ಉಸಿರು ಬಿಗಿದು ಮಂತ್ರ ಮುಗ್ಧಳಾಗಿ ಕಾಂತಾರದ ವರಾಹರೂಪಂ ಹಾಡಿದ ಮುಸ್ಲಿಂ ಹುಡುಗಿ

ಕಾಂತಾರ (Kantara) ಸಿನಿಮಾ ಎಷ್ಟು ಚಂದವೋ ಅಷ್ಟೇ ವರಹಾರೂಪಂ ಹಾಡು. ಕಾಂತಾರದಲ್ಲಿ ವರಾಹ ರೂಪಂ ಎಂಬ ಹಾಡು ಸಖತ್ ಹಿಟ್ ಆಗಿತ್ತು. ಆದರೆ ದುರದೃಷ್ಟವಶಾತ್ ಈ ಹಾಡು ಮಲಯಾಳಂ (Malyalam) ಹಾಡಿನ ನಕಲು ಎಂಬ ಆರೋಪ ಕೇಳಿ ಬಂದಿತ್ತು. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ (Ajaneesh Lokesh) ಅವರು ಮಲಯಾಳಂ ಭಾಷೆಯ, ಮಲಯಾಳಂನ ತೈಕ್ಕುಡಂ ಬ್ರಿಡ್ಜ್ ಚಿತ್ರತಂಡದ ನವರಸಂ (Navarasam) ಹಾಡಿನಿಂದ ಇದನ್ನು ಕಾಪಿ ಮಾಡಿದ್ದಾರೆ ಎಂಬ ಆರೋಪ ಎದುರಾಗಿತ್ತು. ಈ ಸಂಬಂಧ ಮಲಯಾಳಂನ ತೈಕ್ಕುಡಂ ಬ್ರಿಡ್ಜ್ ಚಿತ್ರತಂಡ ಕೋರ್ಟ್ ಮೆಟ್ಟಿಲೇರಿತ್ತು. ಎರಡೂ ಕಡೆಯವರ ವಾದ ಆಲಿಸಿದ ಬಳಿಕ ನ್ಯಾಯಾಲಯವು ಥೈಕ್ಕುಡಂ ಬ್ರಿಡ್ಸ್ ಅರ್ಜಿಯನ್ನು ವಜಾಗೊಳಿಸಿದೆ ಹಾಗೂ ವರಾಹರೂಪಂ ಹಾಡಿಗೆ ನೀಡಲಾಗಿದ್ದ ತಡೆಯಾಜ್ಞೆಯನ್ನು ತೆರವು ಮಾಡಿತ್ತು. ಇದೆಲ್ಲಾ ಹಳೆಯ ಸುದ್ದಿ.

 

ಈಗ ಮತ್ತೆ ಕಾಂತಾರ ಸುದ್ದಿಯಲ್ಲಿದೆ. ಕೇರಳದ ಮುಸ್ಲಿಂ ಯುವತಿಯೊಬ್ಬಳು ಕಾಂತಾರದ ವರಹಾರೂಪಂಗೆ ದನಿ ಬೆರೆಸಿದ್ದಾಳೆ. ಆಕೆಯ ಆಡಿಯೋ ವಿಡಿಯೋ ವೈರಲ್ ಆಗಿದೆ. ಅನ್ಶಾ ಝಾಕೀರ್‌ (Ansha Zakir) ಎನ್ನುವ ಈ ಹುಡುಗಿ ಓರ್ವ ಗಾಯಕಿಯಾಗಿದ್ದು ತಮ್ಮದೆ ಆದ ಯೂಟ್ಯೂಬ್‌ ಚಾನೆಲ್‌ (YouTube) ಹೊಂದಿದ್ದಾಳೆ. ಅನ್ಶಾ ಸಾಕಷ್ಟು ಹಾಡುಗಳನ್ನು ತಮ್ಮ ಚಾನೆಲ್‌ನಲ್ಲಿ ಶೇರ್‌ ಮಾಡಿಕೊಂಡಿದ್ದು, ಇತ್ತೀಚೆಗಷ್ಟೇ ಕಾಂತಾರ ಸಿನಿಮಾದ ವರಾಹ ರೂಪಂ (Varaha Rupam) ಹಾಡನ್ನೂ ಹಾಡಿ ಆ ವಿಡಿಯೋವನ್ನು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಪೋಸ್ಟ್‌ ಮಾಡಿದ್ದಳು. ಈ ಹಾಡಿಗೆ ಜನರು ಬೆಂಬಲ ಘೋಷಿಸಿದ್ದಾರೆ. ಅನ್ಶಾಳ ಈ ಹಾಡುಗಾರಿಕೆ ಹೀಗೆ ಮುಂದುವರಿಯಲಿ ಎಂದು ಹಾರೈಸಿದ್ದಾರೆ. ಈಗ ಕೇರಳದ ಅಮ್ರಿತ ಟಿವಿ (Amrita Tv) ತಮ್ಮ 500 ನೆಯ ಸಂಚಿಕೆಗೆ ಅನ್ಶಾಳನ್ನು ಕರೆಸಿದ್ದು ಅಲ್ಲಿ ಆಕೆ ಹಾಡಿದ್ದಾಳೆ. ಅದರ ವಿಡಿಯೋ ಇಲ್ಲಿದೆ ನೋಡಿ.

Leave A Reply

Your email address will not be published.