Strong Bones : ಈ 5 ಪದಾರ್ಥ ದೇಹಕ್ಕೆ ಹೊಕ್ಕರೆ ಮೂಳೆಗಳು ಸ್ಟ್ರಾಂಗ್‌ ಆಗೋದರಲ್ಲಿ ಸಂಶಯವೇ ಇಲ್ಲ!

Strong Bones : ನಮ್ಮ ದೇಹದಲ್ಲಿ ವಯಸ್ಸಾದ ಮೇಲೆ ಮೂಳೆಗಳು(Bones) ಹೆಚ್ಚು ಸವೆಯುವುದು ಅಥವಾ ಮುರಿದುಕೊಳ್ಳುವುದು ಈ ರೀತಿ ಸಮಸ್ಯೆ ಕಂಡು ಬರುತ್ತಿರುತ್ತವೆ ಆದ್ದರಿಂದ ನಮ್ಮ ದೇಹದ ಸೌಂದರ್ಯಕ್ಕಾಗಿ(Beauty) ಆರೈಕೆಯನ್ನು ಹೇಗೆ ಮಾಡಿಕೊಳ್ಳುತ್ತೇವೋ, ಅದೇ ರೀತಿ ದೇಹದ ಒಳಗಿನ ಅಂಗಾಂಗಗಳಿಗೂ ಕೂಡ ಆರೈಕೆ ಅವಶ್ಯಕತೆ ಇರುತ್ತದೆ ಮತ್ತು ಅದು ಪ್ರಮುಖವಾಗಿ ಆಹಾರಗಳ(Food) ರೂಪದಲ್ಲಿ ಆಗಿರುತ್ತದೆ . ನಮ್ಮ ದೇಹಕ್ಕೆ ಮೂಳೆಗಳು ದೇಹದ ಮಾಂಸಖಂಡಗಳಿಗೆ ಬಲ ಹಾಗೂ ಪುಷ್ಟಿ ಕೊಟ್ಟು ನಮಗೊಂದು ಸರಿಯಾದ ಆಕಾರ ಕೊಡುವ ಜೊತೆಗೆ ನಮ್ಮನ್ನು ಸದೃಢರನ್ನಾಗಿ ಇಡಲು ನಾವು ಸರಿಯಾದ ಪೌಷ್ಟಿಕ ಆಹಾರ ಸೇವಿಸಬೇಕು. ಆದ್ದರಿಂದ ಈ ಕೆಳಗೆ ಪೌಷ್ಟಿಕ ಆಹಾರವನ್ನು ಪಟ್ಟಿ ಮಾಡಲಾಗಿದೆ.

• ಬಾಳೆಹಣ್ಣು( Banana) : ಪೊಟಾಸಿಯಂ, ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಇರುವ ಹಣ್ಣು ಅಂದರೆ ಅದು ಬಾಳೆಹಣ್ಣು ಮಾತ್ರ. ಮೂಳೆಗಳನ್ನು ಬಲಪಡಿಸುವಲ್ಲಿ ( Strong Bones) ಈ ಮೂರು ಬಗೆಯ ಪೌಷ್ಟಿಕ ಸತ್ವಗಳು ಕೆಲಸ ಮಾಡುತ್ತವೆ. ಅಲ್ಲದೆ ನಿಮ್ಮ ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆಯನ್ನು ಸಹ ಬಾಳೆಹಣ್ಣು ಅಭಿವೃದ್ಧಿಪಡಿಸುತ್ತದೆ

• ಬೆಲ್ಲ (Jagerry): ಇದನ್ನು ಸಕ್ಕರೆಗೆ ಪರ್ಯಾಯವಾಗಿ ಬಳಸಲಾಗುತ್ತದೆ, ಆದರೆ ಇದು ಮೂಳೆಗಳಿಗೆ ಸಹ ಪ್ರಯೋಜನಕಾರಿಯಾಗಿದೆ, ಏಕೆಂದರೆ ಬೆಲ್ಲದಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂ ಪೋಷಕಾಂಶಗಳು ಕಂಡುಬರುತ್ತವೆ.

• ಬೀನ್ಸ್ (Beans): ತರಕಾರಿಯಲ್ಲಿ ಬೀನ್ಸ್ ತಿನ್ನಲೇಬೇಕು, ಇದರ ಮೂಲಕ ನಮ್ಮ ಮೂಳೆಗಳು ಅದ್ಭುತವಾದ ಶಕ್ತಿಯನ್ನು ಪಡೆಯುತ್ತವೆ. ಬೀನ್ಸ್ ವಿಟಮಿನ್ ಸಿ, ವಿಟಮಿನ್ ಡಿ, ಸತು ಮತ್ತು ಕಬ್ಬಿಣದಂತಹ ಪ್ರಮುಖ ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ.

• ಒಣ ಹಣ್ಣುಗಳು: ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಇದರಲ್ಲಿ ಯಥೇಚ್ಛವಾಗಿ ಕಂಡುಬರುತ್ತದೆ, ಒಣ ದ್ರಾಕ್ಷಿ ಅಂತಹ ಕೆಲವು ಒಣ ಹಣ್ಣುಗಳು ವಿಟಮಿನ್ ಡಿ ಅನ್ನು ಸಹ ಒಳಗೊಂಡಿರುತ್ತವೆ, ಇದು ಮೂಳೆಗಳಿಗೆ ಎಲ್ಲಾ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ.

