Trendy News: ಫ್ಯಾಷನ್ ಯುಗದಲ್ಲಿ ಸಖತ್ ಟ್ರೆಂಡ್ ಆಗ್ತಿದೆ ಗೋಣಿಚೀಲದ ಪ್ಯಾಂಟ್! ಇದರ ಬೆಲೆ ಕೇಳಿದ್ರಂತೂ ನೀವು ಹೌಹಾರುತ್ತೀರ!
Burlap sack pant: ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಗೋಣಿಚೀಲ (burlap sack) ಇದ್ದೇ ಇರುತ್ತದೆ. ಕಾಲು ಒರೆಸಲು ಅಥವಾ ಏನಾದರೂ ತುಂಬಿಡಲು ನಾವು ಗೋಣಿ ಚೀಲಗಳನ್ನು ಬಳಸುತ್ತೇವೆ. ಈ ಗೋಣಿ ಚೀಲಗಳಿಗೆ ಅಬ್ಬಬ್ಬಾ ಅಂದರೆ ಎಷ್ಟು ಹಣವಿರಬಹುದು 10 ರೂ, 20 ರೂ, ಹೋಗಲಿ ಬಿಡಿ 50 ರಿಂದ 100 ರೂಪಾಯಿಗಳು ಇರಬಹುದು. ಆದರೆ ಇಲ್ಲೊಂದು ಗೋಣಿ ಚೀಲಕ್ಕೆ ಸುಮಾರು 60 ಸಾವಿರ ರೂಪಾಯಿಗಳು! ಅಂದರೆ ನೀವು ನಂಬ್ತೀರಾ? ಆದರಿದು ನಂಬಲೇ ಬೇಕಾದಂತಹ ವಿಚಾರ. ಹಾಗಿದ್ರೆ ಈ ಗೋಣಿ ಚೀಲಕ್ಕೆ ಯಾಕೆ ಇಷ್ಟೊಂದು ಬೆಲೆ? ಅದರಲ್ಲಿ ಏನಿದೆ ಅಂತಹ ವಿಶೇಷತೆ? ಎಂಬುದನ್ನು ತಿಳಿದುಕೊಳ್ಳುವ ಕುತೂಹಲವೇ? ಹಾಗಾದ್ರೆ ಈ ಸ್ಟೋರಿ ನೋಡಿ.
ಈಗಂತೂ ಇಡೀ ಜಗತ್ತು ಫ್ಯಾಷನ್ಮಯವಾಗಿಬಿಟ್ಟಿದೆ. ಅಲ್ಲದೆ ಈ ಫ್ಯಾಷನ್ ದಿನ ದಿನವೂ ಬದಲಾಗುತ್ತಲೂ ಇರುತ್ತದೆ. ಇಲ್ಲಿ ಉಪಯೋಗಕ್ಕೆ ಬಾರದ ಕಸದಿಂದಲೂ ಅದ್ಭುತ ಫ್ಯಾಷನ್(Fashion)ಸಿದ್ಧವಾಗುತ್ತದೆ. ಮೊದಲೆಲ್ಲ ಯಾರಾದರೂ ಬೇರೆಯವರಿಗಿಂತ ವಿಚಿತ್ರವಾಗಿ ಅಥವಾ ವಿಭಿನ್ನವಾಗಿ ಬಂದರೆ ಅವನನ್ನು ಹುಚ್ಚ ಎಂದೋ, ತಲೆ ಸರಿ ಇಲ್ಲ ಎಂದೋ ಹಂಗಿಸುತ್ತಿದ್ದರು. ಆದರೀಗ ಯಾರು ಏನೇ ಮಾಡಿದರೂ ಅದು ಫ್ಯಾಷನ್ ಎಂಬಂತಾಗಿದೆ. ಹರಿದ ಜೀನ್ಸ್ (Jeens)ಗಳು, ದೊಗಳೆ ಪ್ಯಾಂಟುಗಳು, ತೋಳು ಹರಿದ ಟಾಪ್‌ಗಳು, ಟ್ರಾನ್ಸ್‌ಪರೆಂಟ್(Transparent) ಸೀರೆ ಎಲ್ಲವೂ ಟ್ರೆಂಡೀ ಟ್ರೆಂಡೀ ಎಂದೇ ಕರೆಯಲ್ಪಡುತ್ತವೆ. ಮಾತ್ರವಲ್ಲ ಫ್ಯಾಷನ್ ಹೆಸರಲ್ಲಿ ಚಿತ್ರ-ವಿಚಿತ್ರ ಡ್ರೆಸ್‌ಗಳು ಮಾರುಕಟ್ಟೆಗೆ ಬರೋದನ್ನು ನಾವು ನೋಡಬಹುದು. ಇದೇ ರೀತಿ ಇತ್ತೀಚೆಗೊಂದು ವಿಚಿತ್ರವಾದ ಬಟ್ಟೆಯೊಂದು ಮಾರುಕಟ್ಟೆಗೆ ಬಂದಿದ್ದು ನೋಡಿದವರೆಲ್ಲ ಅಯ್ಯೋ ದೇವರೇ! ಇದೊಂದು ಬಟ್ಟೆನಾ ಎಂದು ಪ್ರಶ್ನಿಸುವಂತಹ ಪರಿಸ್ಥಿತಿ ಉಂಟಾಗಿದೆ.
