Apple Phone Users: ಆಪಲ್ ಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಭಾರತ ಸರ್ಕಾರ!

Apple Phone Users: ಜನಪ್ರಿಯವಾದ ಮೊಬೈಲ್ ಫೋನ್ ಗಳಲ್ಲಿ ಆಪಲ್ ಫೋನ್ ಕೂಡ ಒಂದು. ಸುರಕ್ಷತೆಯೊಂದಿಗೆ ಉತ್ತಮ ಫೀಚರ್ ನೀಡುವ ಈ ಫೋನ್ ಅನ್ನು ಹೆಚ್ಚಿನ ಜನರು ಬಳಕೆ ಮಾಡುತ್ತಾರೆ. ಆದ್ರೆ, ಸುರಕ್ಷತೆಗಾಗಿ ಅಗಾಗ್ಲೇ ಅಪ್ಡೇಟ್ ಮಾಡಲು ತಿಳಿಸುತ್ತದೆ. ಹೆಚ್ಚಿನವರು ಇದನ್ನು ನಿರಾಕರಿಸುವುದರ ಮೂಲಕ ಅಪಾಯಕ್ಕೆ ದೂಡಿಕೊಳ್ಳುತ್ತಾರೆ.

ಅದರಂತೆ ಇದೀಗ ಆಪಲ್ ಫೋನ್ ಬಳಕೆದಾರರಿಗೆ (Apple Phone Users) ಎಚ್ಚರಿಕೆಯ ಸಂದೇಶವೊಂದನ್ನು ತಿಳಿಸಿದೆ. ಹೌದು. ಸುರಕ್ಷಿತ ಅನುಭವವನ್ನು ಹೊಂದಲು ಐಓಎಸ್‌ನ ಇತ್ತೀಚಿನ ವರ್ಷನ್ ಬಳಕೆ ಮಾಡಲು ಬಳಕೆದಾರರನ್ನು ಶಿಫಾರಸು ಮಾಡಿದೆ. ಹಳೆಯ ಐಒಎಸ್ ವರ್ಷನ್‌ಗಳನ್ನು ಹ್ಯಾಕರ್‌ಗಳು ಬಳಸಿಕೊಳ್ಳುವುದು ಸುಲಭ. ಅಲ್ಲದೆ ಆಪಲ್ ಐಓಎಸ್ ನಲ್ಲಿ ಇಂತಹ ಕೆಲವು ದೋಷಗಳನ್ನು ಗುರುತಿಸಲಾಗಿದೆ. ಹೀಗಾಗಿ ಭಾರತ ಸರ್ಕಾರವು ಐಫೋನ್ ಬಳಕೆದಾರರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದೆ.
ಕರ್ನಲ್‌ನಲ್ಲಿ ಫ್ರೀ ಇಶ್ಯೂಗಳ ನಂತರ ಬಳಕೆ, ಶಾರ್ಟ್‌ಕಟ್‌ಗಳಲ್ಲಿ ತಾತ್ಕಾಲಿಕ ಫೈಲ್‌ಗಳ ಅಸಮರ್ಪಕ ನಿರ್ವಹಣೆ ಮತ್ತು ವೆಬ್‌ಕಿಟ್ ಘಟಕಗಳಲ್ಲಿ ಟೈಪ್ ಗೊಂದಲದಿಂದಾಗಿ ಈ ದೋಷಗಳು ಆಪಲ್ ಐಓಎಸ್‌ನಲ್ಲಿ ಅಸ್ತಿತ್ವದಲ್ಲಿದೆ ಎಂದು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ ಎಚ್ಚರಿಸಿದೆ. ದುರುದ್ದೇಶಪೂರಿತವಾಗಿ ರಚಿಸಲಾದ ವೆಬ್ ಕಂಟೆಂಟ್ ಅನ್ನು ಕಳುಹಿಸುವ ಮೂಲಕ ಆಕ್ರಮಣಕಾರರು ಈ ದುರ್ಬಲತೆಗಳನ್ನು ಬಳಸಿಕೊಳ್ಳಬಹುದು ಮತ್ತು ಮೆಮೋರಿ ಕರಪ್ಟ್ ದೋಷಗಳನ್ನು ಪ್ರಚೋದಿಸಬಹುದು.
ಈ ದೋಷಗಳು iPhone 8 ಅಥವಾ ನಂತರದ 16.3.1 ಕ್ಕಿಂತ ಮೊದಲಿನ Apple iOS ವರ್ಷನ್‌ಗಳ ಮೇಲೆ, ಎಲ್ಲಾ iPad Pro ಮಾಡೆಲ್‌ಗಳು, iPad Air 3rd-gen ಮತ್ತು ನಂತರದ, iPad 5th-gen ಮತ್ತು ನಂತರದ, ಮತ್ತು iPad mini 5th-gen ಮತ್ತು ನಂತರದ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಸಾಫ್ಟ್‌ವೇರ್ ಅಪ್‌ಡೇಟ್‌ಗಳನ್ನು ಮಾಡುವುದರ ಮೂಲಕವೇ ಸುರಕ್ಷಿತರಾಗಿರುವುದು ಉತ್ತಮ.