Online : ಆನ್ಲೈನ್ ಸುಂದರಿಗೆ ಮಾರು ಹೋಗಿ ಮದುವೆಯಾದ, ಹೆಂಡತಿ ಹಿನ್ನೆಲೆ ನೋಡಿ ದಂಗಾಗಿ ಹೋದ ಪತಿರಾಯ ! ಕಹಾನಿ ಮೇ ಟ್ವಿಸ್ಟ್!!
ಇತ್ತೀಚೆಗೆ ಹೆಚ್ಚಾಗಿ ಆನ್ ಲೈನ್ (online) ಸಹವಾಸದಿಂದಲೇ ಮೋಸ ಹೋಗೋದು. ಆನ್ ಲೈನ್ ನಲ್ಲಿ ವಸ್ತುಗಳನ್ನು ಬುಕ್ ಮಾಡಿ ಮೋಸ ಹೋಗೋದು, ಹಣ ಕಳೆದುಕೊಳ್ಳೋದು ಇಂತಹ ಘಟನೆಗಳು ದಿನಂಪ್ರತಿ ಕೇಳುತ್ತಲೇ ಇರುತ್ತೇವೆ. ಆದರೆ ಅಹಮದಾಬಾದ್ ನಲ್ಲಿ ಊಹೆ ಕೂಡ ಮಾಡಿರಲಿಕ್ಕೆ ಸಾಧ್ಯ ಇಲ್ಲ, ಅಂತಹ ಘಟನೆ ನಡೆದಿದೆ. ಮ್ಯಾಟ್ರಿಮೋನಿಯಲ್ (matrimonial) ಸೈಟ್‌ನಲ್ಲಿ ಹುಡುಗಿ ಹುಡುಕೋದು ಇವೆಲ್ಲಾ ಇತ್ತಿಚೆಗೆ ಹೆಚ್ಚಾಯೇ ನಡೆಯುತ್ತಿದೆ. ಅಲ್ಲದೆ, ಇದರ ಮೂಲಕ ಪರಿಚಯವಾಗಿ, ಪ್ರೇಮಿಗಳಾಗಿ ಲಕ್ಷ ಲಕ್ಷ ಹಣ ಕಳೆದುಕೊಂಡಿರುವ ಅದೆಷ್ಟೋ ಘಟನೆಗಳು ಬೆಳಕಿಗೆ ಬಂದಿವೆ. ಇದೀಗ ಅಂತಹದೇ ಘಟನೆ ನಡೆದಿದ್ದು, ಆದರೆ ಈ ಕಥೆಯಲ್ಲಿ ಭಯಂಕರ ಟ್ವಿಸ್ಟ್ ಇದೆ. ಕೇಳಿದ್ರೆ ಶಾಕ್ ಆಗೋದು ಖಂಡಿತ!!.
ಯುವಕ ಅಹಮದಾಬಾದ್ (Ahmedabad) ನಗರದವನಾಗಿದ್ದು, ಈತನಿಗೆ ಮನೆಯಲ್ಲಿ ಮದುವೆ (marriage) ಆಗು ಎಂದು ಕೆಲವು ವರ್ಷಗಳಿಂದ ಒತ್ತಾಯ ಮಾಡುತ್ತಲೇ ಇದ್ದರೂ. ಕೊನೆಗೂ ಇವರ ಒತ್ತಾಯಕ್ಕೆ ಮಣಿದ ಆತ ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿ ಹುಡುಗಿ ಹುಡುಕಲು ಆರಂಭಿಸಿದ. ಈ ವೇಳೆ ಸೈಟ್ ನಲ್ಲಿ ಚಂದದ ಹುಡುಗಿಯೊಬ್ಬಳ ಪರಿಚಯವಾಗಿದೆ. ಆಕೆಯ ಹೆಸರು ರಿಟಾ ದಾಸ್. ಈಕೆ ಅಸ್ಸಾಂನ (Assam) ಗುವಾಹಟಿಯ ನಿವಾಸಿಯಾಗಿದ್ದಳು. ಇವರಿಬ್ಬರಿಗೂ ಪರಿಚಯವಾಗಿ, ಮಾತು, ಸ್ನೇಹ ಇವೆಲ್ಲದರ ಬಳಿಕ ಪ್ರೀತಿ ಹುಟ್ಟಿದೆ. ಇಬ್ಬರೂ ಪರಸ್ಪರ ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಅಹಮದಾಬಾದ್‌ನಲ್ಲಿ ಸರಳವಾಗಿ ಮದುವೆಯಾಗಿದ್ದರು. ಜೀವನ ಚೆನ್ನಾಗಿಯೇ ನಡೆಯುತ್ತಿತ್ತು. ಹುಡುಗನೂ ಖುಷಿಯಾಗಿದ್ದ. ಆದರೆ ರಿಟಾಳ ಬಣ್ಣ ನಿಧಾನವಾಗಿ ಕಳಚಲು ಆರಂಭಿಸಿತು. ಆಕೆ ಮುಗ್ಧೆ ಎಂದುಕೊಂಡವನಿಗೆ ಆಘಾತ ಕಾದಿತ್ತು. ಮದುವೆಯಾಗಿ ಕೆಲ ತಿಂಗಳ ಬಳಿಕ, ಒಂದು ದಿನ ರಿಟಾ ದಾಸ್ ತನ್ನ ಜಮೀನಿನ ಕುರಿತಾದ ಕೇಸ್ ಇದೆ ಎಂದು ತನ್ನ ಪತಿಗೆ ಹೇಳಿ ಗುವಾಹಟಿಗೆ ತೆರಳಿದ್ದರು. ಆದರೆ, ಹೋಗಿ ಬಹಳ ದಿನಗಳೇ ಕಳೆದರೂ ಆಕೆಯ ಪತ್ತೆಯಿರಲಿಲ್ಲ. ಚಿಂತೆಗೆ ಒಳಗಾದ ಪತಿ ಆಕೆಗೆ ಕರೆಮಾಡಿದ್ದಾನೆ. ಪತ್ನಿಗೆ ಎಷ್ಟು ಸಾರಿ ಫೋನ್ ಮಾಡಿದರೂ, ಕರೆ ಸ್ವೀಕರಿಸಲಿಲ್ಲ. ಹೀಗೇ ಪತಿ ತುಂಬಾ ಸಲ ಫೋನ್ ಮಾಡಿದಾಗ, ಒಂದು ದಿನ ಆತನ ಕರೆಯನ್ನು ಸ್ವೀಕರಿಸಿದ ರೀಟಾಳ ವಕೀಲ ಇದ್ದ ವಿಷಯವನ್ನೆಲ್ಲಾ ತಿಳಿಸಿದ್ದಾನೆ. ವಿಷಯ ತಿಳಿದ ಪತಿಗೆ ಗರಬಡಿದಂತಾಗಿದೆ.