ಹೌದು, ಇತ್ತೀಚೆಗಷ್ಟೇ ಹೊಸ ಟ್ರೆಂಡಿಂಗ್ ಔಟ್ ಫಿಟ್ (Trending out Fit) ಮಾರುಕಟ್ಟೆಗೆ ಬಂದಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಈ ಫ್ಯಾಶನ್ ಡ್ರೆಸ್‌ನ ಬೆಲೆ ಕೂಡ ಬೆಚ್ಚಿ ಬೀಳುವಂತಿದೆ. ಯಾಕೆಂದರೆ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿರೋ ಈ ಫೋಟೋ, ವಿಡಿಯೋ, ಗೋಣಿಚೀಲದಿಂದ ಮಾಡಿರೋ ಪ್ಯಾಂಟ್ (Burlap sack pant) ! ಯಸ್ ನಾವು ಆರಂಭದಲ್ಲೇ ಹೇಳಿದಂತಹ 60,000 ರೂಪಾಯಿಯ ಗೋಣಿ ಚೀಲ ಇದೆ ನೋಡಿ. ಅದು ಕೂಡ ಧರಿಸುವ ಪ್ಯಾಂಟ್ ಆಗಿ ಪರಿವರ್ತಿತನೆಗೊಂಡ ಗೋಣಿಚೀಲ! ಹೊಸದಾಗಿ ಮಾರುಕಟ್ಟೆಗೆ ಬಂದಿರುವಂತಹ ವಸ್ತ್ರ ವಿನ್ಯಾಸ!
ಹೌದು, ನಾವು ಮನೆಯಲ್ಲಿ ಏನಾದರೂ ತುಂಬಿಡಲು ಉಪಯೋಗಿಸುವ ಗೋಣಿಚೀಲಗಳನ್ನು ಈಗ ಡ್ರೆಸ್ ಮಾಡಲು ಬಳಸಲಾಗುತ್ತಿದೆ. ನೀವೂ ಕೂಡ ಈ ಹೊಸ ಟ್ರೆಂಡ್ ಅಳವಡಿಸಿಕೊಳ್ಳಬೇಕೆಂದರೆ ಗೋಣಿಚೀಲ ಹಾಕಿಕೊಂಡು ತಿರುಗಾಡಬೇಕಾಗುತ್ತದೆ. ಸದ್ಯ ಈ ಗೋಣಿಚೀಲದ ಪಲಾಝೋ ಪ್ಯಾಂಟ್(Flajo pant)ನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿವ ವೈರಲ್ ಆಗ್ತಿದೆ. ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಪಲಾಝೋ ಪ್ಯಾಂಟ್‌ನ ಬೆಲೆ ನೂರರಿಂದ ಆರಂಭವಾಗಿ ಎರಡು ಸಾವಿರ ರೂ. ವರೆಗೂ ಇರುತ್ತದೆ. ಆದರೆ ಈ ಗೋಣಿಚೀಲದ ಪ್ಯಾಂಟ್‌ನ ಬೆಲೆ ಬರೋಬ್ಬರಿ 60,000 ರೂ.! ಇದು ನಂಬಲು ಕಷ್ಟವೆನಿಸಿದರೂ ಸತ್ಯ!
