House Cleaning Tips: ನೆಲ ಒರೆಸುವ ನೀರಿಗೆ ಈ ವಸ್ತು ಬೆರೆಸಿ, ನೋಡಿ ಆಮೇಲೆ ಚಮತ್ಕಾರ ! ನಿಮ್ಮ ಮನೆ ಮಿಂಚುತ್ತೆ!

House Cleaning Tips: ಮನೆಯಲ್ಲಿನ ಹೆಂಗಸರಿಗೆ ಮನೆಯನ್ನು ಸ್ವಚ್ಛವಾಗಿರಿಸೋದು (House Cleaning) ಒಂದು ದೊಡ್ಡ ಹೊರೆಯೇ ಸರಿ. ಹೌದು, ಕೆಲವೊಂದು ವಸ್ತುಗಳು ಎಷ್ಟು ಕ್ಲೀನ್(clean) ಮಾಡಿದ್ರು ಕ್ಲೀನ್ ಆಗೋದೇ ಇಲ್ಲ. ಅದರಲ್ಲೂ ಮುಖ್ಯವಾಗಿ ಮನೆಯ ನೆಲ ಸ್ವಚ್ಛವಾಗಿರಬೇಕು. ಪ್ರತಿಯೊಬ್ಬರು ಮನೆಗೆ ಕಾಲಿಡೋವಾಗ ನೆಲ ನೋಡೇ ನೋಡುತ್ತಾರೆ. ಅದು ಸ್ವಚ್ಛವಾಗಿಲ್ಲ ಅಂದ್ರೆ ಹೇಗೆ ಅಲ್ವಾ!!. ನೆಲ ಸ್ವಚ್ಛವಾಗಿದ್ರೆ ಅರ್ಧ ಮನೆ ಸ್ವಚ್ಛವಾದ ಹಾಗೆ. ಹಾಗಾದ್ರೆ ಮನೆಯ ನೆಲವನ್ನು ಫಳಫಳ ಹೊಳೆಯುವಂತೆ ಮಾಡೋದು ಹೇಗೆ? ಇಲ್ಲಿದೆ ನೋಡಿ ಮನೆಯ ನೆಲ ಕ್ಲೀನ್ ಮಾಡಲು ಸಲಹೆಗಳು (House Cleaning Tips). ಜಸ್ಟ್, ನೆಲ ಒರೆಸುವ ನೀರಿಗೆ ಈ ವಸ್ತು ಬೆರೆಸಿದರೆ ಸಾಕು, ಆಮೇಲೆ ನೋಡಿ ನೆಲ ಹೇಗೆ ಹೊಳೆಯುತ್ತೆ ಅಂತಾ. ನಿಮಗೂ ಅಚ್ಚರಿ ಆಗಬಹುದು. ಅಷ್ಟು ಶುಭ್ರವಾಗುತ್ತೆ.

ಹಳದಿ ನೆಲದಿಂದ ಮನೆಯ ಹೆಂಗಸರು ಬೇಸತ್ತು ಹೋಗಿರುತ್ತಾರೆ. ಎಷ್ಟೇ ಕ್ಲಿನ್ ಮಾಡಿದ್ರು ನೆಲ ಬಿಳಿ ಬಣ್ಣ(White colour) ಅಥವಾ ಶುಭ್ರ ಬಣ್ಣಕ್ಕೆ ತಿರುಗೋದೇ ಇಲ್ಲ. ಇದಕ್ಕೆ ಪರಿಹಾರ ಇಲ್ಲಿದೆ. ಇದರಿಂದ ನಿಮ್ಮ ಮನೆಯ ನೆಲವನ್ನು ಬಿಳಿಯಾಗಿಸಬಹುದು. ಹಾಗೇ ಶುಭ್ರವಾಗಿ ಫಳಫಳ ಹೊಳೆಯುವಂತೆ ಮಾಡಬಹುದು. ಅದಕ್ಕೆ ಈ ವಿಧಾನ (method) ಅನುಸರಿಸಿ.

