Vastu Tips : ನಿಮ್ಮ ಅಡುಗೆ ಮನೆ ಈ ರೀತಿ ಇದ್ದರೆ, ನಿಮಗೆ ನೆಮ್ಮದಿ ಖಂಡಿತ!

Kitchen Vastu tips: ಮನೆಯ ಒಳಾಂಗಣ ಹಾಗೂ ಹೊರಗಿನ ಪರಿಸರ ನೋಡುವವರಿಗೆ ಆಕರ್ಷಕವಾಗಿ ಸ್ವಚ್ಚವಾಗಿ ಕಾಣಬೇಕು ಎಂದು ಪ್ರತಿಯೊಬ್ಬರು ಬಯಸುತ್ತಾರೆ. ಅದರಲ್ಲಿಯೂ ಮನೆ ಒಳ ಹೊಕ್ಕರೆ ನೋಡುಗರು ಮೆಚ್ಚುಗೆ ವ್ಯಕ್ತಪಡಿಸುವಂತೆ ಸುಂದರವಾಗಿ ಕಾಣಲು ಮನೆಯ ಗೃಹಿಣಿ ನಾನಾ ಸರ್ಕಸ್ ಮಾಡೋದು ಕಾಮನ್. ಅದರಲ್ಲಿಯೂ ಎಲ್ಲರೂ ಊಟ, ತಿಂಡಿ ಎಂದು ಸೇರುವ ಜಾಗ ಅಡುಗೆ ಮನೆ. ಇಲ್ಲಿ ಶುಚಿತ್ವ ಕಾಯ್ದುಕೊಂಡರೆ ಅಡುಗೆ ಕೂಡ ಶುಚಿ ರುಚಿಯಾಗಿ ಎಲ್ಲ ಮೆಚ್ಚಿಕೊಂಡು ಸೇವಿಸುವಂತೆ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಲು ನೆರವಾಗುತ್ತದೆ.

 

ನಾವು ಸಹಜವಾಗಿ ಮನೆಯಲ್ಲಿ ಶಾಂತಿ, ನೆಮ್ಮದಿ, ಅದೃಷ್ಟ(Luck) ಸಮೃದ್ಧಿಯಾಗಲಿ ಎಂದು ನಾನಾ ಬಗೆಯ ಪೂಜೆ (Pooja)ಪುನಸ್ಕಾರಗಳನ್ನ ಮಾಡಿ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು (Negative Energy)ಭಾವನೆಗಳು ಕಡಿಮೆಯಾಗಿ, ಸಕರಾತ್ಮಕತೆ (Postive Imapact)ವೃದ್ದಿಯಗಬೇಕೆಂದು ಬಯಸುವುದಲ್ಲದೆ ಅದಕ್ಕಾಗಿ ವಾಸ್ತು ಪ್ರಕಾರ ಕೆಲ ಸಲಹೆಗಳನ್ನು ಕೇಳುವುದುಂಟು. ಮನೆಯಲ್ಲಿ ವಾಸ್ತು ಗಿಡ, ತುಳಸಿ,ಮನಿ ಪ್ಲಾಂಟ್ (money plant) ಹೀಗೆ ವಿಭಿನ್ನ ತಂತ್ರಗಳನ್ನು ಬಳಸುವುದು ವಾಡಿಕೆ.

 