ಕರೆ ಸ್ವೀಕರಿಸಿದ ವಕೀಲನ ಏನು ಹೇಳಿದ ಅಂದ್ರೆ “ನಿನ್ನ ಪತ್ನಿ ಜೈಲಿನಲ್ಲಿದ್ದಾಳೆ. ಕೋರ್ಟ್ ಜಾಮೀನು ನೀಡಲು ಒಂದು ಲಕ್ಷ ಕಟ್ಟುವಂತೆ ಹೇಳಿದೆ” ಎಂದು ತಿಳಿಸಿದ. ಏನಾಯಿತು? ಯಾಕೆ ಹೀಗಾಯಿತು? ಎಂದು ಯಾವೊಂದೂ ಮಾತು ಕೇಳದೆ, ಏನೊಂದೂ ವಿಚಾರಿಸದೆ, ಆಕೆಯ ಗಂಡ 1 ಲಕ್ಷ ರೂಪಾಯಿಯನ್ನು ವಕೀಲನಿಗೆ ಕಳುಹಿಸಿಕೊಟ್ಟಿದ್ದಾನೆ. ಆದರೆ, ವಕೀಲ ಕಳುಹಿಸಿಕೊಟ್ಟ ಕೋರ್ಟ್ ದಾಖಲೆಗಳಲ್ಲಿ ಪತ್ನಿಯ ಹೆಸರನ್ನು ರಿಟಾ ದಾಸ್ ಎನ್ನುವ ಬದಲು ರಿಟಾ ಚೌಹಾಣ್ ಎಂದು ಬರೆದಿತ್ತು, ಇದರಿಂದ ಪತಿಗೆ ಅನುಮಾನ ಉಂಟಾಗಿದ್ದು, ಹಾಗಾಗಿ ಮತ್ತೆ ಆತ ವಕೀಲರಿಗೆ ಫೋನ್ ಮಾಡಿದ್ದ. ಆದರೆ, ವಕೀಲರು ಕರೆ ಸ್ವೀಕರಿಸಲಿಲ್ಲ.
ಅನುಮಾನವನ್ನು ಪರಿಹರಿಸಿಕೊಳ್ಳುವ ಸಲುವಾಗಿ, ಪತಿ ಸೋಷಿಯಲ್ ಮೀಡಿಯಾದಲ್ಲಿ ರಿಟಾ ಚೌಹಾಣ್ ಎಂದು ಹೆಸರು ಹಾಕಿ, ಮಾಹಿತಿ ಹುಡುಕಲು ಪ್ರಯತ್ನಿಸಿದ್ದಾನೆ. ಆದರೆ ಆತನಿಗೆ ಸಿಕ್ಕಿದ್ದ ಮಾಹಿತಿ ಕಂಡು ಬೆಚ್ಚಿಬಿದ್ದಿದ್ದಾನೆ. ತಾನು ಮೋಸ ಹೋಗಿರುವುದು ಖಚಿತ ಎಂದು ತಿಳಿಯಿತು. ಪತ್ನಿ ಅಸ್ಸಾಂನ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಎಂದು ಆತನಿಗೆ ತಿಳಿಯಿತು. ಅಲ್ಲದೆ, 5 ಸಾವಿರಕ್ಕೂ ಅಧಿಕ ಕಾರ್‌ಗಳ ಕಳ್ಳತನ(car theft), ಖಡ್ಗಮೃಗಗಳ ಬೇಟೆ, ಅಕ್ರಮವಾಗಿ ಶಸ್ತ್ರಾಸ್ತ್ರ ಸಾಗಾಟದಂಥ ಭಾರಿ ಕೇಸ್‌ಗಳು ಆಕೆಯ ಮೇಲಿದ್ದವು.
ರೀಟಾಳಿಗೆ ಈ ಮೊದಲೇ ಮದುವೆಯಾಗಿದ್ದು, ಆಕೆಯ ಮೊದಲ ಪತಿ ಅನಿಲ್ ಈ ಪ್ರಕರಣಗಳಲ್ಲಿ ಪೊಲೀಸರ ಅತಿಥಿಯಾಗಿದ್ದ. ತಾನು ಮೋಸಹೊಗಿದ್ದೇನೆಂದು ತಿಳಿದ ಎರಡನೇ ಪತಿ(husband) ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.