Best Smartphones: 25 ಸಾವಿರದೊಳಗೆ ದೊರೆಯುವ ಬೆಸ್ಟ್ ಸ್ಮಾರ್ಟ್ಫೋನ್ಗಳಿವು!
Best Smartphones: ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳ ಹವಾ ಹೆಚ್ಚಿದೆ. ವಿಭಿನ್ನ ವಿನ್ಯಾಸದ ಸ್ಮಾರ್ಟ್ ಫೋನ್ ಗಳು ದೇಶದ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಜನರು ಅದರ ಖರೀದಿಗೆ ಮುನ್ನುಗ್ಗುತ್ತಿದ್ದಾರೆ. ಆದರೆ ನಿಮಗೆ ತಿಳಿದಿದೆಯಾ ಬೆಸ್ಟ್ ಸ್ಮಾರ್ಟ್ಫೋನ್ಗಳು (smartphone) ಯಾವುದೆಲ್ಲಾ ಎಂದು? ಅದರ ಮಾಹಿತಿ ಇಲ್ಲಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ 25 ಸಾವಿರದ ಒಳಗಿನ ಬೆಸ್ಟ್ ಸ್ಮಾರ್ಟ್ಫೋನ್ಗಳ (best smartphones) ಪಟ್ಟಿ ಇಲ್ಲಿದೆ.
ರಿಯಲ್‌ಮಿ 10 ಪ್ರೊ ಪ್ಲಸ್ 5G (Realme 10 pro plus 5G): ರಿಯಲ್‌ಮಿ ಬ್ರ್ಯಾಂಡ್ ನ ಸ್ಮಾರ್ಟ್ ಫೋನ್ ಗಳು ಸಾಕಷ್ಟು ಜನಪ್ರಿಯತೆ ಪಡೆದಿರುವಂತದ್ದಾಗಿದೆ. ಇದೀಗ ಈ ಸ್ಮಾರ್ಟ್ ಫೋನ್ (smartphone) 25 ಸಾವಿರದ ಒಳಗಿನ ಬೆಸ್ಟ್ ಸ್ಮಾರ್ಟ್ಫೋನ್ಗಳಲ್ಲಿ ಒಂದಾಗಿದೆ. ಈ ಫೋನ್ 6.7 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, 120Hz ರಿಫ್ರೆಶ್ ರೇಟ್ ನೀಡಲಿದೆ. 6ಜಿಬಿ ರ್‍ಯಾಮ್ ಹಾಗೂ 128ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯ ಪಡೆದಿದ್ದು, ಬಲಿಷ್ಟವಾದ ಮೀಡಿಯಾ ಟೆಕ್ ಡೈಮೆನ್ಸಿಟಿ 1080 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.
ಅಲ್ಲದೆ, ಈ ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ನೊಂದಿಗೆ 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಹಾಗೂ 2ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಅನ್ನು ಒಳಗೊಂಡಿದೆ. 5,000mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 66W ನ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ನೀಡುತ್ತದೆ. ಸದ್ಯ ಈ ಫೋನ್ ನ ಬೆಲೆ 24,999 ರೂಪಾಯಿ ಆಗಿದೆ.
ಐಕ್ಯೂ Z6 ಪ್ರೋ : ಈ ಸ್ಮಾರ್ಟ್ ಫೋನ್ 6.44 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್ ರೇಟ್ ನೀಡಲಿದೆ. 1,300nits ಬ್ರೈಟ್‌ನೆಸ್ ಅನ್ನೂ ಪಡೆದಿದೆ ಈ ಫೋನ್. ಬಲಿಷ್ಟವಾದ ಸ್ನಾಪ್‌ಡ್ರಾಗನ್ 778ಜಿ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 6ಜಿಬಿ ರ್‍ಯಾಮ್ ಹಾಗೂ 128ಜಿಬಿ ಸಾಮರ್ಥ್ಯ ಪಡೆದಿದೆ. ಕ್ಯಾಮೆರಾದಲ್ಲಿ, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ನೊಂದಿಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದ್ದು, ಈ ಫೋನ್ 4700 mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ ಫ್ಲ್ಯಾಶ್ ಚಾರ್ಜಿಂಗ್ ಗೆ ಬೆಂಬಲ ಕೂಡ ಹೊಂದಿದೆ. ಸದ್ಯ ಈ ಸ್ಮಾರ್ಟೊ ಫೋನ್ ಬೆಲೆ 22,999 ರೂಪಾಯಿ ಆಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ F62(samsung galaxyF62) : ಈ ಫೋನ್ 6.7 ಇಂಚಿನ ಸೂಪರ್ ಅಮೋಲೆಡ್ ಪ್ಲಸ್ ಡಿಸ್‌ಪ್ಲೇ ಹೊಂದಿದ್ದು, 60 Hz ರಿಫ್ರೆಶ್ ರೇಟ್ ನೀಡಲಿದೆ. ಜೊತೆಗೆ ಎಕ್ಸಿನೋಸ್ 9 ಆಕ್ಟಾ 9825 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 6ಜಿಬಿ ರ್‍ಯಾಮ್ ಹಾಗೂ 128ಜಿಬಿ ಇಂಟರ್ನಲ್ ಸ್ಟೋರೇಜ್ ಪಡೆದಿದೆ. ಕ್ಯಾಮೆರಾ ಬಗ್ಗೆ ಹೇಳೋದಾದ್ರೆ ಇದು ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 7000 mAh ಸಾಮರ್ಥ್ಯದ ಬ್ಯಾಟರಿ ಅಯ್ಕೆ ಪಡೆದಿದ್ದು, ಫಾಸ್ಟ್ ಚಾರ್ಜಿಂಗ್ ಬೆಂಬಲ ಕೂಡ ಪಡೆದಿದೆ. ಗ್ರಾಹಕರಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ F62 ಸ್ಮಾರ್ಟ್ಫೋನ್ ರೂ. 23,999 ಗೆ ಲಭ್ಯವಾಗುತ್ತದೆ.
ಮೊಟೊ ಕಂಪೆನಿಯ ಈ ಸ್ಮಾರ್ಟ್ಫೋನ್ 6.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 120 Hz ರಿಫ್ರೆಶ್ ರೇಟ್ ನೀಡಲಿದೆ. ಹಾಗೆಯೇ ಬಲಿಷ್ಟವಾದ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಫೋನ್ 6ಜಿಬಿ ರ್‍ಯಾಮ್ ಹಾಗೂ 128ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.
ಕ್ಯಾಮೆರಾದಲ್ಲಿ, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಪಡೆದಿದ್ದು, 16 ಮೆಗಾಪಿಕ್ಸೆಲ್ ಸೆನ್ಸಾರ್ನಲ್ಲಿ ಸೆಲ್ಫಿ ಕ್ಯಾಮೆರಾ ಆಯ್ಕೆ ಇದೆ. 5000 mAh ಸಾಮರ್ಥ್ಯದ ಬ್ಯಾಟರಿ ಇದ್ದು, ಟರ್ಬೋ ಪವರ್ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಮಾರುಕಟ್ಟೆಯಲ್ಲಿ ಈ ಫೋನ್ ಬೆಲೆ ರೂ. 23,659 ಆಗಿದೆ. ಇದೂ 25 ಸಾವಿರಗಿಂತ ಕಡಿಮೆ ಬೆಲೆಯ ಬೆಸ್ಟ್ ಸ್ಮಾಟ್ಫೋನ್ ಗಳಲ್ಲಿ ( best smartphone) ಒಂದಾಗಿದೆ.