How To Contact Prime Minister : ನಿಮಗೆ ಪ್ರಧಾನಿಯನ್ನು ಸಂಪರ್ಕಿಸಬೇಕೆ? ಈ ರೀತಿ ಮಾಡಿ

PM Narendra Modi: ಭಾರತವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ವೈಜ್ಞಾನಿಕವಾಗಿ ಮುಂದುವರಿಯಲು ಕಾರಣವಾದ ಪ್ರಪಂಚವೇ ಮೆಚ್ಚಿದ ಧೀರ, ಉತ್ತಮ ನಾಯಕ, ಸಜ್ಜನ ಮನುಷ್ಯ, ಸಾಧನೆಗಳ ಶಿಖರಕ್ಕೆ ಮುನ್ನುಡಿಯ ಉದಾಹರಣೆಯೇ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ. ಹೌದು ಮೋದಿ ಅವರನ್ನು ಭೇಟಿ ಆಗಲು ಅಥವಾ ಇತರೆ ಮೂಲಗಳಲ್ಲಿ ಸಂಪರ್ಕಿಸಲು ಜನರು ಹಾತೊರೆಯುತ್ತಾರೆ. ಆದರೆ ಮೋದಿ ಅವರನ್ನು ಸಂಪರ್ಕ ಮಾಡಲು ಕೆಲವು ನಿಯಮಗಳು ನೀವು ತಿಳಿದಿರಬೇಕು.

ಸದ್ಯ ಇಮೇಲ್, ಪತ್ರ, ಫೋನ್ ಮತ್ತು ಸಾಮಾಜಿಕ ಮಾಧ್ಯಮ ಸೇರಿದಂತೆ ತಮ್ಮನ್ನು ಸಂಪರ್ಕಿಸಲು ಅನೇಕ ಮಾರ್ಗಗಳನ್ನು ಪ್ರಧಾನಿ ಮೋದಿ ಸಾರ್ವಜನಿಕರಿಗೆ ನೀಡಿದ್ದು ತಮ್ಮದೇ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಅನ್ನು ಸಹ ಪ್ರಧಾನಿ ಮೋದಿ ಹೊಂದಿದ್ದಾರೆ.

ಸಾರ್ವಜನಿಕರು ನವದೆಹಲಿಯಲ್ಲಿರುವ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಯಾರಾದರೂ ಪತ್ರ ಕಳುಹಿಸಬಹುದು. ನೀವೂ ನಿಮ್ಮ ಪತ್ರವನ್ನು Prime Minister, south black, New Delhi -110011 ಈ ವಿಳಾಸಕ್ಕೆ ಕಳಿಸಬಹುದು. Mr. Prime Minister ಅಥವಾ “ಗೌರವಾನ್ವಿತ ನರೇಂದ್ರ ಮೋದಿ” ಅಂತ ಗೌರವ ಪೂರ್ವಕವಾಗಿ ಬರೆಯಬೇಕು. ಪತ್ರದ ವಿಳಾಸ ಇಂಗ್ಲೀಷ್ ಅಥವಾ ಹಿಂದಿಯಲ್ಲಿ ಬರೆದಿರಬೇಕು.

