blockbuster Movie: 90ರ ದಶಕದ ಈ ಬ್ಲಾಕ್​ಬಸ್ಟರ್​ ಮೂವಿ, ರಿಲೀಸಾದಾಗ ತೋಪೆದ್ದು ಹೋಗಿತ್ತಂತೆ! ಹಾಗಿದ್ರೆ ಬ್ಲಾಕ್​ಬಸ್ಟರಾದ ಈ ಚಿತ್ರದ ಯಶಸ್ಸಿನ ವಿಚಿತ್ರ ಸತ್ಯವೇನು ಗೊತ್ತಾ?

1994ರಲ್ಲಿ ಈ ಚಿತ್ರ ಭಾರತೀಯ ಸಿನಿ ರಂಗದಲ್ಲೇ ದೊಡ್ಡ ಹವಾ ಸೃಷ್ಟಿ ಮಾಡಿತ್ತು. ಆಗಿನ ಕಾಲದಲ್ಲೇ ನಾಲ್ಕೂವರೆ ಕೋಟಿ ಬಜೆಟ್ನಲ್ಲಿ ತೆಗೆದ ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸುಮಾರು 250 ಕೋಟಿ ರೂಪಾಯಿ ಗಳಿಕೆ ಮಾಡುತ್ತದೆ ಎಂದರೆ ನಂಬೋಕೇ ಅಸಾಧ್ಯ. ಆದರೆ ಆರಂಭದಲ್ಲಿ ಈ ಚಿತ್ರ ಚೆನ್ನಾಗಿ ಓಡಲೇ ಇಲ್ವಂತೆ. ಆದರೆ ಈ ನಿರ್ದೇಶಕ ನೀಡಿದ ಒಂದೇ ಒಂದು ಸಲಹೆಯಿಂದ ಅದು ಬ್ಲಾಕ್​ಬಸ್ಟರ್​ ಆಯಿತಂತೆ! ಆ ಸಮಯದಲ್ಲೇ ನೂರಾರು ಕೋಟಿ ಬಾಚಿದ ಸಿನಿಮಾವೊಂದು ಆರಂಭದಲ್ಲಿ ನಯಾಪೈಸೆಯನ್ನೂ ಗಳಿಸಲಿಲ್ಲ ಎಂದರೆ ನಿಮಗೆ ಆಶ್ಚರ್ಯ ಆಗಬಹುದಲ್ವೇ? ಹಾಗಾದ್ರೆ ಯಾವುದಾ ಸಿನಿಮಾ? ಆರಂಭದಲ್ಲಿ ಅದಕ್ಕೆ ಬಂದ ಆಪತ್ತಾದರೂ ಏನು? ಅದು ಬಗೆಹರಿದದ್ದಾರೂ ಹೇಗೆ?

ಹೌದು, ಸುಮಾರು 90ರ ದಶಕದ ಸಮಯದಲ್ಲೇ ನಾಲ್ಕೂವರೆ ಕೋಟಿ ಬಜೆಟ್ನಲ್ಲಿ ತೆಗೆದ ಚಿತ್ರವೊಂದು ಬಾಕ್ಸ್​ ಆಫೀಸ್​ನಲ್ಲಿ ಬರೋಬ್ಬರಿ 250 ಕೋಟಿ ರೂಪಾಯಿ ಗಳಿಕೆ ಮಾಡುತ್ತದೆ ಎಂದರೆ ಸುಲಭದ ಮಾತಲ್ಲ. ಅದೂ 30 ವರ್ಷಗಳ ಹಿಂದಿನ ಚಿತ್ರವೊಂದು ಇಷ್ಟೊಂದು ಸೂಪರ್​ ಹಿಟ್​ ಆಗಿ ಬ್ಲಾಕ್​ಬ್ಲಸ್ಟರ್​ ಸ್ಥಾನಕ್ಕೇರುವುದೆಂದರೆ ಇನ್ನೂ ಸ್ವಲ್ಪ ಕಷ್ಟವೇ. ಹಾಗಾದ್ರೆ ಆಗಲೇ ಅಷ್ಟೊಂದು ಗಳಿಕೆ ಮಾಡಿರುವ ಚಿತ್ರ ಯಾವುದೆಂದು ಯೋಚಿಸ್ತಿದ್ದೀರಾ? ಅದು ಬೇರೆ ಯಾವ್ದೂ ಅಲ್ಲ, ಸಲ್ಮಾನ್​ ಖಾನ್​, ಮಾಧುರಿ ದೀಕ್ಷಿತ್​, ರೇಣುಕಾ ಶಹಾನೆ ನಟನೆಯ ‘ಹಮ್ ಆಪ್​ ಕೇ ಹೈ ಕೌನ್’ ಸಿನಿಮಾ!

