Tech Tips: ನಂಬರ್ ಬದಲಾಯಿಸುವಾಗ, ನಿಮ್ಮ WhatsApp ಚಾಟ್ ಡಿಲೀಟ್ ಆಗದಿರಲು, ಈ ಟ್ರಿಕ್ಸ್ ಫಾಲೋ ಮಾಡಿ!
WhatsApp : ನಿಮ್ಮ ಸ್ಮಾರ್ಟ್’ಫೋನ್ (smartphone) ನಲ್ಲಿ ಎರಡು ಸಿಮ್ ಕಾರ್ಡ್(sim card) ಗಳಿದ್ದರೂ, ಆ ಮೊಬೈಲ್ (Mobile) ನಲ್ಲಿ ಒಂದಕ್ಕಿಂತ ಹೆಚ್ಚು ವಾಟ್ಸಪ್ ಅಕೌಂಟ್ (WhatsApp account) ಗಳನ್ನು ತೆರೆಯಲು ಸಾಧ್ಯವಿಲ್ಲ. ಒಂದೇ ಮೊಬೈಲ್ ನಲ್ಲಿ ಎರಡು ವಾಟ್ಸಪ್ ಅಕೌಂಟ್ಗಳನ್ನು ಸೃಷ್ಟಿಸುವ ಆಯ್ಕೆಯನ್ನು ವಾಟ್ಸಪ್ (WhatsApp) ಇನ್ನೂ ನೀಡಿಲ್ಲ. ಆದರೆ, ಮೊಬೈಲ್ ನಂಬರ್ ಬದಲಾಯಿಸಿ ಮತ್ತೊಂದು ಸಿಮ್ನ ವಾಟ್ಸಪ್ ಖಾತೆ ತೆರೆಯುವ ಅವಕಾಶವಿದೆ. ಆದರೆ, ನಂಬರ್ ಬದಲಾಯಿಸುವಾಗ ಸಂಪರ್ಕಗಳು, ಮೆಸೇಜ್’ಗಳು ಕಳೆದುಕೊಳ್ಳುವ ಆತಂಕ ಅನೇಕರಿಗೆ ಇದೆ. ಆದ್ರೆ, ನೀವು ಯಾವುದೇ ಡೇಟಾವನ್ನು ಕಳೆದುಕೊಳ್ಳದೆ, ಹೊಸ ನಂಬರ್ಗೆ ವಾಟ್ಸಪ್ ಬದಲಾಯಿಸಿಕೊಳ್ಳುವ ಸೂಪರ್ ಟ್ರಿಕ್ ಅನ್ನು ನಾವಿಂದು ಹೇಳಲಿದ್ದೀವೆ. ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ.
ನಂಬರ್ ಬದಲಾಯಿಸಲು ಇಚ್ಛಿಸಿರುವವರು, ಮೊದಲಿಗೆ ನಿಮ್ಮ ವಾಟ್ಸಪ್ ಅಪ್ಲಿಕೇಶನ್ ಅನ್ನು ತೆರೆಯಿರಿ. ನಂತರ ಪ್ರೊಫೈಲ್’ಗೆ ಹೋಗಿ ಸೆಟ್ಟಿಂಗ್ ಮೆನು ಓಪನ್ ಮಾಡಿ. ನಂತರ ಖಾತೆ ಆಯ್ಕೆಗಾಗಿ ಕೆಳಗೆ ಸ್ಕ್ರಾಲ್ ಮಾಡುತ್ತಾ ಬನ್ನಿ. ಆಗ ಅಲ್ಲಿ ಹಲವು ಆಯ್ಕೆಗಳು ಲಭ್ಯವಿರುತ್ತವೆ, ಅವುಗಳಲ್ಲಿ ಬದಲಾವಣೆ ಸಂಖ್ಯೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಂತರ ನೆಕ್ಸ್ಟ್ ಕ್ಲಿಕ್ ಮಾಡಿರಿ. ಅಲ್ಲಿ ನಿಮ್ಮ ಹಳೆಯ ಮತ್ತು ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನಂತರ ನಿಮ್ಮ ಹೊಸ ಸಂಖ್ಯೆಯನ್ನು ವಾಟ್ಸಪ್ ಪರಿಶೀಲಿಸುತ್ತದೆ ಮತ್ತು ನಂಬರನ್ನು ಬದಲಾಯಿಸುತ್ತದೆ.