ಪ್ರತಿ ಶುಭಕಾರ್ಯದಲ್ಲಿಯೂ ಭವಿಷ್ಯ ಕೇಳುವಂತೆ ಮನೆ ಕಟ್ಟುವಾಗ ಕೂಡ ವಾಸ್ತು ಪ್ರಕಾರ ಪ್ರತಿ ಕೋಣೆಗಳ ರೂಪು ರೇಷೆಗಳನ್ನು ತಯಾರಿಸಿ ಕಟ್ಟುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಮನೆ ಕೇವಲ ಶುಚಿಯಾಗಿದ್ದರೆ ಸಾಕೇ??ಇಲ್ಲ ಅಡುಗೆ ಮನೆ ಹಾಗೂ ಇನ್ನಿತರ ಕೋಣೆಗಳು ಅಂದರೆ ಪೂಜಾ ಸ್ಥಳ, ಮಲಗುವ ಕೋಣೆ, ಸ್ನಾನಗೃಹ ಸ್ವಚ್ಛವಾಗಿರುವುದರ ಜೊತೆಗೆ  ಅಡುಗೆ ವಾಸ್ತು ಪ್ರಕಾರ( Kitchen Vastu Tips) ಕೂಡ ಇರಬೇಕಾಗಿದ್ದು, ಪ್ರತಿ ಕೋಣೆಗು ವಾಸ್ತು ನಿಯಮಗಳು ಅನ್ವಯವಾಗುತ್ತದೆ. ಆದರೆ, ಇಲ್ಲಿ ಗಮನಿಸಬೇಕಾದ ಬಹು ಮುಖ್ಯ ವಿಚಾರ ಏನಪ್ಪಾ ಅಂದರೆ, ಅಡುಗೆ ಮನೆಯಲ್ಲಿ ಪಂಚಭೂತಗಳಿಗೆ ಮಹತ್ವವಾದ ಸ್ಥಾನವನ್ನುನೀಡುವ ಹಿನ್ನೆಲೆ ವಾಸ್ತು ಪ್ರಕಾರದ ಅನುಸಾರ ಅಡುಗೆ ಕೋಣೆ ಮನೆಯವರ ಆರೋಗ್ಯ ಶಾಂತಿ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ನಂಬಿಕೆ ಇದೆ. ನಮಗೆ ಒಳ್ಳೆಯ ಆರೋಗ್ಯ(Health) ಪಡೆಯುವುದಕ್ಕಾಗಿ ಪೌಷ್ಟಿಾಂಶಯುಕ್ತ ಆಹಾರ (Food) ಸೇವನೆ ಮಾಡುತ್ತೇವೆಯೋ ಅದೇ ರೀತಿಯಲ್ಲಿ ವಾಸ್ತು ಶಾಸ್ತ್ರದ ನಿಯಮಗಳ ಪಾಲನೆ ಕೂಡ ಅವಶ್ಯಕವಾಗುತ್ತದೆ. ಈಗ, ನಿಮ್ಮ ಮನಸಲ್ಲಿ ಅಡುಗೆ ಕೋಣೆ ವಾಸ್ತು ಪ್ರಕಾರ ಹೇಗಿರಬೇಕು ಎಂಬ ಪ್ರಶ್ನೆ ಸಹಜವಾಗಿ ಮೂಡಿರಬಹುದು.ಅದಕ್ಕೆ ಉತ್ತರ ನಾವು ಹೇಳ್ತೀವಿ ಕೇಳಿ!

 

ವಾಸ್ತು ಪ್ರಕಾರ ಅಡುಗೆ ಕೋಣೆ ಹೇಗಿರಬೇಕು?

ಅಡುಗೆ ಮನೆಯ ಚಪ್ಪಡಿ ಕಲ್ಲು ಹಸಿರು ಬಣ್ಣದಲ್ಲಿ ಇದ್ದರೆ ಗಾಳಿಯ ಅಂಶವನ್ನು ಸಮತೋಲನ ಗೊಳಿಸುವಲ್ಲಿ ನೆರವಾಗುತ್ತದೆ. ಇದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದಾಗಿದೆ. ಮಣ್ಣಿನ ಪಾತ್ರೆಗಳು ಭೂಮಿಯ ಅಂಶವಾಗಿದ್ದು, ಹೀಗಾಗಿ ಅಡುಗೆ ಮನೆಯಲ್ಲಿ ಮಣ್ಣಿನ ವಸ್ತುಗಳನ್ನು ನೈಋತ್ಯ ದಿಕ್ಕಿನಲ್ಲಿರಿಸಿದರೆ ಒಳ್ಳೆಯದು.

 

ಅಡುಗೆ ಮನೆಯ ಮಧ್ಯದಲ್ಲಿ ಡೈನಿಂಗ್‌ ಟೇಬಲ್‌ ಇರಿಸದಿರುವುದು ಉತ್ತಮ. ಅಡುಗೆ ಕೋಣೆಯೆಂದರೆ ಎಲ್ಲರೂ ಒಟ್ಟಿಗೆ ಸೇವಿಸುವ ಡೈನಿಂಗ್‌ ಟೇಬಲ್‌ ವಾಯುವ್ಯ ಸ್ಥಳದಲ್ಲಿಟ್ಟರೆ ಒಳ್ಳೆಯದು. ಅಡುಗೆ ಮನೆಯಲ್ಲಿ ಸಿಂಕ್‌ ಮತ್ತು ಅಡುಗೆ ಅನಿಲವನ್ನು ಪರಸ್ಪರ ವಿರುದ್ಧದಲ್ಲಿ ಇರದಂತೆ ನೋಡಿಕೊಳ್ಳಿ. ಈ ಎರಡು ವಿಷಯಗಳ ನಡುವೆ ಹೆಚ್ಚಿನ ಅಂತರ ಕಾಯ್ದುಕೊಳ್ಳಬೇಕು. ಒಂದು ವೇಳೆ, ಎರಡು ಸಾಧನಗಳು ಒಟ್ಟಿಗೆ ಇದ್ದರೆ ಮಧ್ಯದಲ್ಲಿ ಲ್ಯಾಬರೈಟ್ ಇಡಬೇಕಾಗುತ್ತದೆ.