ಇದೀಗ ಈ ಚಿತ್ರ ಬಿಡುಗಡೆಯಾಗಿ ಸುಮಾರು 30 ವರ್ಷ ಆಗುತ್ತಾ ಬಂದಿದೆ. 1994ರಲ್ಲಿ ಈ ಚಿತ್ರ ಭಾರತೀಯ ಸಿನಿ ರಂಗದಲ್ಲಿ ದೊಡ್ಡ ಹವಾ ಸೃಷ್ಟಿ ಮಾಡಿತ್ತು. ಸಲ್ಮಾನ್​ ಮತ್ತು ಮಾಧುರಿ ಜೋಡಿ ಸೂಪರ್​ಹಿಟ್​ ಆಯಿತು. ಇವರಿಬ್ಬರ ಜೊತೆ ನಟಿ ರೇಣುಕಾ ಶಹಾನೆ ಅವರ ಅದೃಷ್ಟವೂ ಬದಲಾಯಿಸಿತು. ಚಿತ್ರವು ದಾಖಲೆಗಳ ಮೇಲೆ ದಾಖಲೆ ಬರೆದು ಥಿಯೇಟರ್‌ಗಳಲ್ಲಿ ಹೆಚ್ಚು ಕಾಲ ಓಡಿದ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇನ್ನೇನು ಕೆಲವೇ ತಿಂಗಳು ಕಳೆದರೆ ಈ ಚಿತ್ರ ಬಿಡುಗಡೆಯಾಗಿ 30 ವರ್ಷ ಕಳೆಯುತ್ತದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ಸೂರಜ್​ ಬರ್ಜತ್ಯಾ ಚಿತ್ರವನ್ನು ನೆನಪು ಮಾಡಿಕೊಂಡಿದ್ದಾರೆ.

90ರ ದಶಕದಲ್ಲೇ ಬರೋಬ್ಬರಿ 250 ಕೋಟಿ ಗಳಿಸಿದ ಈ ಚಿತ್ರ ಚೆನ್ನಾಗಿ ಓಡಲಿಲ್ಲ ಎಂದರೆ ಜನರು ಈಗಲೂ ನಂಬುವುದಿಲ್ಲ. ಆದರೆ ನಿಜ ಏನೆಂದರೆ, ನಿಜವಾಗಿಯೂ ಈ ಚಿತ್ರ ಓಡಿಯೇ ಇರಲಿಲ್ಲ ಎನ್ನುವ ಸತ್ಯ ಕೆಲವರಿಗೆ ಮಾತ್ರ ಗೊತ್ತಿತ್ತಂತೆ. ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಮಾಡಿದ ಯಶ್ ರಾಜ್ ಫಿಲ್ಮ್ಸ್ ಜರ್ನಿ ಆಧಾರಿತ ದಿ ರೊಮ್ಯಾಂಟಿಕ್ಸ್‌ನಲ್ಲಿ ಚಿತ್ರದ ನಿರ್ದೇಶಕ ಸೂರಜ್ ಬರ್ಜತ್ಯಾ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕುತೂಹಲದ ಅಂಶವೊಂದನ್ನು ಹೇಳಿದ್ದಾರೆ. ಅದೇನೆಂದರೆ ಹಮ್​ ಆಪ್​ ಕೆ ಹೈ ಕೌನ್​ ಚಿತ್ರ ಆರಂಭದಲ್ಲಿ ಚೆನ್ನಾಗಿ ಓಡಲೇ ಇಲ್ವಂತೆ. ಆದರೆ ನಿರ್ದೇಶಕ ಆದಿತ್ಯ ಚೋಪ್ರಾ ಅವರು ನೀಡಿದ ಒಂದೇ ಒಂದು ಸಲಹೆಯಿಂದ ಅದು ಬ್ಲಾಕ್​ಬಸ್ಟರ್​ ಆಯಿತು ಎಂದಿದ್ದಾರೆ.

