Best SmartPhones : ಬಿಗ್ ಬ್ಯಾಟರಿ ಹೊಂದಿರುವ ರೂ.20,000 ಒಳಗಿನ ಬೆಸ್ಟ್ ಸ್ಮಾರ್ಟ್‌ಫೋನ್ ಗಳ ಪಟ್ಟಿ ಇಲ್ಲಿದೆ!
ಭಾರತದ ಮೊಬೈಲ್ ಮಾರುಕಟ್ಟೆ ಸಾಕಷ್ಟು ವಿಶಾಲವಾಗಿದೆ. ಹಲವು ಪ್ರತಿಷ್ಠಿತ ಸ್ಮಾರ್ಟ್‌ಫೋನ್ (smartphone )ಕಂಪೆನಿಗಳು ತಮ್ಮ ವಿಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಲೇ ಇದೆ . ಇತ್ತೀಚಿಗೆ ಒಂದಲ್ಲಾ ಎರಡಲ್ಲ ಸಾವಿರಾರು ಆಯ್ಕೆಗಳಲ್ಲಿ ಸ್ಮಾರ್ಟ್ ಫೋನ್ಗಳು ಇವೆ. ಸದ್ಯ ಯಾವುದು ಬೆಸ್ಟ್ ಅನ್ನೋದು ನೋಡಿ ಸೆಲೆಕ್ಟ್ (select)ಮಾಡೋದು ಮಾತ್ರ ನಮ್ಮ ಕೆಲಸ ಅಷ್ಟೇ.
ಸದ್ಯ ಮಾರುಕಟ್ಟೆಯಲ್ಲಿಂದು ಬಿಡುಗಡೆ ಆಗುತ್ತಿರುವ ಹೆಚ್ಚಿನ ಸ್ಮಾರ್ಟ್ಫೋನ್ಗಳು ಅತ್ಯುತ್ತಮ ಕ್ಯಾಮೆರಾ (Camera) ಮತ್ತು ಅಧಿಕ ಬ್ಯಾಟರಿ ಪವರ್ನಿಂದ ಕೂಡಿರುತ್ತದೆ. ಮುಖ್ಯವಾಗಿ 5,000mAh ಹಾಗೂ 6,000mAh ಸಾಮರ್ಥ್ಯದ ಮೊಬೈಲ್‌ಗಳು ಹೆಚ್ಚಾಗಿ ಸೇಲ್ ಆಗುತ್ತದೆ. ನೀವು ಕೂಡ ಅಧಿಕ ಬ್ಯಾಟರಿಯ ಹೊಸ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಆಕರ್ಷಕ ಫೀಚರ್ಸ್ ಜೊತೆಗೆ ಉತ್ತಮ ಬ್ಯಾಟರಿಯ ಸ್ಮಾರ್ಟ್ಫೋನ್ಗಳ (Smartphones) ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
• ರೆಡ್ಮಿ ನೋಟ್ 11T 5G:
ರೆಡ್ಮಿ ನೋಟ್ 11T 5G ಸ್ಮಾರ್ಟ್‌ಫೋನ್ 6.6-ಇಂಚಿನ ಫುಲ್ HD+ ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾ ಟೆಕ್ 810 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 33W ಪ್ರೊ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಭಾರತದಲ್ಲಿ ಈ ಸ್ಮಾರ್ಟ್‌ಫೋನ್ 15,999ರೂ. ಬೆಲೆಯನ್ನು ಹೊಂದಿದೆ.
• ಮೋಟೋ G62 5G:
ಭಾರತದಲ್ಲಿ Moto G52 4GB RAM ಮತ್ತು 64GB ಸ್ಟೋರೇಜ್ ಮಾದರಿಗೆ 14,499 ರೂ. ನಿಗದಿ ಮಾಡಲಾಗಿದೆ. ಅಂತೆಯೆ ಈ ಫೋನ್ನ 6 GB RAM ಮತ್ತು 128 GB ಸ್ಟೋರೇಜ್ ಮಾದರಿಯ ಬೆಲೆ 18,499 ರೂ. ಇದೆ. 5000mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ನೀಡಲಾಗಿದ್ದು ಒಂದೇ ಚಾರ್ಜ್‌ನಲ್ಲಿ ಒಂದೂವರೆ ದಿನ ಬಾಳಿಕೆ ಬರುತ್ತದೆ. ವಿಶೇಷ ಎಂದರೆ ಇದು 5G ಸಂಪರ್ಕ ಪಡೆದುಕೊಂಡಿದೆ. ಇವುಗಳ ಹೊರತಾಗಿ, ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 695 ಚಿಪ್‌ಸೆಟ್, ಮತ್ತು 50MP ಪ್ರಾಥಮಿಕ ಲೆನ್ಸ್‌ನ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ.