ಅದಲ್ಲದೆ ಪ್ರಧಾನ ಮಂತ್ರಿ ಅವರಿಗೆ ನೇರವಾಗಿ ಇಮೇಲ್ ಕಳುಹಿಸುವ ವ್ಯವಸ್ಥೆ ಕೂಡ ಈಗ ಭಾರತದಲ್ಲಿ ಲಭ್ಯವಿದೆ. https://www.pmindia.gov.in/ ಗೆ ಭೇಟಿ ನೀಡುವ ಮೂಲಕ ನೀವು ಪ್ರಧಾನಿ ಅವರಿಗೆ ಮೇಲ್‌ ಮೂಲಕ ನಿಮ್ಮ ಸಂದೇಶ, ಪ್ರಶ್ನೆ, ಅಭಿಪ್ರಾಯಗಳನ್ನು ಕಳುಹಿಸಬಹುದು. ಈ ವೆಬ್‌ ಪೇಜ್‌ ತೆರೆದಾಗ ನೀವು ಕೆಳಗೆ ಸ್ಕ್ರೋಲ್‌ ಮಾಡಿದರೆ, “ಪ್ರಧಾನ ಮಂತ್ರಿಯೊಂದಿಗೆ ಸಂವಹನ” ಶೀರ್ಷಿಕೆಯ ಅಡಿಯಲ್ಲಿ “ಪ್ರಧಾನ ಮಂತ್ರಿಗೆ ಬರೆಯಿರಿ” ಎಂಬ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ. ಅಲ್ಲೊಂದು ಫಾರ್ಮ್‌ ಓಪನ್‌ ಆಗುತ್ತದೆ. ಈ ಆನ್‌ಲೈನ್ ಫಾರ್ಮ್ ಅನ್ನು ಫಿಲ್‌ ಮಾಡಿ, ನಿಮ್ಮ ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಮತ್ತು ಭದ್ರತಾ ಅಕ್ಷರಗಳನ್ನು ಅಲ್ಲಿ ನಮೂದಿಸಬೇಕು.

ಇನ್ನು 011-230114547 ಡಯಲ್‌ ಮಾಡುವ ಮೂಲಕ ನೀವು ಪ್ರಧಾನಿ ಕಚೇರಿಗೆ ನೇರವಾಗಿ ಫೋನ್ ಕಾಲ್ ಮಾಡಬಹುದು. ಅಲ್ಲದೇ, ನೀವು 011-23019545 ಅಥವಾ 011-23016857 ಗೆ ನಿಮ್ಮ ಫ್ಯಾಕ್ಸ್ ಕೂಡ ಕಳುಹಿಸಬಹುದು. ನಿಮ್ಮ ಕಾಲ್‌ ಕನೆಕ್ಟ್‌ ಆದ ಬಳಿಕ ಪ್ರಧಾನಿ ಕಚೇರಿಯ ಸದಸ್ಯರು ನಿಮ್ಮೊಂದಿಗೆ ಮಾತನಾಡುತ್ತಾರೆ. ಇವುಗಳನ್ನು ಬಿಟ್ಟು ಟ್ವಿಟರ್, ಫೇಸ್‌ಬುಕ್ ಸೇರಿದಂತೆ ಬಹುತೇಕ ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲೂ ಪ್ರಧಾನಮಂತ್ರಿಗಳ ಅಕೌಂಟ್‌ ಇವೆ. ಅಲ್ಲಿಯೂ ನೀವು ಸಂಪರ್ಕಿಸಬಹುದು.

ವಿಶ್ವವೇ ಮೆಚ್ಚಿದ ವಿಶ್ವಾಸ ನಾಯಕ ಎಂದರೆ ಅದು ನರೇಂದ್ರ ಮೋದಿ (PM Narendra Modi) ಅವರು. ಹೌದು ನಾವು ಇವರನ್ನು ಸಂಪರ್ಕಿಸಲು ಸಹ ಅನುವು ಮಾಡಿಕೊಟ್ಟಿರುವುದು ಅವರು ಜನತೆಯ ಮೇಲೆ ಇಟ್ಟಿರುವ ಕಾಳಜಿ ತಿಳಿಯುತ್ತದೆ. ಆದರೆ ಅವರನ್ನು ಸಂಪರ್ಕಿಸುವಾಗ ಅವರ ಗೌರವಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕು ಎಂಬುದು ಮುಖ್ಯ ಅಂಶವಾಗಿದೆ. ಆದ್ದರಿಂದ ಮೋದಿ ಅವರನ್ನು ಈ ಮೇಲಿನಂತೆ ನಿಯಮವನ್ನು ಪಾಲಿಸಿ ಇಮೇಲ್, ಪತ್ರ, ಫೋನ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಂಪರ್ಕ ಮಾಡಬಹುದಾಗಿದೆ.

Leave A Reply

Your email address will not be published.