Amazon : ಮೆಗಾ ಎಲೆಕ್ಟ್ರಾನಿಕ್ಸ್‌ ಡೇಸ್‌ ಸೇಲ್‌ ಪ್ರಾರಂಭ, ಈ ಅವಕಾಶ ಮಿಸ್‌ ಮಾಡಿದರೆ ನಿಮಗೇ ನಷ್ಟ!

Amazon Mega Electronics Days Sale: ಗ್ರಾಹಕರಿಗೆ ಬಂಪರ್ ಧಮಾಕಾ ಆಫರ್. ನಿಮ್ಮ ನೆಚ್ಚಿನ ಗ್ಯಾಜೆಟ್ ಗಳನ್ನು ಅಗ್ಗದ ಬೆಲೆಯಲ್ಲಿ ಜೊತೆಗೆ ಭಾರಿ ಕೊಡುಗೆಗಳ ಮೂಲಕ ಪಡೆಯಲು ಸುವರ್ಣ ಅವಕಾಶ!! ಹೌದು!! ಪ್ರಮುಖ ಇ-ಕಾಮರ್ಸ್‌ ವೆಬ್ ಸೈಟ್ ಅಮೆಜಾನ್‌ನಲ್ಲಿ ಈಗಾಗಲೇ ಕೆಲವು ಸ್ಮಾರ್ಟ್‌ ಡಿವೈಸ್‌ ಹಾಗೂ ಸ್ಮಾರ್ಟ್‌ ಗ್ಯಾಜೆಟ್‌ಗಳಿಗೆ ಭರ್ಜರಿ ರಿಯಾಯಿತಿ ಲಭ್ಯವಾಗಲಿದೆ. ಅಮೆಜಾನ್ ನಿಮಗಾಗಿ ಮೆಗಾ ಎಲೆಕ್ಟ್ರಾನಿಕ್ ಡೇಸ್ ಸೇಲ್ (Amazon Mega Electronics Days Sale) ಘೋಷಿಸಿದ ಹಿನ್ನೆಲೆ ನಿಮಗಿಷ್ಟವಾದ ಡಿವೈಸ್ ಗಳನ್ನು ಆಫರ್ ಬೆಲೆಯಲ್ಲಿ ಕೈಗೆಟಕುವ ದರದಲ್ಲಿ ಪಡೆಯುವ ಬಂಪರ್ ಕೊಡುಗೆ ನೀಡಲಾಗಿದೆ. ಮತ್ತೇಕೆ ತಡ!! ನೀವು ಕೂಡ ಈ ಆಫರ್ ನ ಪ್ರಯೋಜನ ನಿಮ್ಮದಾಗಿಸಿಕೊಳ್ಳಲು ಸುವರ್ಣ ಅವಕಾಶ!!

ಅಮೆಜಾನ್ ಇಂಡಿಯಾ ಮೆಗಾ ಎಲೆಕ್ಟ್ರಾನಿಕ್ಸ್ ಡೇಸ್ ಮಾರಾಟವನ್ನು ಘೋಷಣೆ ಮಾಡಿದ್ದು, ಈ ಸೇಲ್ ಫೆಬ್ರವರಿ 20 ರವರೆಗೆ ಇರಲಿದೆ. ಗ್ರಾಹಕರು ತಮ್ಮ ನೆಚ್ಚಿನ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಸ್ಮಾರ್ಟ್‌ವಾಚ್‌ ಒಳಗೊಂಡಂತೆ ಇನ್ನಿತರ ಸ್ಮಾರ್ಟ್‌ ಡಿವೈಸ್‌ಗಳನ್ನು ಶೇಕಡಾ 40 ರಷ್ಟು ರಿಯಾಯಿತಿ ದರದಲ್ಲಿ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹಾಗಾದ್ರೆ, ಯಾವುದೆಲ್ಲ ಸ್ಮಾರ್ಟ್‌ ಡಿವೈಸ್‌ಗಳಿಗೆ ಎಷ್ಟು ಡಿಸ್ಕೌಂಟ್ ಸಿಗಲಿದೆ ಅನ್ನೋ ಮಾಹಿತಿ ಇಲ್ಲಿದೆ.

