Poster Campaign on BJP : ಕಾಂಗ್ರೆಸ್ ನಾಯಕರ ಕಿವಿಗೆ ಹೂ ಮುಡಿಸಿದ್ದು ಈವನೇ ನೋಡಿ! ಯಾರಿವನು? ಕಾಂಗ್ರೆಸ್ಸಿಗೂ, ಇವನಿಗೂ ಏನು ಸಂಬಂಧ?
Karnataka Budget : ನಿನ್ನೆ ದಿನ ವಿಧಾನಸೌಧದಲ್ಲಿ ರಾಜ್ಯದ 2023- 24 ನೇ ಸಾಲಿನ ಬಜೆಟ್ (Karnataka Budget) ಮಂಡನೆಯನ್ನು ಸಿಎಂ ಬೊಮ್ಮಾಯಿ ಮಾಡಿದರು.ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವನ್ನು ವ್ಯಂಗ್ಯ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಸದಸ್ಯರು ಕಿವಿಗೆ ಹೂಮುಡಿದು ಬಜೆಟ್ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ಸದಸ್ಯರಾದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಸದಸ್ಯರು ಚೆಂಡು ಹೂವನ್ನು ಕಿವಿಗೆ ಮುಡಿದು ಕುಳಿತುಕೊಳ್ಳುವ ಮೂಲಕ ಸರ್ಕಾರದ ಬಜೆಟ್ಗೆ ವ್ಯಂಗ್ಯವಾಗಿ ವಿರೋಧ ವ್ಯಕ್ತಪಡಿಸಿದರು. ಈ ಪ್ರಸಂಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿದ್ದು ಸಾಕಷ್ಟು ಪ್ರಚಾರವನ್ನೂ ಪಡೆದಿದೆ.
ಈಗಾಗಲೇ ನಿಮ್ಮ ತಲೆಯಲ್ಲಿ ಈ ಕಾಂಗ್ರೆಸ್ ಗೆ ಇಂತಹ ವಿನೂತನವಾದ ಐಡಿಯಾಗಳನ್ನು ಯಾರು ಕೊಡುತ್ತಾರೆ ಎಂಬ ಪ್ರಶ್ನೆ ಮೂಡಿರಬಹುದು. ಹಾಗಿದ್ರೆ ಈ ಐಡಿಯಾವನ್ನು ಕೊಟ್ಟವರು ಇವರೇ ನೋಡಿ. ಕಾಂಗ್ರೆಸ್ಸಿನ ಎಲ್ಲಾ ರೀತಿಯ ಹೊಸ ಹೊಸ ವಿನೂತನ ಐಡಿಯಾಗಳಿಗೆ ಮಾಸ್ಟರ್ ಪ್ಲಾನ್ ಗಳಿಗೆ ಇವರೇ ಒಂದು ರೀತಿಯಲ್ಲಿ ಕಾರಣ ಎನ್ನಬಹುದು. ಹೌದು ಕಾಂಗ್ರೆಸ್ ನಾಯಕರು, ಏಕಾಏಕಿ ಹೂ ಮುಡಿದುಕೊಂಡು ಬಂದಿಲ್ಲ ಎನ್ನುವುದು ಸ್ಪಷ್ಟವಾಗಿದ್ದು ಈ ಐಡಿಯಾ ಹಿಂದೆ ಸುನಿಲ್ ಕನಗೊಳು ತಂಡ ಕೆಲಸ ಮಾಡಿದೆ ಎನ್ನುವುದು ತಿಳಿದುಬಂದಿದೆ.
ಸುನಿಲ್ ಕನಗೋಳು ಹಿಂದೆಯೇ ಹೂ ಮುಡಿದು ಸಂದೇಶರವಾನೆ ಮಾಡಿದರೆ ಸಾರ್ವಜನಿಕವಾಗಿ ಚರ್ಚೆಯಾಗಲಿದೆ ಎಂದಿದ್ದರು. ಹಾಗಾಗಿ ನಿನ್ನೆ ಕಾಂಗ್ರೆಸ್ ನಾಯಕರು, ಸದಸ್ಯರು ಎಲ್ಲರೂ ಸದನಕ್ಕೆ ಹೂ ಮುಡಿದು ಬಂದಿದ್ದರು. ಅಲ್ಲದೆ ಈ ಸುನಿಲ್ ಕನಗೋಳು ಎಂಬ ಯುವಕನನ್ನು ಕಾಂಗ್ರೆಸ್ ಪರವಾಗಿ ರಣತಂತ್ರ ರೂಪಿಸಲು ಎಐಸಿಸಿಯಿಂದ ನೇಮಕ ಮಾಡಲಾಗಿದೆ. ಕಾಂಗ್ರೆಸ್ ಯಾವುದೇ ರೀತಿಯ ಹೊಸ ಪ್ರಯತ್ನಗಳಿಗೆ ಕೈ ಹಾಕಿತ್ತು ಎಂದರೆ ಅದರಲ್ಲಿ ಸುನಿಲ್ ಅವರ ಮಾಸ್ಟರ್ ಮೈಂಡ್ ಇದ್ದೇ ಇರುತ್ತದೆ.
ಅಲ್ಲದೆ ಈ ಬಾರಿಯ ಬಜೆಟ್ ಚುನಾವಣಾ ಬಜೆಟ್ ಎಂದೇ ಬಿಂಬಿತವಾಗಿದೆ. ಬಜೆಟ್ನಲ್ಲಿ ಕೆಲವೊಂದು ಜನಪ್ರಿಯ ಘೋಷಣೆಗನ್ನು ಮಾಡಲಾಗಿದೆ. ಆದರೆ ವಾಸ್ತವದಲ್ಲಿ ಇದು ಜಾರಿಗೆ ಬರುವುದಿಲ್ಲ ಎಂಬ ಅರ್ಥದಲ್ಲಿ ಕಿವಿಯ ಮೇಲೆ ಹೂ ಇಡುವುದು ಎಂಬ ನಾಣ್ಣುಡಿಯಂತೆ ಸಾಂಕೇತಿಕವಾಗಿ ಕಿವಿಗೆ ಹೂ ಮುಡಿಯುವ ಮೂಲಕ ಬಜೆಟ್ಗೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದರು.
ಇನ್ನು ಈ ಕುರಿತು ಮಾತನಾಡಿದಂತಹ ಸಿಎಂ ಬಸವರಾಜ ಬೊಮ್ಮಾಯಿ ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಜನರಿಗೆ ಹೂಡಿಸುತ್ತಾ ಬಂದಿತ್ತು. ಆದರೆ ಇದೀಗ ಅವರಿಗೆ ಅವರೇ ಕಿವಿಗೆ ಹೂ ಮುಡಿದುಕೊಂಡಿರುವುದು ವ್ಯಂಗ್ಯವಾಗಿ ಕಾಣುತ್ತಿದೆ. ಮುಂದೆ ಜನರು ಕೂಡ ಕಾಂಗ್ರೆಸ್ ನಾಯಕರಿಗೆ ಹೂ ಮುಡಿಸುತ್ತಾರೆ ಎಂದು ಹೇಳಿದ್ದಾರೆ.