• ಮೊಟ್ಟೆ (Egg): ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಜೊತೆಗೆ, ಪ್ರೋಟೀನ್ ಕೂಡ ಇದರಲ್ಲಿ ಸಾಕಷ್ಟು ಕಂಡುಬರುತ್ತದೆ. ಇದು ಮೂಳೆಗಳನ್ನು ಬಲಪಡಿಸುವುದಲ್ಲದೆ, ಸ್ನಾಯುಗಳನ್ನು ಬಲಪಡಿಸುತ್ತದೆ.

• ಹಾಲು (Milk): ಹಾಲಿನಲ್ಲಿ ಅನೇಕ ರೀತಿಯ ಪೋಷಕಾಂಶಗಳು ಕಂಡುಬಂದರೂ, ಅದರಲ್ಲಿರುವ ಕ್ಯಾಲ್ಸಿಯಂ ನಮ್ಮ ಮೂಳೆಗಳಿಗೆ ಪ್ರಯೋಜನವನ್ನು ನೀಡುತ್ತದೆ. ನೀವು ಪ್ರತಿದಿನ ಒಂದು ಲೋಟ ಹಾಲು ಕುಡಿದರೆ ಮೂಳೆಗಳು ಗಟ್ಟಿಯಾಗುತ್ತದೆ.

• ಒಣ ಬೀಜಗಳು : ಕಡಲೆ ಬೀಜ ಮತ್ತು ಬಾದಾಮಿ ಬೀಜ ಇವುಗಳಲ್ಲಿ ಪೋಟಾಸಿಯಂ ಪ್ರಮಾಣ ಹೆಚ್ಚಾಗಿದ್ದು, ಮೂತ್ರ ವಿಸರ್ಜನೆಯ ಸಂದರ್ಭ ದಲ್ಲಿದೇಹದಿಂದ ಕ್ಯಾಲ್ಸಿಯಂ ಹೆಚ್ಚಾಗಿ ಹೊರ ಹೋಗು ವುದನ್ನು ತಡೆಯುತ್ತವೆ. ಪ್ರೋಟೀನ್ ಮತ್ತು ಇನ್ನಿತರ ಪೌಷ್ಟಿಕ ಸತ್ವಗಳು ಹೆಚ್ಚಾಗಿ ಸಿಗುವ ಇವುಗಳನ್ನು ಸೇವನೆ ಮಾಡುವುದರಿಂದ ಆರೋ ಗ್ಯಕರವಾದ ಮತ್ತು ಗಟ್ಟಿಮುಟ್ಟಾದ ಮೂಳೆ ಗಳನ್ನು ಪಡೆಯಬಹುದಾಗಿದೆ.

• ಹಸಿರು ತರಕಾರಿ (Green Vegetables) : ಪಾಲಕ್ ಸೊಪ್ಪು, ಈರುಳ್ಳಿ ಹೂವು, ಮೆಂತ್ಯ ಸೊಪ್ಪು, ಹೂಕೋಸು, ಬ್ರೊಕೋಲಿ ಇತ್ಯಾದಿಗಳಲ್ಲಿ ಕ್ಯಾಲ್ಸಿಯಂ ಪ್ರಮಾಣ ಅಪಾರವಾಗಿ ಕಂಡುಬರುತ್ತದೆ. ಹಸಿರು ತರಕಾರಿಯಿಂದ ದಿನನಿತ್ಯದ ಅಗತ್ಯತೆಗೆ ತಕ್ಕಂತೆ ಕ್ಯಾಲ್ಸಿಯಂ ಸಿಗುತ್ತದೆ.

• ಮೀನು (Fish) : ಸಮುದ್ರಾಹಾರ ಸಾಲ್ಮನ್ ಮತ್ತು ಸಾರ್ಡೀನ್ ಗಳಲ್ಲಿ ವಿಟಮಿನ್ ಡಿ ಅಂಶದ ಪ್ರಮಾಣ ಹೆಚ್ಚಾಗಿರುವುದರಿಂದ ಜೊತೆಗೆ ಒಮೆಗ 3 ಫ್ಯಾಟಿ ಆಸಿಡ್ ಅಂಶಗಳು ಕೂಡ ಸಿಗುವುದರಿಂದ, ವಯಸ್ಸಾದಂತೆ ಮೂಳೆಗಳ ಸವೆತ ಉಂಟಾಗುವ ಸಾಧ್ಯತೆ ಇರುವುದಿಲ್ಲ. ಮೂಳೆಗಳ ದುರ್ಬಲತೆ ದೂರವಾಗಿ ಸದೃಡತೆ ಸಿಗುತ್ತದೆ.

ಈ ರೀತಿಯಾಗಿ ಪ್ರೋಟೀನ್ ಮತ್ತು ಇನ್ನಿತರ ಪೌಷ್ಟಿಕ ಸತ್ವಗಳು ಹೆಚ್ಚಾಗಿ ಸಿಗುವ ಆಹಾರವನ್ನು ಸೇವನೆ ಮಾಡುವುದರಿಂದ ಆರೋಗ್ಯಕರವಾದ ಮತ್ತು ಗಟ್ಟಿಮುಟ್ಟಾದ ಮೂಳೆ ಗಳನ್ನು ಪಡೆಯಬಹುದಾಗಿದೆ.

Leave A Reply

Your email address will not be published.