• ಒಂದು ಬಕೆಟ್ (Bucket) ನಲ್ಲಿ ಅರ್ಧದಷ್ಟು ನೀರು(Water) ತೆಗೆದುಕೊಳ್ಳಿ, ಅದಕ್ಕೆ ನಿಂಬೆ ರಸವನ್ನು ಮಿಶ್ರಣ ಮಾಡಿ. ನಂತರ ಅದರಿಂದ ನೆಲವನ್ನು ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ನೆಲ ಹೊಳೆಯುವುದರ ಜೊತೆಗೆ ಹಳದಿ ಬಣ್ಣವೂ ಮರೆಯಾಗುತ್ತದೆ.

• ಅಡಿಗೆ ಸೋಡಾದಿಂದ ಕೂಡ ನೆಲವನ್ನು ಸ್ವಚ್ಛಗೊಳಿಸಬಹುದು. ವಿಧಾನ ಇಲ್ಲಿದೆ ನೋಡಿ. ಒಂದು ಬಕೆಟ್ ನಲ್ಲಿ ನೀರು ತೆಗೆದುಕೊಳ್ಳಿ, ಅದಕ್ಕೆ ಅಡುಗೆ ಸೋಡಾದ ಪುಡಿಯನ್ನು ಬೆರೆಸಿ. ನಂತರ ಅದರಲ್ಲಿ ಹತ್ತಿ ಬಟ್ಟೆಯನ್ನು ಅದ್ದಿ, ನೆಲವನ್ನು ಸ್ವಚ್ಛಗೊಳಿಸಿ. ಇದರಿಂದ ನೆಲ ಬೇಗನೆ ಸ್ವಚ್ಛವಾಗುತ್ತದೆ. ಹಾಗೂ ಕಲೆಗಳೂ ಮಾಯವಾಗುತ್ತವೆ.

• ಒಂದು ಮಗ್ ನೀರಿನಲ್ಲಿ ಸೀಮೆಎಣ್ಣೆ ಬೆರೆಸಿ. ಮತ್ತು ಅದರಲ್ಲಿ ಹತ್ತಿ ಬಟ್ಟೆಯನ್ನು ನೆನೆಸಿಡಿ. ನಂತರ ನೆಲದ ಮೇಲಿರುವ ಕಲೆಗಳನ್ನು ಆ ಬಟ್ಟೆಯಿಂದ ಸ್ವಚ್ಛಗೊಳಿಸಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ನೆಲವನ್ನು ತೊಳೆಯಿರಿ. ಈ ರೀತಿ ಮಾಡೋದ್ರಿಂದ ನೆಲ ಶುಭ್ರವಾಗುತ್ತದೆ.

ಹಾಗೇ ನೀವು ನೆಲವನ್ನು ಸ್ವಚ್ಛಗೊಳಿಸುವಾಗ ರಬ್ಬರ್ ಕೈಗವಸುಗಳನ್ನು ಧರಿಸಿ. ಮತ್ತು ನೆಲವನ್ನು ದಪ್ಪ ಬಟ್ಟೆಯಿಂದ ಒರೆಸಿ. ಯಾಕಂದ್ರೆ ತೆಳುವಾದ ಬಟ್ಟೆ ಬೇಗನೆ ಹರಿದು ಹೋಗಬಹುದು. ಅಲ್ಲದೆ, ತೆಳು ಬಟ್ಟೆಯಿಂದ ಚೆನ್ನಾಗಿ ಸ್ವಚ್ಛವಾಗುವುದಿಲ್ಲ. ಈ ಎಲ್ಲಾ ಮಾಹಿತಿ ನೆನಪಿಟ್ಟುಕೊಂಡು, ಈ ಮೇಲಿನ ವಿಧಾನದಿಂದ ನೆಲ ಒರೆಸಿದರೆ, ನಿಮ್ಮ ಮನೆಯ ನೆಲ ಫಳಫಳ ಹೊಳೆಯುತ್ತದೆ.

Leave A Reply

Your email address will not be published.