Anganawadi Jobs : ಪುತ್ತೂರು : ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Share the Article

ಪುತ್ತೂರು : ಪುತ್ತೂರು ಶಿಶು ಅಭಿವೃದ್ಧಿ ಯೋಜನೆಯಡಿ ಖಾಲಿಯಿರುವ ಅಂಗನವಾಡಿ ಕಾರ್ತಕರ್ತೆ, ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಕಾರ್ಯಕರ್ತೆ – 6 ಹಾಗೂ ಸಹಾಯಕಿ – 9 ಹುದ್ದೆಗಳು ಖಾಲಿಯಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ದರ್ಬೆ ಸ್ತ್ರೀಶಕ್ತಿ ಭವನದ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರ ಕಚೇರಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾ.17 ಆಗಿರುತ್ತದೆ.

ಪಡ್ನೂರು ಗ್ರಾಮದ ಪಡ್ನೂರು, ಆರ್ಯಾಪು ಗ್ರಾಮದ ಕುಂಜೂರುಪಂಜ, ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ, ಗಾಳಿಮುಖ, ಪಟ್ಟಣ ಪಂಚಾಯತ್ ಅಡ್ಡಗದ್ದೆ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆ ಹುದ್ದೆಗಳು ಖಾಲಿ ಇದೆ. ನಗರಸಭಾ ವ್ಯಾಪ್ತಿಯ ಮಂಜಲ್ಪಡ್ಪು, ಕೋಡಿಂಬಾಡಿ ಗ್ರಾಮದ ದಾರಂದಕುಕ್ಕು, ಕೊಯಿಲ ಗ್ರಾಮದ ಕುದುಲೂರು, ಕುಂತೂರು ಗ್ರಾಮದ ಗಡಿಯಾರನಡ್ಕ, ಶಿರಾಡಿ ಗ್ರಾಮದ ಸೋಣಂದೂರು, 34ನೇ ನೆಕ್ಕಿಲಾಡಿಯ ಸುಭಾಷ್‍ನಗರ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿ ಹುದ್ದೆ ಖಾಲಿಯಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರ ಕಚೇರಿಯ ಪ್ರಕಟಣೆ ತಿಳಿಸಿದೆ.

Leave A Reply