಅದಲ್ಲದೆ ರೆನಾಲ್ಟ್ ಇಂಡಿಯಾ ಮತ್ತು ಕಿಯಾ ಮೋಟಾರ್ಸ್ ಕಂಪನಿಗಳು ಸಹ ಕಾರುಗಳ ಬೆಲೆಯನ್ನು ಹೆಚ್ಚಿಸಲು ಸಿದ್ಧವಾಗಿವೆ.

ಸದ್ಯ ಟಾಟಾ ಮೋಟಾರ್ಸ್ ತನ್ನಕಾರುಗಳ ಎಂಜಿನ್ ಅನ್ನು ದೇಶದಲ್ಲಿ ಮುಂಬರಲಿರುವ BS6 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಿತ್ತು. ಅಲ್ಲದೆ, ತನ್ನ ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್‌ಗಳಲ್ಲಿ ಐಡಲ್ ಸ್ಟಾರ್ಟ್/ಸ್ಟಾಪ್ ಬಟನ್ ವೈಶಿಷ್ಟ್ಯವನ್ನು ಸೇರಿಸುವುದಾಗಿ ಘೋಷಣೆ ಮಾಡಿತ್ತು. ಈ ಕಾರಣಕ್ಕೆ ತನ್ನ ಕಾರುಗಳ ಬೆಲೆಯನ್ನು ಏರಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಎಮಿಷನ್ ಅನುಗುಣವಾಗಿ ಎಂಜಿನ್ ಅಭಿವೃದ್ಧಿಪಡಿಸಬೇಕಾದರೆ, ಉತ್ಪಾದನಾ ವೆಚ್ಚ ಜಾಸ್ತಿ ಇರಲಿದ್ದು, ಅದರಲ್ಲಿ ಕೊಂಚ ಭಾಗವನ್ನು ಗ್ರಾಹಕರಿಗೆ ಇರಿಸಲಾಗಿದೆ.

• ಮುಖ್ಯವಾಗಿ ಟಾಟಾದ ಜನಪ್ರಿಯ ಮಾದರಿಯಾದ ಪಂಚ್ ಇದು ರೂ.5.99 ಲಕ್ಷದಿಂದ ರೂ.9.54 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದ್ದು, ಬರೋಬ್ಬರಿ ರೂ.10,000 ದರ ಹೆಚ್ಚಳವನ್ನು ಪಡೆದುಕೊಂಡಿದೆ. ಪಂಚ್ ಕಾರಿನ ಆರಂಭಿಕ ರೂಪಾಂತರವಾದ ಪ್ಯೂರ್ ಬೆಲೆಯನ್ನು ರೂ.3,000 ಏರಿಕೆ ಮಾಡಲಾಗಿದೆ. ಉಳಿದ ಎಲ್ಲ ರೂಪಾಂತರಗಳ ದರವನ್ನು ರೂ.10,000 ಹೆಚ್ಚಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಟಾಟಾ, ಪಂಚ್ ಕಾರಿನ ಕಾಜಿರಂಗ ಆವೃತ್ತಿಯನ್ನು ಮಾರಾಟದಿಂದ ಸ್ಥಗಿತಗೊಳಿಸಿದೆ.

ಇಂದೊಂದು ಪುಟ್ಟ ಎಸ್‌ಯುವಿಯಾಗಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 86 PS ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು 5 ಸ್ವೀಡ್ ಮ್ಯಾನುವಲ್ ಹಾಗೂ 5 ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. 18.97 Kmpl ಮೈಲೇಜ್ ನೀಡುತ್ತದೆ. 7-ಇಂಚಿನ ಟಚ್‌ ಸ್ಕ್ರೀನ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಹಾಗೂ ಹರ್ಮನ್ ಸೌಂಡ್ ಸಿಸ್ಟಮ್ ಒಳಗೊಂಡಿದೆ.

• ಟಾಟಾ ಟಿಯಾಗೊ, ಟಿಗೂರ್ ಇತ್ತೀಚೆಗೆ ಟಿಯಾಗೊ ಕಾರಿಗೆ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ವೈಶಿಷ್ಟ್ಯವನ್ನು ಪರಿಚಯಿಸಲಾಯಿತು. ಸದ್ಯ, ಈ ರೂಪಾಂತರಗಳ ಬೆಲೆಯನ್ನು ರೂ. 9,000 ದಿಂದ ರೂ.15,000ರವರೆಗೆ ಹೆಚ್ಚಳ ಮಾಡಲಾಗಿದ್ದು, ವಿವಿಧ ರೂಪಾಂತಗಳಿಗೆ ಅನುಗುಣವಾಗಿ ಟಿಗೂರ್ ಸೆಡಾನ್ ಬೆಲೆಯನ್ನು ರೂ.10,000ದಿಂದ ರೂ.15,000 ಏರಿಕೆ ಮಾಡಲಾಗಿದೆ. ಇಷ್ಟೇಅಲ್ಲದೆ, ಟಾಟಾ ಮೋಟಾರ್ಸ್ ಮುಂಬರುವ ದಿನಗಳಲ್ಲಿ ಪಂಚ್, ಆಲ್ಟ್ರೋಜ್ CNG ಆವೃತ್ತಿಗಳನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ.