ಸ್ಮಾರ್ಟ್ ವಾಚ್ (smart watch)
ಇಂದು ಹೆಚ್ಚಿನವರ ಕೈಯಲ್ಲಿ ರಾರಾಜಿಸುವ ಸ್ಮಾರ್ಟ್ ವಾಚ್ ಗಳು ಟ್ರೆಂಡ್ ಸೃಷ್ಟಿ ಮಾಡಿದ್ದು, ವಿಭಿನ್ನ ಶೈಲಿ, ವಿಶೇಷ ಫೀಚರ್ ಹೊಂದಿರುವ ಸ್ಮಾರ್ಟ್ ವಾಚ್ ಖರೀದಿಸಲು ಹೆಚ್ಚಿನವರು ಮುಗಿ ಬೀಳುತ್ತಾರೆ. ಅದರಲ್ಲೂ ಆ್ಯಪಲ್ ಕಂಪನಿಯ ಗ್ಯಾಜೆಟ್ ಅಂದ್ರೆ ಸಾಕು ಎಲ್ಲಿಲ್ಲದ ಡಿಮ್ಯಾಂಡ್!! ಈ ವಿಶೇಷ ಸೇಲ್ ಮೂಲಕ ಆಪಲ್ ವಾಚ್ ಎಸ್‌ಇ ಯನ್ನು 26,400 ರೂ. ಗಳ ಬೆಲೆಗೆ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇನ್ನು ನಾಯ್ಸ್‌ ಪಲ್ಸ್‌ 2 ವಾಚ್‌ ಅನ್ನು 1,999 ರೂ. ಗಳ ಬಜೆಟ್‌ ಬೆಲೆಗೆ ಲಭ್ಯವಾಗಲಿವೆ. ಇದರ ಜೊತೆಗೆ ಬೋಟ್ ವೇವ್ ಎಡ್ಜ್ ಸ್ಮಾರ್ಟ್‌ವಾಚ್ ಗೆ 2,199 ರೂ. ಗಳ ಬೆಲೆಗೆ ಖರೀದಿ ಮಾಡಬಹುದು.

ಗೇಮಿಂಗ್‌ ಲ್ಯಾಪ್‌ಟಾಪ್‌(Gaming laptops)
ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಹೆಚ್ಚಿನವರಿಗೆ ಸಿಸ್ಟಮ್ ಮೂಲಕ ಆಡೋದು ಅಂದ್ರೆ ಏನೋ ಒಂದು ಕ್ರೇಜ್. ಹೀಗಾಗಿಯೇ ಗೇಮಿಂಗ್ ಫೀಚರ್ ಹೊಂದಿರುವ ವಿಶೇಷ ಲ್ಯಾಪ್ ಟಾಪ್ ಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಡುತ್ತಿರುತ್ತವೆ. ಇದೀಗ, ಅಮೆಜಾನ್ ಎಲೆಕ್ಟ್ರಾನಿಕ್ ಸೇಲ್ ಆಫರ್ ಮೂಲಕ
ಲೆನೊವೊ ಐಡಿಯಾ ಪ್ಯಾಡ್ ಗೇಮಿಂಗ್ i5 (Lenovo IdeaPad Gaming i5) ಲ್ಯಾಪ್‌ಟಾಪ್ ಭರ್ಜರಿ ರಿಯಾಯಿತಿ ಲಭ್ಯವಾಗಲಿದೆ. ಈ ಲ್ಯಾಪ್‌ 67,990 ರೂ. ಗೆ ಆಫರ್ ಬೆಲೆಯಲ್ಲಿ ಖರೀದಿ ಮಾಡಬಹುದು. ಇದಲ್ಲದೆ, ಜೊತೆಗೆ ಏಸರ್‌ ನೈಟ್ರೋ ಗೇಮಿಂಗ್ i5 ಲ್ಯಾಪ್‌ಟಾಪ್ ನಿಮಗೆ 59,990 ರೂ.ಗಳಿಗೆ ಆಫರ್ ಬೆಲೆಗೆ ಲಭ್ಯವಾಗಲಿದ್ದು, ಮತ್ತೊಂದು ಕೊಡುಗೆ ಕೂಡ ನಿಮಗಾಗಿ ಕಾದಿದೆ. ಈ ಲ್ಯಾಪ್‌ಟಾಪ್‌ ಖರೀದಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಕಾರ್ಡ್‌ಗಳು ಹಾಗೂ ಇಎಮ್‌ಐ ವಹಿವಾಟುಗಳ ಸೌಲಭ್ಯ ಪಡೆದರೆ 10 ಪ್ರತಿಶತದಷ್ಟು ತ್ವರಿತ ಹೆಚ್ಚುವರಿ ರಿಯಾಯಿತಿ ಪಡೆಯಲು ಸುವರ್ಣ ಅವಕಾಶ ಕಲ್ಪಿಸಲಾಗಿದೆ.