ಅಷ್ಟಕ್ಕೂ ಆಗ ನಡೆದದ್ದೇನು? ಈ ರೀತಿ ಮ್ಯಾಜಿಕ್​ ಸಂಭವಿಸಿದ್ದು ಹೇಗೆ ಗೊತ್ತಾ? ಓಡದ ಚಿತ್ರ ಒಂದೇ ಬಾರಿಗೆ ಎಲ್ಲೂ ನಿಲ್ಲದಂತೆ ಓಡಲು ಕಾರಣವೇನು ಎಂಬ ಕಾರಣವೂ ಅಷ್ಟೇ ಕುತೂಹಲವಾದದ್ದು. ಈ ಕುರಿತು ಮಾತನಾಡಿದ ನಿರ್ದೇಶಕ ಸೂರಜ್ ‘ಮೈನೆ ಪ್ಯಾರ್​ ಕಿಯಾ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗದ ಕಾರಣ ಅಸಮಾಧಾನಗೊಂಡೆ. ನಂತರ ನಾನು ಆದಿತ್ಯ ಚೋಪ್ರಾ ಅವರಿಂದ ಸಲಹೆ ಕೇಳಿದೆ. ಅವರು ಒಂದೇ ಒಂದು ಸಲಹೆ ಕೊಟ್ಟರು. ಅದು ಸಾಧ್ಯವೇ ಎಂದು ನನಗೆ ಎನಿಸಿಯೂ ಇರಲಿಲ್ಲ. ಆದರೆ ಆ ಕ್ಷಣದಲ್ಲಿ ಚಿತ್ರ ಓಡಲು ಏನು ಬೇಕಾದರೂ ಮಾಡಲು ಸಿದ್ಧನಿದ್ದೆ. ಅವರು ಕೊಟ್ಟ ಸಲಹೆ ಬಹಳ ಸುಲಭದ್ದಾಗಿತ್ತು. ಅದನ್ನು ಮಾಡಿದೆ. ಚಿತ್ರ ಬ್ಲಾಕ್​ಬಸ್ಟರ್​ ಆಯಿತು. 250 ಕೋಟಿ ರೂಪಾಯಿ ಆಗಿನ ಕಾಲದಲ್ಲಿಯೇ ಸಂಪಾದನೆ ಮಾಡಿ ಹೊಸ ದಾಖಲೆ ಬರೆಯಿತು ಎಂದಿದ್ದಾರೆ.

ಹಾಗಾದ್ರೆ ಆದಿತ್ಯ ಚೋಪ್ರಾ ಅವರು ಕೊಟ್ಟ ಸಲಹೆಯಾದ್ರೂ ಏನು ಅಂತ ಕುತೂಹಲ ಕಾಡ್ತಿದಿಯಾ? ಅದೇನಂದ್ರೆ ಚಿತ್ರದಲ್ಲಿನ ಒಂದೋ, ಎರಡೋ ಹಾಡನ್ನು ತೆಗೆದುಹಾಕು ಎನ್ನುವುದು! ಹೌದು, ಅದರಂತೆ ಆದಿತ್ಯ ಚೋಪ್ರಾ ನಡೆದುಕೊಂಡರು. ಚಿತ್ರದ ಎರಡು ಹಾಡಿಗೆ ಕತ್ತರಿಹಾಕಿದರು. ಈ ಮೂಲಕ ಚಿತ್ರದ ರನ್​ಟೈಮ್​ ಕಡಿತಗೊಳಿಸಿದರು. ಅದೇನು ಮ್ಯಾಜಿಕ್ಕೋ ಗೊತ್ತಿಲ್ಲ. ಚಿತ್ರ ಒಂದೇ ಸಮನೆ ನಾಗಲೋಟದಲ್ಲಿ ಓಡತೊಡಗಿತಂತೆ. ನಾಲ್ಕೂವರೆ ಕೋಟಿ ಬಜೆಟ್ನಲ್ಲಿ ತೆಗೆದ ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸುಮಾರು 250 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಬರೆದು ಎಲ್ಲರ ಮನೆಮಾತಾಗಿಬಿಡ್ತಂತೆ!

Leave A Reply

Your email address will not be published.