Tech Tips: ನಿಮ್ಮ ಫೋನ್​ನಲ್ಲಿರುವ ಡಿಸ್ ಪ್ಲೇಯನ್ನು ಈ ರೀತಿ ಉಪಯೋಗಿಸಿ!

Split Screen Mode: ತಂತ್ರಜ್ಞಾನ (Technogy) ಮುಂದುವರಿದಂತೆ ಜಗತ್ತಿನ ಆಗು-ಹೋಗುಗಳು ಬದಲಾಗುತ್ತಿವೆ. ಸದ್ಯ ಮಾರುಕಟ್ಟೆಯಲ್ಲಿ (market) ವಿಭಿನ್ನ ವಿನ್ಯಾಸದ ಸಾಧನಗಳು (device)ಎಂಟ್ರಿ ಕೊಡುತ್ತಿವೆ. ಅದರಲ್ಲೂ ಸ್ಮಾರ್ಟ್ ಫೋನ್ ಗೆ ಸಂಬಂಧಿಸಿದಂತೆ ಒಂದಲ್ಲ ಒಂದು ಅಪ್ಡೇಟ್ ಗಳು ಇದ್ದೇ ಇರುತ್ತವೆ. ಅದರಲ್ಲಿ ಮಲ್ಟಿಟಾಸ್ಕ್‌ ನಿರ್ವಹಿಸಲು ಬಳಸುವ ಸ್ಪ್ಲಿಟ್ ಸ್ಕ್ರೀನ್ ಮೋಡ್ (Split Screen Mode) ಕೂಡ ಒಂದಾಗಿದ್ದು, ಇದಕ್ಕೆ ಜನರು ಆಕರ್ಷಿತರಾಗಿ, ಬಳಕೆಯೂ ಮಾಡುತ್ತಿದ್ದಾರೆ.

ಸ್ಪ್ಲಿಟ್ ಸ್ಕ್ರೀನ್ ಮೋಡ್ ಸೌಲಭ್ಯದಲ್ಲಿ ಬಳಕೆದಾರರು ಏಕಕಾಲದಲ್ಲಿ ಸ್ಮಾರ್ಟ್‌ಫೋನಿನಲ್ಲಿ ಎರಡು ಆ್ಯಪ್​ಗಳನ್ನು ಬಳಸಬಹುದಾಗಿದೆ. ಹಾಗಾದ್ರೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ(Android smartphone) ಸ್ಪ್ಲಿಟ್‌ ಸ್ಕ್ರೀನ್ ಮೋಡ್  ಬಳಸೋದು ಹೇಗೆ? ಇಲ್ಲಿದೆ ಇದರ ಸಂಪೂರ್ಣ ವಿವರ.

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿನ ಹಲವು ಫೀಚರ್ಸ್ ಗಳಲ್ಲಿ Split Screen Mode ಫೀಚರ್ ಕೂಡ ಒಂದಾಗಿದ್ದು, ಇದರಿಂದ ಸ್ಮಾರ್ಟ್ ಫೋನ್ (Smartphone) ಬಳಕೆದಾರರು ಏಕಕಾಲದಲ್ಲಿ ಎರಡು ಆ್ಯಪ್​ಗಳನ್ನು (app) ಬಳಸಬಹುದಾಗಿದೆ. ಅಂದ್ರೆ ಬಳಕೆದಾರರು ಇನ್ಸ್ಟಾಗ್ರಾಮ್ (Instagram) ನಲ್ಲಿ ವಿಡಿಯೋ ನೋಡುತ್ತಿದ್ದ ಹಾಗೆ, ವಾಟ್ಸಪ್ ನಲ್ಲಿ (WhatsApp) ಚಾಟ್ ಕೂಡ ಮಾಡಬಹುದು. ಈ ಫೀಚರ್(feature) ಅಂತು ಬಳಕೆದಾರರಿಗೆ ತುಂಬಾನೇ ಅನುಕೂಲಕರವಾಗಿದೆ.

