IRCTC ನೀಡಿದೆ ಹೊಸ ಸೇವೆ : ರೈಲಿನಲ್ಲಿ ನಿದ್ದೆಗೆ ಜಾರಿದಾಗ ನಿಲ್ದಾಣದ ಬಗ್ಗೆ ತಿಳಿಯುವುದು ಹೇಗೆ? ಕಂಪ್ಲೀಟ್ ಮಾಹಿತಿ ಇಲ್ಲಿದೆ!

IRCTC : ರೈಲು ಪ್ರಯಾಣ ಎಂದರೆ ಹೆಚ್ಚಿನವರ ಪಾಲಿಗೆ ಅಚ್ಚು ಮೆಚ್ಚು. ನೆಚ್ಚಿನ ತಾಣಗಳ ಸೌಂದರ್ಯ ಸವಿಯುತ್ತಾ ಸಾಗುವ ಪಯಣದ ಹಾದಿಯ ಖುಷಿಯೇ ಬೇರೆ. ಇದೀಗ, ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಹೌದು!! ಈಗಾಗಲೇ ಭಾರತೀಯ ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ, ಎಸ್ಕಲೇಟರ್ ಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಆರಂಭಿಸಿದೆ.

ರೈಲ್ವೆ ಪ್ರಯಾಣಿಕರು ಹಬ್ಬದ ಸಂಭ್ರಮದಲ್ಲಿ ಹೆಚ್ಚು ಓಡಾಟ ನಡೆಸುವಾಗ ಜನದಟ್ಟಣೆ ಹೆಚ್ಚಿದ್ದಾಗ ಜನರಿಗೆ ಸಮಸ್ಯೆ ಉಂಟಾಗದಂತೆ ಹೆಚ್ಚುವರಿ ರೈಲ್ವೇ ವ್ಯವಸ್ಥೆ ಕಲ್ಪಿಸಲಾಗಿದೆ. ಇದೀಗ, ರಾತ್ರಿ ವೇಳೆ ಪ್ರಯಾಣಿಸುವ ಪ್ರಯಾಣಿಕರಿಗೆ ನೆಮ್ಮದಿಯಾಗಿ ನಿಶ್ಚಿಂತೆಯಿಂದ ನಿದ್ರಿಸುವ ನಿಟ್ಟಿನಲ್ಲಿ ಹೊಸ ಸೇವೆಯೊಂದನ್ನು ಆರಂಭಿಸಿದೆ. ನೀವು ರೈಲಿನಲ್ಲಿ ರಾತ್ರಿ ಸಮಯದಲ್ಲಿ ಪ್ರಯಾಣ ಮಾಡಲು ಇಷ್ಟಪಡುವವರೆಂದರೆ, ಈ ಸುದ್ದಿ ಕೇಳಿದರೆ ನಿಮಗೆ ಖುಷಿಯಾಗೋದು ಪಕ್ಕಾ!

ಭಾರತೀಯ ರೈಲ್ವೇ ಇಲಾಖೆ ಇದೀಗ ಮತ್ತೊಂದು ಹೊಸ ನಿಯವನ್ನು ತಂದಿದ್ದು, ಪ್ರಯಾಣಿಕರು ರಾತ್ರಿ ಸಮಯದಲ್ಲಿ ರೈಲಿನಲ್ಲಿ ನಿದ್ರಿಸುವಾಗ ಇಳಿಯಬೇಕಾದ ನಿಲ್ದಾಣ ಬಂದರೆ ಎನ್ನುವ ಭಯದಲ್ಲೇ ಕಾಲ ಕಳೆಯಬೇಕಾಗುತ್ತದೆ. ಇನ್ನು ಮುಂದೆ ನೀವು ಹೀಗೆ ಹೆದರಿಕೊಂಡು ಮಲಗುವ ಅವಶ್ಯಕತೆ ಇಲ್ಲ. ಯಾಕೆ ಅಂತೀರಾ?? ನಿಮಗಾಗಿ ರೈಲ್ವೇ ಇಲಾಖೆ ವಿಶೇಷ ಸೇವೆ ಒದಗಿಸುತ್ತಿದ್ದು, ನೀವು ಇಳಿಯಬೇಕಾದ ನಿಲ್ದಾಣವನ್ನು ಅತೀ ಬೇಗನೆ ತಿಳಿದುಕೊಳ್ಳಲು ನೆರವಾಗುತ್ತದೆ.

