Japan: ಜಪಾನ್ನಲ್ಲಿ 7 ಸಾವಿರ ಹೊಸ ದ್ವೀಪಗಳು ಪತ್ತೆ; ಏನಿದು ಹೊಸ ಅಚ್ಚರಿಯ ವಿಷಯ?
Japan: ಜಪಾನ್ ದೇಶ ಸುಮಾರು 2,34,964 ಚದರ ಕಿಮೀ ಭೌಗೋಳಿಕ ವಿಸ್ತೀರ್ಣ ಇರುವ ಪ್ರದೇಶ. ಜಪಾನ್ ಪೂರ್ವ ಏಷ್ಯ ಖಂಡದ ಒಂದು ದ್ವೀಪ ದೇಶ ಆಗಿದೆ. ಇದು ಪೆಸಿಫಿಕ್ ಮಹಾಸಾಗರದ ಸುಮಾರು 3000 ನಡುಗಡ್ಡೆಗಳ ಸಮೂಹವಾಗಿದೆ.12 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿದ ದೇಶವಾಗಿದೆ. ವಿಶೇಷವೆಂದರೆ ಈಗಾಗಲೇ ದೇಶದಲ್ಲಿ ಕಳೆದ ವರ್ಷದಿಂದ ನಡೆಸಿದ ಭೌಗೋಳಿಕ ಸಮೀಕ್ಷೆಯಲ್ಲಿ 7 ಸಾವಿರ ಹೊಸ ದ್ವೀಪಗಳು ಸಿಕ್ಕಿವೆ. ಹೌದು ನಾವು ಕೆಲವೊಂದು ವಿಚಾರಗಳನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಸದ್ಯ ಜಪಾನ್ ದೇಶದ ಭೌಗೋಳಿಕ ವ್ಯಾಪ್ತಿಯಲ್ಲೇ ಸಿಕ್ಕಿರುವ ಐಲೆಂಡ್ಗಳು ಆಗಿದೆ . ಇದರ ಜೊತೆಗೆ ಜಪಾನ್ ದೇಶದಲ್ಲಿರುವ ದ್ವೀಪಗಳ ಸಂಖ್ಯೆ 14 ಸಾವಿರಕ್ಕೂ ಹೆಚ್ಚಾಗಿದೆ.
ಸದ್ಯ ಒಂದಲ್ಲಾ ಎರಡಲ್ಲ ಜಪಾನ್ (Japan) ದೇಶದ ಭೌಗೋಳಿಕ ವ್ಯಾಪ್ತಿಯಲ್ಲಿ ಬರೋಬ್ಬರಿ ಹೊಸ 7 ಸಾವಿರ ದ್ವೀಪಗಳು ಪತ್ತೆಯಾಗಿವೆ. ಈ ದೇಶದಲ್ಲಿ (Japan) ಬಹಳ ಅಚ್ಚರಿ ಮೂಡಿಸುವ ಬೆಳವಣಿಗೆಯಾಗಿದೆ. ಜಪಾನ್ ದೇಶದಲ್ಲಿ ನಡೆದ ಭೌಗೋಳಿಕ ಸಮೀಕ್ಷೆಯಲ್ಲಿ (Geographical Survey) ಈ ಅಚ್ಚರಿ ಸಿಕ್ಕಿದೆ.
ಸುಮಾರು 1987ರ ನಂತರ ಜಪಾನ್ ಸರ್ಕಾರ ನಡೆಸಿದ ಮೊದಲ ಭೌಗೋಳಿಕ ಸಮೀಕ್ಷೆ ಯಲ್ಲಿ ಈ ಮಾಹಿತಿ ದೊರೆತಿದ್ದು ಜಪಾನ್ನಲ್ಲಿ ಈ ಮೊದಲೇ ಇದ್ದ ದ್ವೀಪಗಳ ಸಂಖ್ಯೆ 6,852. ಈಗ ಪತ್ತೆಯಾಗಿರುವ ದ್ವೀಪಗಳನ್ನು ಲೆಕ್ಕ ಹಾಕಿದರೆ ಆ ದೇಶದಲ್ಲಿ 14 ಸಾವಿರಕ್ಕೂ ಹೆಚ್ಚು ದ್ವೀಪಗಳಾಗುತ್ತದೆ.
1987ರ ನಂತರ ಇಲ್ಲಿ ಭೌಗೋಲಿಕ ಸಮೀಕ್ಷೆ ಆಗಿಲ್ಲದಿರುವುದರಿಂದ ವರ್ಷದ ಹಿಂದೆ ಇಲ್ಲಿನ ಸಂಸತ್ನಲ್ಲಿ ಈ ಬಗ್ಗೆ ಚರ್ಚೆಯಾದ ಕಾರಣ
ಅದರಂತೆ ಜಪಾನ್ನ ಜಿಯೋಸ್ಟಾಷಿಯಲ್ ಇನ್ಫಾರ್ಮೇಷನ್ ಅಥಾರಿಟಿ (Geospatial Information Authority of Japan) ಹೊಸದಾಗಿ ಭೌಗೋಳಿಕ ಸಮೀಕ್ಷೆ ನಡೆಸಿತು. ಅಧ್ಯಯನ ಸಂಧರ್ಭ 7 ಸಾವಿರ ಹೊಸ ದ್ವೀಪಗಳು ಜಪಾನ್ ವ್ಯಾಪ್ತಿಯಲ್ಲಿ ಇರುವುದು ತಿಳಿದು ಬಂದಿದೆ.
ಗಮನಿಸಬೇಕಾದ ಸಂಗತಿ ಎಂದರೆ ಹೊಸದಾಗಿ 7 ಸಾವಿರ ದ್ವೀಪಗಳು ಸಿಕ್ಕಿರುವುದರಿಂದ ಜಪಾನ್ನ ಭೂಪ್ರದೇಶಗಳು ಹೆಚ್ಚಾದಂತಾಗುವುದಿಲ್ಲ. ಆದರೆ, ಒಟ್ಟಾರೆ ಭೂಭಾಗದ ವ್ಯಾಪ್ತಿಯಲ್ಲಿ ಏನೇನಿವೆ ಎಂಬ ನಿಖರ ಮಾಹಿತಿ ಸಿಕ್ಕಂತಾಗುತ್ತದೆ. ಕಂಪ್ಯೂಟರ್ ಆಧರಿತ ಎಲೆಕ್ಟ್ರಾನಿಕ್ ಲ್ಯಾಂಡ್ ಮ್ಯಾಪ್ನ ಸಹಾಯದಿಂದ ಜಪಾನ್ ಸರ್ಕಾರ ಶೀಘ್ರದಲ್ಲೇ ತನ್ನ ಭೂಪ್ರದೇಶದ ನಿಖರ ಅಂಕಿ ಅಂಶವನ್ನು ಬಿಡುಗಡೆ ಮಾಡಲಿದೆ ಎಂಬ ಮಾಹಿತಿ ದೊರೆತಿದೆ. ಅಲ್ಲದೆ ಹೆಚ್ಚಿನ ಅಧ್ಯಯನ ಇನ್ನು ಮುಂದೆ ಆಗಲಿದ್ದು ಸದ್ಯ ಹಲವಾರು ವಿಚಾರಗಳು ಬಯಲಾಗಲಿದೆ. ಒಟ್ಟಿನಲ್ಲಿ ಜಪಾನ್ ತನ್ನ ದ್ವೀಪಗಳ ಗೋಚರತೆಯಿಂದ ಎಲ್ಲರನ್ನು ಒಂದು ಸಾರಿ ತನ್ನತ್ತ ತಿರುಗುವಂತೆ ಮಾಡಿದೆ.