ಮುಂದಿನ ಹಂತದಲ್ಲಿ, ನೋಟಿಫೈ ಕಾಂಟ್ಯಾಕ್ಟ್ಸ್ ಆಪ್ಶನ್ ಅನ್ನು ಸಕ್ರೀಯಗೊಳಿಸಿ. ಇದರಿಂದ ನಿಮ್ಮ ಎಲ್ಲ ಕಾಂಟಾಕ್ಟ್ ನಲ್ಲಿರುವ ಎಲ್ಲರಿಗೂ ಕೂಡ ನಿಮ್ಮ ಹೊಸ ನಂಬರ್ ಬಗ್ಗೆ ಸಂದೇಶದ ಮೂಲಕ ನೋಟಿಫಿಕೇಶನ್ ಹೋಗುತ್ತದೆ. ಅಲ್ಲದೆ, ನೀವು ಖುದ್ದಾಗಿ ಕೂಡ ನಿಮ್ಮ ಕಾಂಟಾಕ್ಟ್ ನಲ್ಲಿರುವವರಿಗೆ ನಂಬರ್ ಬದಲಾವಣೆಯ ಕುರಿತು ಮಾಹಿತಿಯನ್ನು ನೀಡಬಹುದಾಗಿದೆ.
ವೈಯಕ್ತಿಕ ಸಂಪರ್ಕಗಳಿಗೆ ಮಾತ್ರವಲ್ಲದೆ ಗುಂಪುಗಳಿಗೂ ಸಹ, ಹೊಸ ವಾಟ್ಸ್ಆ್ಯಪ್ ಸಂಖ್ಯೆಯ ಬಗ್ಗೆ ಸಂದೇಶ ರವಾನೆಯಾಗುತ್ತದೆ. ಈ ವೈಶಿಷ್ಟ್ಯದೊಂದಿಗೆ, ನಿಮ್ಮ ಎಲ್ಲಾ ಚಾಟ್ಗಳು, ಮೀಡಿಯಾ ಫೈಲ್ಗಳು ಮತ್ತು ವಾಟ್ಸ್ಆ್ಯಪ್ನಲ್ಲಿ ಹಂಚಿಕೊಂಡಿರುವ ಎಲ್ಲಾ ಇತರ ಡೇಟಾಗಳು ಉಳಿಯುತ್ತವೆ ಮತ್ತು ಅವುಗಳನ್ನು ಅಳಿಸಲಾಗುವುದಿಲ್ಲ.
ಇನ್ನು ಒಂದು ವೇಳೆ ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ವಾಟ್ಸಪ್ ಖಾತೆಗಳಿದ್ದು, ಹಳೆ ಖಾತೆಯನ್ನು ನೀವು ಬಂದ್ ಮಾಡಲು ಇಚ್ಛಿಸಿದರೆ, ಇದಕ್ಕೂ ಸಿಂಪಲ್ ಟ್ರಿಕ್ ಇದೆ. ಇದಕ್ಕಾಗಿ ನೀವು ವಾಟ್ಸ್ಆ್ಯಪ್ ಸೆಟ್ಟಿಂಗ್ಸ್ ವಿಭಾಗದಲ್ಲಿನ ಅಕೌಂಟ್ಸ್ ಸೆಕ್ಷನ್ನಲ್ಲಿ ಡಿಲೀಟ್ ಮೈ ಅಕೌಂಟ್ ಮೇಲೆ ಕ್ಲಿಕ್ ಮಾಡಿದರೆ ಪ್ರೊಫೈಲ್ ಡಿಲೀಟ್ ಆಗಲಿದೆ.