ರೈಲಿನಲ್ಲಿ ಪ್ರಯಾಣಿಸುವಾಗ ನಿದ್ರೆ ಬರೋದು ಸಹಜ. ಹೀಗಿದ್ದಾಗ, ಕೆಲವೊಮ್ಮೆ ಪ್ರಯಾಣಿಕರು ಹೆಚ್ಚಾಗಿ ಗಾಢ ನಿದ್ರೆಗೆ ಜಾರಿ ತಾವು ಇಳಿಯಬೇಕಾದ ನಿಲ್ದಾಣದಲ್ಲಿ ಎಚ್ಚರ ವಾಗದೆ ಇರಬಹುದು. ಮತ್ತೆ ಕೆಲವರು ನಾವು ಇಳಿಯುವ ನಿಲ್ದಾಣ ದಾಟಿ ಬಿಟ್ಟರೆ ಅನ್ನೋ ಭೀತಿಯಲ್ಲಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನಿದ್ರೆಯಿಂದ ಪಾರಾಗಲು ಏನೇನೋ ಸರ್ಕಸ್ ಮಾಡುತ್ತಾರೆ. ಹೀಗಾಗಿ, ಸದ್ಯ, ಪ್ರಯಾಣಿಕರ ಭಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ.

ರೈಲ್ವೆ ಇಲಾಖೆ ಪ್ರಾರಂಭಿಸಿರುವ ಈ ವಿಶೇಷ ಸೇವೆಗೆ “ಗಮ್ಯಸ್ಥಾನದ ಎಚ್ಚರಿಕೆ ಎಚ್ಚರಗೊಳ್ಳುವ ಎಚ್ಚರಿಕೆ”ಎಂಬ ಹೆಸರಿಡಲಾಗಿದ್ದು, ರೈಲಿನಲ್ಲಿ ಮಲಗುವವರು ತಾವು ಇಳಿದುಕೊಳ್ಳಬೇಕಾದ ಸ್ಥಳಗಳನ್ನು ತಪ್ಪಿಸಿಕೊಂಡ ಬಗ್ಗೆ ಅನೇಕ ಪ್ರಕರಣಗಳು ವರದಿಯಾಗುತ್ತಿದ್ದ ಮಾಹಿತಿ ರೈಲ್ವೇ ಇಲಾಖೆ ಗೆ ಬಂದ ಹಿನ್ನೆಲೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಹೊಸ ಸೌಲಭ್ಯವನ್ನು ಭಾರತೀಯ ರೈಲ್ವೇ ಇಲಾಖೆ ಪ್ರಾರಂಭಿಸಿದೆ. ರೈಲ್ವೆ 139 ಸಂಖ್ಯೆಯ ವಿಚಾರಣೆ ಸೇವೆಯಲ್ಲಿ ಈ ವ್ಯವಸ್ಥೆಯನ್ನು ಆರಂಭಿಸಿದ್ದು, ಈ ಹೊಸ ರೈಲ್ವೆ ಸೇವೆ ಶುರುವಾದ ಬಳಿಕ , ಪ್ರಯಾಣಿಕರು ರಾತ್ರಿ ವೇಳೆ ರೈಲಿನಲ್ಲಿ ನೆಮ್ಮದಿಯಲ್ಲಿ ಮಲಗಬಹುದಾಗಿದೆ.

ನಿದ್ರೆಯ ಸಮಯದಲ್ಲಿ ಎಲ್ಲಿ ನಾವು ಇಳಿಯಬೇಕಿದ್ದ ನಿಲ್ದಾಣ ದಾಟಿಬಿಡುತ್ತೋ ಎಂದು ಇನ್ನೂ ಮುಂದೆ ಭಯ ಪಡುವ ಅಗತ್ಯವಿಲ್ಲ. ಇದೀಗ, ನೀವು ಇಳಿಯಬೇಕಿದ್ದ ನಿಲ್ದಾಣವನ್ನು ತಲುಪುವ 20 ನಿಮಿಷಗಳ ಮೊದಲು ಭಾರತೀಯ ರೈಲ್ವೇ ಇಲಾಖೆ ನಿಮ್ಮನ್ನು ಎಚ್ಚರಗೊಳಿಸುವ ವ್ಯವಸ್ಥೆಯನ್ನು ಕಲ್ಪಿಸಿದೆ.ಹಾಗಿದ್ರೆ, ಈ ಸೇವೆ ಪಡೆಯೋದು ಹೇಗೆ ಎಂಬ ಪ್ರಶ್ನೆ ನಿಮಗೆ ಕಾಡಬಹುದು.ಅದಕ್ಕೆ ಉತ್ತರ ಇಲ್ಲಿದೆ.

