Flying Taxi Service : ಬರಲಿದೆ 2026 ರ ವೇಳೆಗೆ ಹಾರುವ ಟ್ಯಾಕ್ಸಿಗೆ ಚಾಲನೆ, ಕಡಿಮೆ ಬೆಲೆಗೆ ರೈಡ್ ಲಭ್ಯ!
Flying Taxi Service: ಸಾಮನ್ಯವಾಗಿ ಈಗಂತೂ ಎಲ್ಲಾ ರಸ್ತೆಗಳಲ್ಲು ಟ್ರಾಫಿಕ್, ಟ್ರಾಫಿಕ್, ಟ್ರಾಫಿಕ್. ದೊಡ್ಡ ದೊಡ್ಡ ವಾಹನ ಚಾಲಕರಿಗಂತು ಇನ್ನು ಹೆಚ್ಚಿನ ಕಿರಿಕಿರಿ. ನುಸುಳಿಕೊಂಡು ಹೋಗೋಣವೆಂದರೆ ಅದು ಅಸಾಧ್ಯದ ಮಾತು. ಆದ್ರೆ, ಇಲ್ಲೊಂದು ದೇಶದಲ್ಲಿ ಹೊಸ ಕಾರೊಂದನ್ನು ಆವಿಷ್ಕಾರ ಮಾಡಲು ತಯಾರಾಗಿದ್ದು, ಈ ಕಾರನ್ನು ಆಕಾಶದಲ್ಲಿ ಹಾರಡಿಸಲು ಸಜ್ಜಾಗಿದ್ದಾರೆ. ಎಲ್ಲಿ ಗೊತ್ತಾ? ಈ ಇಂಟ್ರೆಸ್ಟಿಂಗ್ ಮಾಹಿತಿಯನ್ನು ನೀವೊಮ್ಮೆ ನೋಡಿ.
ಹೌದು, ಇನ್ನು ಮುಂದೆ ದುಬೈನಲ್ಲಿ ಹಾರುವ ಕಾರುಗಳು ಬರಲಿವೆಯಂತೆ. 2026 ರ ವೇಳೆಗೆ ದುಬೈನಲ್ಲಿ ಏರ್ ಟ್ಯಾಕ್ಸಿಗಳು (Flying Taxi service) ಆಕಾಶದಲ್ಲು ಸಂಚರಿಸಲಿವೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) (United Arab Emirates) ಉಪಾಧ್ಯಕ್ಷ ಮತ್ತು ಪ್ರಧಾನ ಮಂತ್ರಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್(Mohammed bin Rashid Al Maktoum) ಅವರು ಘೋಷಿಸಿದ್ದಾರೆ. ದುಬೈನಲ್ಲಿ ಹಾರುವ ಟ್ಯಾಕ್ಸಿ ಸೇವೆಯ ಯೋಜನೆಗಳು ಮತ್ತೆ ರೂಪುಗೊಂಡಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ಶೇಖ್ ಮೊಹಮ್ಮದ್ ” ಇಂದು ನಾವು ದುಬೈನಲ್ಲಿ ಫ್ಲೈಯಿಂಗ್ ಟ್ಯಾಕ್ಸಿ ವರ್ಟಿಪೋರ್ಟ್ಗಳ ವಿನ್ಯಾಸಗಳನ್ನು ಅನುಮೋದಿಸಿದ್ದು, ಮುಂದಿನ ಮೂರು ವರ್ಷಗಳಲ್ಲಿ ಇವು ತಮ್ಮ ಕಾರ್ಯವನ್ನು ಪ್ರಾರಂಭಿಸಲಿವೆ. ಇದನ್ನು ದುಬೈನ ವಾರ್ಷಿಕ ವಿಶ್ವ ಶೃಂಗಸಭೆಯಲ್ಲಿ ಪ್ರದರ್ಶಿಸಲು ಹೆಚ್ಚಿನ ಸಮಯವನ್ನು ನಿಗದಿಪಡಿಸಲಾಗಿದ್ದು, ಈ ವರ್ಷದ ಆವೃತ್ತಿಯು ಮುಂದಿನ ಸೋಮವಾರದಿಂದ ಪ್ರಾರಂಭವಾಗುತ್ತದೆ” ಎಂದಿದ್ದಾರೆ.
ಈ ಏರ್ ಟ್ಯಾಕ್ಸಿ( Air Taxis) ಗಳು ಉಬರ್ ರೈಡ್ನಷ್ಟು ಕಡಿಮೆ ವೆಚ್ಚವನ್ನು ಹೊಂದಿರಲಿವೆ. ಶ್ರೀಮಂತರಿಂದ ಹಿಡಿದು ಸಾಮಾನ್ಯ ಪ್ರಜೆಗಳು ಸೇರಿದಂತೆ ಎಲ್ಲರೂ ಬಳಸಬಹುದಾದ ಸಾಮಾನ್ಯ ಏರ್ ಟ್ಯಾಕ್ಸಿ ಸೇವೆಯಾಗಿ ಇರಲಿದೆ. ಮುಂಬರುವ ದಿನಗಳಲ್ಲಿ ನಗರದಲ್ಲಿ ವಾಸಿಸುವ ಅನೇಕ ಜನರಿಗೆ ಇದು ದಿನನಿತ್ಯದ ಸಾರಿಗೆ ವಿಧಾನವಾಗಿ ಪರಿಣಮಿಸುತ್ತದೆ. ಸಾರ್ವಜನಿಕರ ಗಮ್ಯ ಸ್ಥಳಗಳನ್ನು ಇತರ ಸಾರಿಗೆಗಳಿಗಿಂತ ವೇಗವಾಗಿ ತಲುಪಬಹುದಾಗಿದ್ದು, ಇದು ನಗರಗಳಲ್ಲಿನ ಟ್ರಾಫಿಕ್ ನಿಯಂತ್ರಣಕ್ಕೆ ಪರ್ಯಾಯವಾಗಲಿದೆ.