ಸ್ಪ್ಲಿಟ್ ಸ್ಕ್ರೀನ್ ಮೋಡ್ ಬಳಸುವುದು ಹೇಗೆ?

• ಸ್ಪ್ಲಿಟ್ ಸ್ಕ್ರೀನ್ ಮೋಡ್ (Split Screen Mode) ಸೆಟ್‌ ಮಾಡಲು ಮೊದಲು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ ಹೋಮ್‌ ಸ್ಕ್ರೀನ್‌ ನ ಕೆಳಗಿನ ಎಡ ಭಾಗದಲ್ಲಿರುವ ರೀಸೆಂಟ್‌ ಅಪ್ಲಿಕೇಶನ್‌ಗಳ ಬಟನ್ ಅನ್ನು ಟ್ಯಾಪ್ ಮಾಡಿ. ಆಗ ಅಲ್ಲಿ ನೀವು ಇತ್ತೀಚೆಗೆ ತೆರೆದ ಎಲ್ಲಾ ಅಪ್ಲಿಕೇಶನ್‌ಗಳ ಕ್ಯಾಸ್ಕೇಡಿಂಗ್ ಮೆನು ನೋಡುತ್ತೀರಿ. ನಂತರ ಬಲ ಭಾಗದ ಮೇಲ್ಭಾಗದಲ್ಲಿರುವ ಮೂರು ಡಾಟ್ ಬಟನ್ ಅನ್ನು ಇತ್ತಿರಿ, ಬಳಿಕ ಸೆಟ್ಟಿಂಗ್ ಆಯ್ಕೆ ಸೆಲೆಕ್ಟ್ ಮಾಡಿ, ಅಲ್ಲಿ ಕಾಣಿಸುವ ಸ್ಪ್ಲಿಟ್ ಸ್ಕ್ರೀನ್ ಮೋಡ್‌ ಆಯ್ಕೆಯನ್ನು ಆನ್ ಮಾಡಿ. ಇಷ್ಟೇ ಇದಾದ ಬಳಿಕ ನೀವು ಏಕಕಾಲದಲ್ಲಿ ಎರಡು ಅಪ್ಲಿಕೇಶನ್ ಬಳಸಲು ಸಾಧ್ಯವಾಗುತ್ತದೆ.

• ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ ಹೋಮ್‌ ಸ್ಕ್ರೀನ್‌ ನ ಮಧ್ಯ ಬಟನ್‌ ಟ್ಯಾಪ್ ಮಾಡಿ, ಆಗ ನೀವು ಇತ್ತೀಚಿಗೆ ತೆರೆದ ಆ್ಯಪ್ಸ್‌ ಲಿಸ್ಟ್‌ ಕಾಣಿಸುತ್ತವೆ. ಅವುಗಳಲ್ಲಿ ನೀವು ಯಾವ ಆಪ್ ಸ್ಪ್ಲಿಟ್ ಸ್ಕ್ರೀನ್ ಮೋಡ್‌ ಮಾಡಬೇಕೆಂದಿದ್ದಿರೋ ಆ ಆ್ಯಪ್ ಅನ್ನು ಟ್ಯಾಪ್ ಮಾಡಿ. ಆಗ ನೀವು ಟ್ಯಾಪ್ ಮಾಡಿದ ಆ್ಯಪ್ ನಿಮಗೆ ಸ್ಪ್ಲಿಟ್ ಸ್ಕ್ರೀನ್ ವ್ಯೂ ಕಾಣಿಸುತ್ತದೆ. ಒಂದು ವೇಳೆ ಈ ಆಯ್ಕೆ ಇಲ್ಲ ಎಂದಾದರೆ ಮೆನುವಿಗೆ ಹೋಗಿ ಸೆಟ್ಟಿಂಗ್ಸ್​ ಆಯ್ಕೆ ಮಾಡಿ, ಅದರಲ್ಲಿ ಸ್ಪ್ಲಿಟ್ ಸ್ಕ್ರೀನ್ ಸರ್ಚ್ ಮಾಡಿದರೆ ಸಿಗುತ್ತದೆ.

Leave A Reply

Your email address will not be published.