“ಡೆಸ್ಟಿನೇಶನ್ ಅಲರ್ಟ್ ವೇಕಪ್ ಅಲಾರ್ಮ್” (destination alert wake-up alarm) ಅನ್ನು ಪ್ರಯೋಜನ ಪಡೆಯಬಹುದಾಗಿದೆ. ಐಆರ್‌ಸಿಟಿಸಿ ( IRCTC) ಯ ಸಹಾಯವಾಣಿ 139ಕ್ಕೆ ಕರೆ ಮಾಡಬಹುದಾಗಿದೆ. ಭಾಷೆಯನ್ನು ಆಯ್ಕೆ ಮಾಡಿದ ಬಳಿಕ ಗಮ್ಯಸ್ಥಾನದ ಎಚ್ಚರಿಕೆಗಾಗಿ ನೀವು ಮೊದಲು ಸಂಖ್ಯೆ 7 ಮತ್ತು ನಂತರ ಸಂಖ್ಯೆ 2 ಅನ್ನು ಒತ್ತಬೇಕಾಗುತ್ತದೆ. ನಂತರ ನಿಮ್ಮ 10 ಅಂಕಿಯ ಫೋನ್‌ ನಂಬರ್‌ ಅನ್ನು ನಮೂದಿಸಬೇಕಾಗಿದ್ದು, ಆಗ ನಂಬರ್ ಅನ್ನು ಖಚಿತಪಡಿಸಲಾಗುತ್ತದೆ. ನಂತರ 1 ಅನ್ನು ಡಯಲ್ ಮಾಡಬೇಕು. ಹೀಗೆ ಮಾಡುವುದರಿಂದ ನಿಲ್ದಾಣದ ಆಗಮನದ 20 ನಿಮಿಷಗಳ ಮೊದಲು ನೀವು ಎಚ್ಚರಗೊಳ್ಳುವ ಮೊದಲೇ ನಿಮಗೆ ಮೆಸೇಜ್ ಇಲ್ಲವೇ ಸಂದೇಶ ಬರಲಿದೆ.

ಪ್ರಯಾಣಿಕರು 139 ಸಂಖ್ಯೆಯ ವಿಚಾರಣಾ ವ್ಯವಸ್ಥೆಯಲ್ಲಿ ಈ ಅನುಕೂಲ ಪಡೆಯಬಹುದು.ರಾತ್ರಿ 11ರಿಂದ ಬೆಳಗ್ಗೆ 7ರವರೆಗೆ ಲಭ್ಯವಿರುವ ಈ ಸೌಲಭ್ಯವನ್ನು ಎಲ್ಲ ರೈಲ್ವೇ ಪ್ರಯಾಣಿಕರು ಪಡೆಯಬಹುದಾಗಿದೆ. ಇದರಿಂದ ನಿಲ್ದಾಣಕ್ಕೆ ಆಗಮಿಸುವ 20 ನಿಮಿಷಗಳ ಮೊದಲು ನಿಮ್ಮ ಫೋನ್‌ಗೆ ಸಂದೇಶವನ್ನು ಕಳುಹಿಸಲಾಗುತ್ತದೆ. ಈ ಹೊಸ ಸೌಲಭ್ಯದ ಮೂಲಕ ನಿಮ್ಮ ನಿಲ್ದಾಣವನ್ನು ಸುಲಭವಾಗಿ ತಲುಪಬಹುದಾದ್ದು, ಪ್ರಯಾಣಿಕರ ರಕ್ಷಣೆಯನ್ನು ಗಮನದಲ್ಲಿರಿಸಿ ರೈಲ್ವೆ ಇಲಾಖೆ ತೀರ್ಮಾನ ಕೈಗೊಂಡಿದೆ.ಇದರಿಂದ ಐಆರ್‌ಸಿಟಿಸಿಯು ಪ್ರಯಾಣಿಕರು ತಾವು ಇಳಿದುಕೊಳ್ಳಬೇಕಾದ ಸ್ಥಳದ ಬಗ್ಗೆ ಮಾಹಿತಿ ಪಡೆಯಲು ಹೊಸ ಸೌಲಭ್ಯ ಒದಗಿಸಲಾಗಿದೆ.

Leave A Reply

Your email address will not be published.