Aarya Commander e-motorcycle : ಸಿಂಗಲ್ ಚಾರ್ಜ್‌ನಲ್ಲಿ 125 ಕಿ.ಮೀ ಮೈಲೇಜ್ ಕೊಡುವ ಆರ್ಯ ಕಮಾಂಡರ್ ಬೈಕ್ ಶೀಘ್ರ ಬಿಡುಗಡೆ!

Aarya Commander e-motorcycle: ನೀವು ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಬಯಸಿದರೆ ಮುಂದಿನ ದಿನಗಳಲ್ಲಿ ನೀವು ವಾಹನ ಖರೀದಿಸಲು ಹಲವಾರು ಆಯ್ಕೆಗಳಿವೆ. ಆಧುನಿಕ ಯುಗದಲ್ಲಿ ಎಲೆಕ್ಟ್ರಿಕ್ ವಾಹನದ ನಿರ್ವಹಣೆ ಸುಲಭ ಆಗಿರುವುದರಿಂದ ಜನರನ್ನು ಹೆಚ್ಚು ಆಕರ್ಷಿಸಿದ್ದು ಇದೀಗ ಗುಜರಾತ್ ಮೂಲದ ಆಟೋಮೊಬೈಲ್ ತಯಾರಕರಾದ ಆರ್ಯ ಆಟೋಮೊಬೈಲ್ಸ್ ತನ್ನ ಮೊದಲ ಎಲೆಕ್ಟ್ರಿಕ್ (electric motor cycle )ಮೋಟಾರ್‌ಸೈಕಲ್ ಅನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲಿದೆ.

ಆರ್ಯ ಆಟೋಮೊಬೈಲ್ಸ್(automobile )ನಿರ್ದೇಶಕರಾದ ತುಷಾರ್ ಛಾಭಾಯಾ ಅವರ ಪ್ರಕಾರ ಆರ್ಯ ಕಮಾಂಡರ್ ಎಂದು ಕರೆಯಲ್ಪಡುವ ಈ ಇ-ಮೋಟಾರ್ ಸೈಕಲ್ ಒಂದೇ ಚಾರ್ಜ್‌ನಲ್ಲಿ 125 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ. ಮುಂಬರುವ ಆರ್ಯ ಕಮಾಂಡರ್ 4.4 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು 3 kW (4.02 bhp) ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲ್ಪಟ್ಟಿದೆ ಎಂದಿದ್ದಾರೆ.
ಆರ್ಯ ಕಮಾಂಡರ್ (Aarya Commander e-motorcycle) ಇದರ ವಿಶೇಷತೆ :
• ಇದು ಸುಮಾರು 90 kmph ವೇಗವನ್ನು ತಲುಪಬಲ್ಲದು.
• ಚಾರ್ಜಿಂಗ್ ಸಮಯದ ವಿಷಯದಲ್ಲಿ ಆರ್ಯ ಕಮಾಂಡರ್ ಅನ್ನು ಸಾಮಾನ್ಯ ಚಾರ್ಜರ್‌ನೊಂದಿಗೆ 5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್(charge)ಮಾಡಬಹುದು.
• ಆರ್ಯ ಅವರ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಡ್ಯುಯಲ್ ಸ್ಪ್ರಿಂಗ್-ಲೋಡೆಡ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದ್ದು, ಉತ್ತಮ ಚಾಲನಾ ಅನುಭವ ನೀಡಲಿದೆ.
• ಮೋಟಾರ್ಸೈಕಲ್ ಸಂಯೋಜಿತ ಬ್ರೇಕಿಂಗ್ ಸಿಸ್ಟಮ್ನೊಂದಿಗೆ ಎರಡೂ ತುದಿಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿರುವುದರಿಂದ ವೇಗವನ್ನು ಕೂಡಲೇ ನಿಯಂತ್ರಣಕ್ಕೆ ತರಬಹುದು.
• ಕಮಾಂಡರ್ ಬ್ಲೂಟೂತ್ ಸಂಪರ್ಕದೊಂದಿಗೆ ಡಿಜಿಟಲ್ ಇನ್ ಸ್ಟ್ರೂಮೆಂಟ್ ಕ್ಲಸ್ಟರ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಇತ್ಯಾದಿಗಳನ್ನು ನೀಡಲಾಗಿದೆ.
ಕಂಪನಿ ಪ್ರಕಾರ ಹೊಸ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಬುಕ್ಕಿಂಗ್‌ಗಳು ಈಗಾಗಲೇ ರೂ. 2,500 ಕ್ಕೆ ತೆರೆದಿವೆ. ಈ ವರ್ಷದ ಏಪ್ರಿಲ್‌ನಲ್ಲಿ ವಿತರಣೆಗಳು ಪ್ರಾರಂಭವಾಗುವ ನಿರೀಕ್ಷೆ ಇದ್ದು ಆರ್ಯ ಆಟೋಮೊಬೈಲ್ಸ್ ಇದು ಶ್ರೇಣಿ -I ನಗರಗಳಲ್ಲಿ ಸಕ್ರಿಯ ನೆಟ್‌ವರ್ಕ್ ಅನ್ನು ಹೊಂದಿದೆ. ಅದಲ್ಲದೆ ಶೀಘ್ರದಲ್ಲೇ ಇತರ ಪ್ರದೇಶಗಳಿಗೂ ವಿಸ್ತರಿಸಲಿದೆ ಮತ್ತು ಸೂರತ್‌ನಲ್ಲಿರುವ ಅದರ ಉತ್ಪಾದನಾ ಸೌಲಭ್ಯವು 5,000 ಘಟಕಗಳ ಮಾಸಿಕ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದೆ.
ಸದ್ಯ ಆರ್ಯ ಕಮಾಂಡರ್‌ನ ಬೆಲೆ ಸುಮಾರು 1. 60 ಲಕ್ಷ ರೂ. ಎಕ್ಸ್ ಶೋರೂಂ ನಲ್ಲಿ ಇದ್ದು, ಮುಂದಿನ ದಿನಗಳಲ್ಲಿ ಇನ್ನು ಹಲವು ಇ- ಮೋಟಾರ್ ಸೈಕಲ್‌ಗಳು ಮಾರುಕಟ್ಟೆಗೆ (market )ಲಗ್ಗೆಯಿಡಲಿದ್ದು ಎಲೆಕ್ಟ್ರಿಕ್ ಮೋಟಾರ್ ಸೈಕಲ್ ನಡುವೆ ಪೈಪೋಟಿ ಹೆಚ್ಚಾಗಲಿದೆ.