• ಸ್ಯಾಮ್‌ಸಂಗ್ ಗ್ಯಾಲಕ್ಸಿ M33:
ಈ ಸ್ಮಾರ್ಟ್‌ಫೋನ್ ಬಲಿಷ್ಠವಾದ 6000mAh ಬ್ಯಾಟರಿಯೊಂದಿಗೆ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಇಷ್ಟು ದೊಡ್ಡ ಮಟ್ಟದ ಬ್ಯಾಟರಿ ಹೊಂದಿರುವ ಕೆಲವೇ ಫೋನ್ಗಳ ಸಾಲಿಗೆ ಇದುಕೂಡ ಸೇರಿದೆ. ಈ ಫೋನ್ 25W ವೇಗದ ಚಾರ್ಜಿಂಗ್ ಬೆಂಬಲವನ್ನು ಪಡೆದುಕೊಂಡಿದೆ. ಇದು Exynos 1280 ಪ್ರೊಸೆಸರ್ನಿಂದ ಕಾರ್ಯನಿರ್ವಹಿಸುತ್ತದೆ. 6.6-ಇಂಚಿನ FHD+ IPS LCD ಡಿಸ್ ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದೆ. ಫ್ಲಿಪ್ಕಾರ್ಟ್ನಲ್ಲಿ ಈ ಫೋನಿನ ಬೆಲೆ 17,479 ರೂ.
• ಪೋಕೋ X4 ಪ್ರೊ 5G:
5000mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಸ್ಮಾರ್ಟ್ಫೋನ್ನಲ್ಲಿ 67W ಅತ್ಯಂತ ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ ಇದರ ಬೆಲೆ 18450 ರೂ. ಆಗಿದೆ.
• ರೆಡ್ಮಿ 12 5G:
ಇದು 5000mAh ಬ್ಯಾಟರಿಯನ್ನು ಹೊಂದಿದ್ದು 33W ವೈರ್ಡ್ ಚಾರ್ಜಿಂಗ್ನೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವುದೆ. ಸ್ನಾಪ್‌ಡ್ರಾಗನ್ 4 Gen1 ನಿಂದ ಚಾಲಿತವಾಗಿದೆ. 120Hz ರಿಫ್ರೆಶ್ ದರದೊಂದಿಗೆ ಸೂಪರ್ AMOLED ಡಿಸ್ ಪ್ಲೇ ಹೊಂದಿದೆ. 48MP + 8MP + 2 ಮೆಗಾಫಿಕ್ಸೆಲ್ನ ಟ್ರಿಪಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದರ ಬೆಲೆ 17999 ರೂ ಆಗಿದೆ.
• ರಿಯಲ್‌ಮಿ 9 5G (Realme 95g):
ರಿಯಲ್‌ಮಿ 9 5G ಸ್ಮಾರ್ಟ್‌ಫೋನ್ 6.5 ಇಂಚಿನ ಫುಲ್ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 810 5G ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ f/1.8 ಅಪರ್ಚರ್ ಲೆನ್ಸ್ ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಯುಎಸ್‌ಬಿ ಟೈಪ್-ಸಿ ಪೋರ್ಟ್‌ನಲ್ಲಿ 18W ಕ್ವಿಕ್ ಚಾರ್ಜ್ ಬೆಂಬಲಿಸಲಿದೆ. ಈ ಫೋನ್ ಒಂಬತ್ತು ಬ್ಯಾಂಡ್‌ಗಳ ಬೆಂಬಲವನ್ನು ಸಹ ಪಡೆಯುತ್ತದೆ. ಭಾರತದಲ್ಲಿ ಈ ಸ್ಮಾರ್ಟ್‌ಫೋನಿನ ಬೆಲೆ 15,999ರೂ. ಆಗಿದೆ.
• ಟೆಕ್ನೋ ಪೋವಾ ನಿಯೋ 5G:
ಈ ಸ್ಮಾರ್ಟ್‌ಫೋನ್ FHD+ ರೆಸಲ್ಯೂಶನ್‌ನೊಂದಿಗೆ ದೊಡ್ಡ 6.8-ಇಂಚಿನ IPS LCD ಡಿಸ್ ಪ್ಲೇ ಅನ್ನು ಹೊಂದಿದೆ. 120Hz ನ ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. 6000mAh Li-ion ಬ್ಯಾಟರಿಯನ್ನು ನೀಡಲಾಗಿದೆ. ಇದರ ಬೆಲೆ 15499ರೂ. ಆಗಿದೆ.
• ಐಕ್ಯೂ Z6 5G:
ಐಕ್ಯೂ Z6 5G ಸ್ಮಾರ್ಟ್‌ಫೋನ್ 6.58 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ISOCELL JN1 ಸೆನ್ಸಾರ್ ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಆದರೆ ಇದು 5Gಯ ಕೇವಲ ಎರಡು ಬ್ಯಾಂಡ್‌ಗಳ ಬೆಂಬಲವನ್ನು ಪಡೆಯುತ್ತದೆ. ಈ ಸ್ಮಾರ್ಟ್‌ಫೋನಿನ ಬೆಲೆ 16,999ರೂ. ಆಗಿದೆ.
ಈ ಮೇಲಿನ ಸ್ಮಾರ್ಟ್ ಫೋನ್ ಗಳು ಆಕರ್ಷಕ ಫೀಚರ್ಸ್ ಜೊತೆಗೆ ಉತ್ತಮ ಬ್ಯಾಟರಿ ಸಾಮರ್ಥ್ಯ ಒಳಗೊಂಡಿದ್ದು ನೀವು 20,000 ರೂ ಬಜೆಟ್ ಒಳಗೆ ಕೊಂಡುಕೊಳ್ಳಬಹುದಾಗಿದೆ.