ದೇಶೀಯ ಮಾರುಕಟ್ಟೆಯಲ್ಲಿ ಟಿಯಾಗೊ ಕಾರು ರೂ.5.53 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಟಿಗೂರ್ ಸೆಡಾನ್ ರೂ.6.20 ಲಕ್ಷದಿಂದ ರೂ. 8.90 ಲಕ್ಷ ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಒಟ್ಟಾರೆಯಾಗಿ ತನ್ನ ವಿವಿಧ ಎಂಟ್ರಿ ಲೆವೆಲ್ ಮಾದರಿಗಳನ್ನು ನವೀಕರಿಸಿದ ಹಿನ್ನೆಲೆ, ಟಾಟಾ ಮೋಟಾರ್ಸ್ ಈ ಬೆಲೆ ಏರಿಕೆ ಮಾಡಿದೆ ಎಂದು ಹೇಳಲಾಗಿದೆ.

• ಟಾಟಾ ಮೋಟಾರ್ಸ್ ಮಾರಾಟ ಮಾಡುವ ಮತ್ತೊಂದು ಕಾರು, ಆಲ್ಟ್ರೋಜ್ ಪೆಟ್ರೋಲ್ ಆವೃತ್ತಿಗಳ ಬೆಲೆಯನ್ನು ರೂ.10,000 ಹೆಚ್ಚಳ ಮಾಡಲಾಗಿದೆ. ಅದೇ ರೀತಿಯಲ್ಲಿ ಡಿಸೇಲ್ ಆವೃತ್ತಿಗಳ ಬೆಲೆಯನ್ನು ಗರಿಷ್ಠ ಪ್ರಮಾಣದಲ್ಲಿ ಏರಿಕೆ ಮಾಡಿದ್ದು, ರೂ.15,000 ಹೆಚ್ಚಳವಾಗಿದೆ. ಟರ್ಬೊ ಪೆಟ್ರೋಲ್ ಆವೃತ್ತಿಗಳ ಬೆಲೆಯು ರೂ.5,000ದಿಂದ ರೂ.15,000 ಏರಿಕೆಯಾಗಿದ್ದು, ಈ ಕಾರು ರೂ.6.45 ದಿಂದ ರೂ.10.40 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಟಾಟಾ ಆಲ್ಟ್ರೋಜ್ ಕಾರಿನ ಎಂಜಿನ್ ಇದು 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 86 PS ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 110 PS ಪವರ್ 140 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 1.5-ಲೀಟರ್ ಡೀಸೆಲ್ ಎಂಜಿನ್ 90 PS ಗರಿಷ್ಠ ಪವರ್ ಹಾಗೂ 200 Nm ಪೀಕ್ ಉತ್ಪಾದಿಸಲಿದ್ದು, 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಹೊಂದಿದೆ.

ಇದು ಟಾಟಾದ ಅನೇಕ ಗ್ರಾಹಕರ ಮೇಲೆ ಪರಿಣಾಮ ಬೀರಬಹುದು. ಹೊಸ ನಿಯಮಗಳು ಜಾರಿಗೆ ಬಂದ ನಂತರ, ಕಾರು ತಯಾರಕರು ಕಡಿಮೆ ಹೊರಸೂಸುವಿಕೆಗೆ ಎಂಜಿನ್‌ಗಳನ್ನು ನವೀಕರಿಸಬೇಕಾಗುತ್ತದೆ. ಆದರೆ ಇದು ತುಂಬಾ ದುಬಾರಿ ಪ್ರಕ್ರಿಯೆ. ಇದರೊಂದಿಗೆ ಡೀಸೆಲ್ ಕಂಪನಿಗಳು ಕಾರುಗಳ ಉತ್ಪಾದನೆಯನ್ನು ನಿಲ್ಲಿಸುವ ಸಾಧ್ಯತೆ ಇದೆ .

Leave A Reply

Your email address will not be published.