 

ಅಡುಗೆ ಮನೆಯಲ್ಲಿ ದೇವರ ಫೋಟೋ ಇಡುವುದು ಅಥವಾ ಪೂಜಾ ಸ್ಥಳದ ರೀತಿ ಮಾರ್ಪಾಡು ಮಾಡುವುದು ಒಳ್ಳೆಯದಲ್ಲ. ಅಡುಗೆ ಮನೆಯಲ್ಲಿ ಮೈಕ್ರೋವೇವ್ ಅಥವಾ ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಒಳಗೊಂಡಿದ್ದು ಅವುಗಳನ್ನು ಅಡುಗೆಮನೆಯ ದಕ್ಷಿಣ ದಿಕ್ಕಿನಲ್ಲಿ ಇರಿಸಿ. ದಕ್ಷಿಣ ದಿಕ್ಕಿನಲ್ಲಿ ಇರಿಸುವುದರಿಂದ ಇವುಗಳ ಬಾಳಿಕೆ ಹೆಚ್ಚು ಕಾಲ ಬರುತ್ತದೆ. ಸಾಮಾನ್ಯವಾಗಿ ಮನೆಗೆ ಯಾವುದೇ ಉಪಕರಣ ತಂದಾಗ ಫ್ರಿಡ್ಜ್, ಟಿವಿ, ಸೋಫಾ ಹೀಗೆ ಎಲ್ಲಿ ಆ ಸಾಧನಗಳನ್ನು ಇಡಲು ಜಾಗವಿದೆಯೋ ಅಲ್ಲೇ ಇಡೋದು ಹೆಚ್ಚಿನವರು ರೂಢಿಸಿಕೊಂಡ ಅಭ್ಯಾಸ. ಅಡುಗೆ ಮನೆಯಲ್ಲಿ ಫ್ರಿಡ್ಜ್‌ ಅನ್ನು ಪಶ್ಚಿಮ ದಿಕ್ಕಿನಲ್ಲಿ ಇಟ್ಟರೆ ಉತ್ತಮವೆಂದು ವಾಸ್ತು ಶಾಸ್ತ್ರದ ಪ್ರಕಾರ ಹೇಳಲಾಗುತ್ತದೆ.

 

ಉತ್ತರ ದಿಕ್ಕನ್ನು ನೀರಿನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಕುಡಿಯುವ ನೀರನ್ನು ಉತ್ತರ ದಿಕ್ಕಿನಲ್ಲೇ ಇರಿಸಬೇಕಾಗುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯು ಪೂರ್ವ ಮತ್ತು ಆಗ್ನೇಯ ದಿಕ್ಕಿನಲ್ಲಿದ್ದರೆ ಹೆಚ್ಚು ಪ್ರಯೋಜನಕಾರಿ.ನೀರನ್ನು ತುಂಬುವ ಪಾತ್ರೆಗಳು, ಯಾವಾಗಲೂ ಸ್ವಚ್ಛವಾಗಿರಬೇಕಾಗಿದ್ದು, ಸಿಂಕ್‌ ಅನ್ನು ಈಶಾನ್ಯ ದಿಕ್ಕಿನಲ್ಲೂ ಇಡಬಹುದು.ಸಿಂಕ್‌ ಅನ್ನು ಸಹ ಇದೇ ದಿಕ್ಕಿನಲ್ಲಿ ಇಡಬಹುದು. ಅಡುಗೆ ಮಾಡುವವರು ಅಡುಗೆ ಮಾಡುವ ಸಂದರ್ಭದಲ್ಲಿ ಗ್ಯಾಸ್‌ ಸ್ಟೋವ್‌ ಅನ್ನು ಪೂರ್ವ ದಿಕ್ಕಿಗೆ ಅಭಿಮುಖವಾಗಿ ಇರಿಸಿ ನಿಂತು ಅಡುಗೆ ಪ್ರಕ್ರಿಯೆ ಮಾಡುವ ಹಾಗೆ ನೋಡಿಕೊಳ್ಳಬೇಕು

Leave A Reply

Your email address will not be published.