Drivers : ಉತ್ತಮ ಮತ್ತು ಕೆಟ್ಟ ಚಾಲಕರನ್ನು ಹೊಂದಿರುವ ದೇಶಗಳ ಪಟ್ಟಿ ಬಹಿರಂಗ!

worlds best and worst drivers list revealed : ಜನರು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸದೇ ಇರುವ ಕಾರಣ ಅಲ್ಲಲ್ಲಿ ವಾಹನ ಅಪಘಾತ ನಡೆದು ಎಷ್ಟೋ ಜೀವಗಳು ಹೋಗಿರುವುದು ನಾವು ಕೇಳಿರಬಹುದು ಮತ್ತು ನೋಡಿರಬಹುದು. ಹಾಗಾಗಿ ಇಲ್ಲಿ ಕೆಲವೊಂದು ಜಗತ್ತಿನಲ್ಲಿಯೇ ಉತ್ತಮ ಮತ್ತು ಕೆಟ್ಟ ಚಾಲಕರನ್ನು ( worlds best and worst drivers list revealed ) ಹೊಂದಿದ ಲಿಸ್ಟ್‌ ಬಿಡುಗಡೆಯಾಗಿದೆ.  ಇದರಲ್ಲಿ ಪ್ರಪಂಚದಲ್ಲಿಯೇ ಅತ್ಯಂತ ಕೆಟ್ಟ ಚಾಲಕರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ.

ಸದ್ಯ ವಿಶ್ವದ 50 ದೇಶಗಳಲ್ಲಿ ವರದಿ ಪ್ರಕಾರ ‘ಜಪಾನ್’ ವಿಶ್ವದಲ್ಲೇ ಅತ್ಯಂತ ಉತ್ತಮ ಚಾಲಕರನ್ನು ಹೊಂದಿರುವ ದೇಶವಾಗಿದೆ. ಇಲ್ಲಿನ ಜನರು, ಸಂಚಾರಿ ನಿಯಮಗಳನ್ನು ಉತ್ತಮವಾಗಿ ಪಾಲಿಸುತ್ತಾರೆ. ರಸ್ತೆಗಳ ಗುಣಮಟ್ಟವು ಅತ್ಯುತ್ತಮವಾಗಿವೆ. ಅಲ್ಲದೆ, ಮಧ್ಯ ಸೇವನೆ ಮಾಡಿದ ವೇಳೆ ಚಾಲಕರು ವಾಹನಗಳನ್ನು ಓಡಿಸುವುದಿಲ್ಲ. ಜೊತೆಗೆ ಜಪಾನ್ ಪಾದಚಾರಿಗಳಿಗೂ ಅತ್ಯಂತ ಸುರಕ್ಷಿತ ದೇಶವಾಗಿದೆ. ಜಪಾನ್ ಬಳಿಕ, ನೆದರ್ಲ್ಯಾಂಡ್ಸ್ ಹಾಗೂ ನಾರ್ವೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ.

ಅಧ್ಯಯನದ ಪ್ರಕಾರ, ವಿಶ್ವದ ಅತ್ಯಂತ ಕೆಟ್ಟ ಚಾಲಕರು ಹಾಗೂ ರಸ್ತೆ ಸುರಕ್ಷತೆ ಹೊಂದಿರದ ದೇಶಗಳ ಪಟ್ಟಿಯಲ್ಲಿ ಥೈಲ್ಯಾಂಡ್ ಮೊದಲ ಸ್ಥಾನದಲ್ಲಿದಲ್ಲಿದೆ. ಪೆರು ಎರಡನೇ ಸ್ಥಾನದಲ್ಲಿದ್ದರೆ, ಲೆಬನಾನ್ ದೇಶವು ಮೂರನೇ ಸ್ಥಾನದಲ್ಲಿದೆ. ಇನ್ನು, ಭಾರತ ನಾಲ್ಕನೇ ಸ್ಥಾನದಲ್ಲಿದೆ.

ಇನ್ನು ನಮ್ಮ ದೇಶದಲ್ಲಿ ಹೆಚ್ವು ಅಪಘಾತವಾಗುವ ದೊಡ್ಡ ನಗರಗಳ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿ ಮೊದಲ ಸ್ಥಾನದಲ್ಲಿದ್ದು, ನಂತರ, ಮುಂಬೈ, ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್ ನಗರಗಳಿವೆ. ಅಪಘಾತದ ಪ್ರಮಾಣ ಎಲ್ಲಿ ಎಷ್ಟಿದೆ ಎಂಬುವುದನ್ನು ನೋಡುವುದಾದರೆ, ದೆಹಲಿಯಲ್ಲಿ ಶೇಕಡ 20.3% ಹಾಗೂ ಮುಂಬೈನಲ್ಲಿ ಶೇಕಡ 18.8% ಇದೆ. ಆದರೆ, ವಾಣಿಜ್ಯ ನಗರಿ ಮುಂಬೈ ಅತಿಹೆಚ್ಚಿನ ವಾಹನ ಸಾಂದ್ರತೆ (vehicle density) ಹೊಂದಿದೆ ಎಂದು ತಿಳಿದು ಬಂದಿದೆ.

ಆದರೆ ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಕಡಿಮೆ ಅಪಘಾತ ಪ್ರಕರಣಗಳು ದಾಖಲಾಗುತ್ತದೆ. ಆದರೆ, ಸಂಚಾರ ದಟ್ಟಣೆ ಸಮಸ್ಯೆಯಿಂದ ಜನರು ಬೇಸತ್ತು ಹೋಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ, 2022ರಲ್ಲಿ ವಿಶ್ವದಲ್ಲೇ ಅತಿಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ಲಂಡನ್‌ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ದ್ವಿತೀಯ ಸ್ಥಾನದಲ್ಲಿದೆ. ನಗರದ ಮಧ್ಯಭಾಗದಲ್ಲಿ ಪ್ರತಿ 10 ಕಿಲೋಮೀಟರ್‌ ಪ್ರಯಾಣಕ್ಕೆ ಬರೋಬ್ಬರಿ 29 ನಿಮಿಷ 10 ಸೆಕೆಂಡ್‌ಗಳು ಬೇಕಾಗುತ್ತದೆ.

ಸದ್ಯ ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಿದಲ್ಲಿ ದೊಡ್ಡ ಮಟ್ಟದ ಹಲವಾರು ಅಪಾಯಗಳನ್ನು ತಪ್ಪಿಸಬಹುದು. ಜೊತೆಗೆ ವಾಹನ ಚಲಾಯಿಸುವಾಗ ಮಧ್ಯಪಾನ ಮಾಡದೇ, ಕಡ್ಡಾಯವಾಗಿ ಹೈಲ್ಮೆಟ್ ಧರಿಸಿ, ಕಾರುಗಳಲ್ಲಿ ಸೀಟ್ ಬೈಲ್ಟ್ ಹಾಕಿಕೊಂಡು,ಮೊಬೈಲ್ ನಲ್ಲಿ ಕರೆ ಸ್ವೀಕರಿಸದೇ ವಾಹನ ಚಲಾಯಿಸಿದಲ್ಲಿ ಈ ಮೇಲಿನ ಬದಲಾವಣೆಗಳು ಉತ್ತಮ ಸಂಚಾರ ಮಾದರಿ ಆಗಲು ಸಾಧ್ಯವಿದೆ.

Leave A Reply

Your email address will not be published.