ಅಂತಿಮವಾಗಿ ವಾಹನಗಳ ಉತ್ಪಾದನೆಯು ಹೆಚ್ಚಾದಂತೆ, ತಂತ್ರಜ್ಞಾನದ ವೆಚ್ಚವು ಕಡಿಮೆಯಾಗುತ್ತದೆ. ನಾವು ಹೆಚ್ಚು ಬೇಡಿಕೆಯನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ, . ದುಬೈ ಭವಿಷ್ಯವು ಸಂಪೂರ್ಣ ಬದಲಾಗಲಿದೆ ಎಂದು ನಮಗೆ ವಿಶ್ವಾಸವಿದೆ ಎಂದರು.
ಹಾರುವ ಟ್ಯಾಕ್ಸಿಗಳು ಸುಮಾರು 240 ಕಿ.ಮೀ ವ್ಯಾಪ್ತಿ ಮತ್ತು 300 ಕಿ.ಮೀ ಗರಿಷ್ಟ ವೇಗವನ್ನು ಹೊಂದಿರುತ್ತವೆ. ಬಹ್ರೋಜ್ಯಾನ್ ಅವರ ಪ್ರಕಾರ, ದುಬೈನಿಂದ ಅಬುಧಾಬಿ ಮತ್ತು ದುಬೈನಿಂದ ಫುಜೈರಾದಿಂದ ಇಂಟರ್ಸಿಟಿ ಪ್ರಯಾಣಕ್ಕೆ ಸೀಮಿತವಾಗಿರುತ್ತದೆ. ಇದೇನಾದರೂ ಶೀಘ್ರದಲ್ಲೇ ನಿಜವಾದರೆ, ದುಬೈನಿಂದ ಅಬುಧಾಬಿಗೆ ಪ್ರಯಾಣದ ಸಮಯ 30 ನಿಮಿಷಗಳಷ್ಟೆ. ಅಲ್ಲದೇ ಈ ಸಾರಿಗೆ ಯಶಸ್ವಿಯಾಗಿ ಮುನ್ನಡೆದರೆ ದುಬೈನ ಇತರ ನಗರಗಳಿಗೂ ಸೇವೆ ಒದಗಿಸುವ ಸಾಧ್ಯತೆಗಳಿವೆ.
ವಿಶ್ವದ ಮೊದಲ ಚೀನಾ(China) ತಯಾರಿಕೆಯ, ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ(Electric flying car) ನ್ನು ದುಬೈನ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನ ಆಕಾಶದಲ್ಲಿ ಹಾರಿಸಲಾಯಿತು. ಚೀನಾ Xpeng Inc ಕಂಪನಿ ತಯಾರಿಸಿರುವ X2 ಹೆಸರಿನ ಹಾರುವ ಕಾರನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಕಾರನ್ನು VTOL ಎಂದು ಕರೆಯಲಾಗುವ ವರ್ಟಿಕಲ್ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿದೆ. X2 ಹಾರುವ ಕಾರು ವಿಮಾನ ನಿಯಂತ್ರಣ ವ್ಯವಸ್ಥೆ ಮತ್ತು ಆಟೋಮ್ಯಾಟಿಕ್ ಹಾರಾಟದ ಸಾಮರ್ಥ್ಯಗಳನ್ನು ಹೊಂದಿದೆ. ಈ ಹಾರುವ ಕಾರನ್ನು ಯಾರೂ ನಿಯಂತ್ರಿಸುವ ಅಗತ್ಯವಿಲ್ಲ. ಈ ಕಾರಿನಲ್ಲಿ ಏಕಕಾಲದಲ್ಲಿ ಇಬ್ಬರಿಗೆ ಆಸೀನರಾಗಲು ಅವಕಾಶವಿದೆ.
ಈ ವಿಮಾನವನ್ನು ಹಾರಿಸಲು ಒಟ್ಟು 8 ಪ್ರೊಪೆಲ್ಲರ್ಗಳನ್ನು ನೀಡಲಾಗಿದೆ. ಈ ವಿಮಾನವು ಪ್ರತಿ ಮೂಲೆಯಲ್ಲಿ 2 ಪ್ರೊಪೆಲ್ಲರ್ಗಳೊಂದಿಗೆ ಒಟ್ಟು 4 ಮೂಲೆಗಳಲ್ಲಿ 8 ಪ್ರೊಪೆಲ್ಲರ್ಗಳೊಂದಿಗೆ ಹಾರುತ್ತದೆ. ಗಂಟೆಗೆ 130 ಕಿ.ಮೀ ವೇಗದಲ್ಲಿ ಹಾರುವ ಬಲಿಷ್ಟ ಸಾಮರ್ಥ್ಯವನ್ನು ಪಡೆದಿದೆ.