ಸದ್ಯ ಸೋಷಿಯಲ್ನೀ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿರುವ ಈ ವಿಡಿಯೋವನ್ನು ‘ ನೀವು ಕೂಡ ಗೋಣಿಚೀಲದ ಈ ಪಲಾಝೋಗೆ 60,000 ರೂ. ಪಾವತಿಸುತ್ತೀರಾ? ಎಂಬ ತಮಾಷೆಯ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಕೆಲವೇ ಕ್ಷಣಗಳಲ್ಲಿ ಈ ವಿಡಿಯೋ ಕ್ಲಿಪ್ ವೈರಲ್ ಆಗಿದ್ದು, ಅನೇಕರು ಇದನ್ನು ಗೇಲಿ ಮಾಡಿದ್ದಾರೆ. ಮಾತ್ರವಲ್ಲ ನೆಟ್ಟಿಗರು ವೀಡಿಯೋಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು ನಮ್ಮ ಮನೆಯಲ್ಲಿ ಇಂಥಾ ಗೋಣಿಚೀಲ ತುಂಬಾ ಇದೆ, ಈಗ ನಮ್ಮ ಬಳಿಯೂ ತುಂಬಾ ಹಣವಿದ್ದಂತಾಯಿತು’ ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಇದು ನಿಜವಾದ ಮರುಬಳಕೆ’ ಎಂದು ಬರೆದಿದ್ದಾರೆ. ‘ಇದು ಉರ್ಫಿ(Urfi) ಫ್ಯಾಷನ್ ಗೋಲ್’ ಎಂದು ಮಗದೊಬ್ಬ ಕಾಮೆಂಟ್ ಮಾಡಿದ್ದಾರೆ. ಇನ್ನು ಹಲವು ಮಂದಿ ನಗುವ ಎಮೋಜಿಗಳೊಂದಿಗೆ ಕಾಮೆಂಟಿಸುತ್ತಿದ್ದಾರೆ.
ಫ್ಯಾಷನ್ ಪ್ರವೃತ್ತಿಗಳು ಬದಲಾಗುತ್ತಲೇ ಇರುತ್ತವೆ. ಹೊಸದು ಮಾರುಕಟ್ಟೆಗೆ ಬಂದ ತಕ್ಷಣ, ದೊಡ್ಡ ವಿನ್ಯಾಸಕರು ಅದರ ಮೇಲೆ ತಮ್ಮ ಟ್ಯಾಗ್ ಅನ್ನು ಹಾಕುತ್ತಾರೆ. ಸೆಲೆಬ್ರಿಟಿಗಳು(Celebrity)ಅದನ್ನು ಧರಿಸಲು ಪ್ರಾರಂಭಿಸುತ್ತಾರೆ ಮತ್ತು ಹೊಸ ಟ್ರೆಂಡ್ ಅನ್ನು ಪ್ರಚಾರ ಮಾಡುತ್ತಾರೆ, ಅದು ನಂತರ ಎಲ್ಲರ ಮೆಚ್ಚಿನ ಆಗುತ್ತದೆ. ನಂತರ ಪ್ರತಿಯೊಬ್ಬರೂ ಇತ್ತೀಚಿನ ಶೈಲಿಯೊಂದಿಗೆ ಟ್ಯೂನ್ ಆಗಿ ಉಳಿಯಲು ಅದನ್ನು ಅನುಸರಿಸಲು ಪ್ರಾರಂಭಿಸುತ್ತಾರೆ. ಅಂತೆಯೇ ಇದೀಗ ಫ್ಯಾಷನ್ ಹೆಸರಲ್ಲಿ ಗೋಣಿಚೀಲ ಸಹ ಟ್ರೆಂಡ್ ಆಗ್ತಿದ್ದು, ಜನರು ಹುಬ್ಬೇರಿಸುವಂತೆ ಮಾಡಿದೆ.