ಗೇಮಿಂಗ್ ಲ್ಯಾಪ್‌ಟಾಪ್‌ ಅಸುಸ್‌ TUF ಗೇಮಿಂಗ್ A15 ಲ್ಯಾಪ್‌ಟಾಪ್‌ (ASUS TUF Gaming A15) ಅನ್ನು ಬೊಂಬಾಟ್ ಆಫರ್ ಬೆಲೆಗೆ ಅಂದರೆ, 49,990 ರೂ. ಗೆ ಖರೀದಿ ಮಾಡಲು ಒಳ್ಳೆಯ ಅವಕಾಶ. ಈ ಲ್ಯಾಪ್‌ಟಾಪ್‌ ವಿಶೇಷತೆ ಬಗ್ಗೆ ಗಮನಿಸಿದರೆ, AMD ರೈಜೆನ್ 5 4600H ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸುವ ಜೊತೆಗೆ ಉತ್ತಮ ಕಾರ್ಯಕ್ಷಮತೆಯನ್ನು ಕೂಡ ಒಳಗೊಂಡಿದೆ. ಇದರ ಜೊತೆಗೆ ಮತ್ತೊಂದು ಗೇಮಿಂಗ್ ಲ್ಯಾಪ್ ಟಾಪ್ ಹೆಚ್‌ಪಿ ವಿಕ್ಟಸ್ ಗೇಮಿಂಗ್ ರೈಜೆನ್ 5 ಲ್ಯಾಪ್‌ಟಾಪ್ ಅನ್ನು 53,990 ರೂ. ಗಳ ಆಫರ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ಇಯರ್‌ಬಡ್ಸ್‌ (ear buds)ಇತರೆ ಡಿವೈಸ್‌ಗಳು(other devices)
ಗೇಮಿಂಗ್ ಲ್ಯಾಪ್ ಟಾಪ್ ಗಳು ಮಾತ್ರವಲ್ಲದೆ, ಹೆಚ್‌ಪಿ w100 480P 30 FPS ಡಿಜಿಟಲ್ ವೆಬ್‌ಕ್ಯಾಮ್ ಕೂಡ ಬೊಂಬಾಟ್ ಆಫರ್ ಹೊಂದಿದ್ದು, 1,999 ರೂ. ಇರುವ ಈ ಡಿವೈಸ್‌ ಅನ್ನು 399 ರೂ. ಗಳ ಆಫರ್‌ ಬೆಲೆಗೆ ಖರೀದಿ ಮಾಡಲು ಸುವರ್ಣ ಅವಕಾಶ ಕಲ್ಪಿಸಲಾಗಿದೆ. ಇದಲ್ಲದೆ, ಲಾಜಿಟೆಕ್ G502 ಹೀರೋ ಹೈ ಪರ್ಫಾರ್ಮೆನ್ಸ್ ವೈರ್ಡ್ ಗೇಮಿಂಗ್ ಮೌಸ್ ಅನ್ನು 3,995 ರೂ. ಗಳ ಬೆಲೆಗೆ ಕೈಗೆ ಎಟಕುವ ದರದಲ್ಲಿ ಕೊಂಡುಕೊಳ್ಳಬಹುದು. ಇದರ ಜೊತೆಗೆ, ಲಾಜಿಟೆಕ್ K480 ವಾಯರ್‌ಲೆಸ್ ಕೀಬೋರ್ಡ್ ಅನ್ನು 2,495 ರೂ. ಗಳ ಆಫರ್‌ ಬೆಲೆಗೆ ನಿಮಗೆ ಲಭ್ಯವಾಗಲಿದೆ. ಈ ವಿಶೇಷ ಸೇಲ್‌ ಮೂಲಕ ಗ್ರಾಹಕರು ಬೋಟ್ 170 ವಾಯರ್‌ಲೆಸ್‌ ಇಯರ್‌ಬಡ್‌ ಅನ್ನು ಕೇವಲ 1,299 ರೂ. ಗಳಿಗೆ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ನಾಯ್ಸ್ ಬಡ್ಸ್ ಕನೆಕ್ಟ್ ಅನ್ನು 1,499 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಅಮೆಜಾನ್ ಮೆಗಾ ಎಲೆಕ್ಟ್ರಾನಿಕ್ ಆಫರ್ ಮೂಲಕ ಅನೇಕ ಡಿವೈಸ್ ಗಳನ್ನ ಕೈಗೆ ಎಟಕುವ ದರದಲ್ಲಿ ಕೊಂಡುಕೊಳ್ಳಬಹುದಾಗಿದೆ.

Leave A Reply

Your email address will not be published.