Women Gain weight : ಹೆಣ್ಮಕ್ಕಳು ಮದುವೆಯಾದ ಮೇಲೆ ದಪ್ಪಗಾಗಲು ಕಾರಣವೇನು?

ಸಾಮಾನ್ಯವಾಗಿ ಹೆಣ್ಣು ಮಕ್ಕಳು ಮದುವೆಗೂ ಮುನ್ನ ತೆಳ್ಳಗಿರುತ್ತಾರೆ ಇರುತ್ತಾರೆ. ಇದಕ್ಕೆಎಷ್ಟೋ ಜನ ಛೇಡಿಸೋದು ಉಂಟು. ಕೆಲವರಂತೂ ಅದೆಷ್ಟೇ ಸರ್ಕಸ್ ಮಾಡಿದ್ರೂ ದಪ್ಪ ಆಗೋದೇ ಇಲ್ಲ.
ಆದರೆ ಮದುವೆಯ ನಂತರ ಹೆಚ್ಚಾಗಿ ಎಲ್ಲಾ ಮಹಿಳೆಯರೂ ದಪ್ಪಗಾಗುತ್ತಾರೆ. ಯಾಕೆ? ಈ ಪ್ರಶ್ನೆ ಹಲವರಿಗೆ ಮೂಡಿರಬಹುದು. ಇದರ ಉತ್ತರ ಇಲ್ಲಿದೆ.

ಮದುವೆ ಅನ್ನೋದು ಅಮೂಲ್ಯವಾದ ಕ್ಷಣ. ಈ ಸಮಯದಲ್ಲಿ ಎರಡೂ ಕುಟುಂಬಗಳು ಒಟ್ಟು ಸೇರಿ, ವಧು,ವರ ಸಂತಸದಿಂದ ಇರುವಂತಹ ಕ್ಷಣ. ಅಲ್ಲಿ ಹೊಸ ವಾತಾವರಣ ಸೃಷ್ಟಿಯಾಗಿರುತ್ತದೆ. ಅದಕ್ಕೆ ತಕ್ಕಂತೆ ಮನಸ್ಸುಗಳು ಬದಲಾಗುತ್ತವೆ. ಮದುವೆಯ ನಂತರ ಜೀವನ ಕ್ರಮ ಬದಲಾಗಿರುತ್ತದೆ. ಬದಲಾದ ಜೀವನ ಕ್ರಮ ದೇಹ-ಮನಸ್ಸು ಎರಡರಲ್ಲೂ ತನ್ನ ಚಾಪು ಮೂಡಿಸುತ್ತದೆ.

ಮದುವೆಯ ನಂತರ ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದನ್ನು ಕಡಿಮೆ ಮಾಡುತ್ತಾರೆ. ಮೊದಲಾದರೆ ಸುಂದರವಾಗಿ, ಜಾಸ್ತಿ ದಪ್ಪ ಆಗದೆ, ತೆಳ್ಳಗೆ ಇರಬೇಕು ಅಂತಾ ಬಯಸ್ತಿದ್ರು, ಆದ್ರೆ ಮದುವೆ ಆದ ಮೇಲೆ ಅವುಗಳ ಮೇಲೆ ಗಮನ ಕಡಿಮೆ ಆಗುತ್ತದೆ. ಕುಟುಂಬದ ಮೇಲೆ ಕಾಳಜಿ ಹೆಚ್ಚುತ್ತದೆ.

ಸ್ವಿಡ್ಜರ್‌ಲ್ಯಾಂಡ್‌ನ ಬೆಸಿಲ್ ವಿಶ್ವವಿದ್ಯಾಲಯದ ಸೈಕಾಲಜಿ ಆರೋಗ್ಯ ವಿಭಾಗ ಈ ಬಗ್ಗೆ ಅಧ್ಯಯನ ನಡೆಸಿದ್ದು, ಅದರ ಪ್ರಕಾರ, ಹೆಚ್ಚು ಆಹಾರ ಸೇವಿಸುವುದು, ಮದುವೆಯ ನಂತರ ವ್ಯಾಯಾಮ, ಹೆಚ್ಚು ನಡೆಯದೇ ಇರುವುದು ಇವೆಲ್ಲಾ ತೂಕ ಹೆಚ್ಚಲು ಕಾರಣವಂತೆ. ಇದಿಷ್ಟೇ ಅಲ್ಲದೆ, ಮಗು ಹುಟ್ಟಿದ ನಂತರ ಅವರು ಉಳಿಸಿದ ಆಹಾರವನ್ನು ತಾಯಿಯ ಹೊಟ್ಟೆಗೆ ಹಾಕಿಕೊಳ್ಳುವುದು ಮಹಿಳೆಯರ ತೂಕ ಹೆಚ್ಚಲು ಕಾರಣ ಎಂದು ಹೇಳುತ್ತದೆ. ಹೌದು, ಹೆಚ್ಚಿನ ಮಹಿಳೆಯರಲ್ಲಿ ಮಗು ಹುಟ್ಟಿದ ನಂತರ ದಿಡೀರ್ ಎಂಬಂತೆ ತೂಕ ಹೆಚ್ಚಳವಾಗುತ್ತದೆ.

ಆದರೆ ಇದಕ್ಕೂ ಪರಿಹಾರವಿದೆ. ಮದುವೆ ನಂತರವೂ ಏರುವ ತೂಕವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು. ಪತಿಯ ಜೊತೆಗೆ ಜಾಗಿಂಗ್, ವಾಕಿಂಗ್ ಹಾಗೂ ಕಪಲ್ ಸ್ಪಾ ಥೆರಪಿಗಳನ್ನು ಪಡೆಯಬಹುದು. ಹಾಗೇ ಕ್ರಮಬದ್ಧ ಆಹಾರ, ನಿಯಮಿತ ವ್ಯಾಯಾಮ ಮಾಡಬೇಕು. ಇದರಿಂದ ದೇಹದ ತೂಕ ಸಮತೋಲನದಲ್ಲಿ ಇಟ್ಟುಕೊಳ್ಳಬಹುದು. ಸದಾ ಮನದಲ್ಲಿ, ಮುಖದಲ್ಲಿ ಖುಷಿ ನೆಲೆಸಿದ್ದರೆ, ದೈಹಿಕ, ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತದೆ.

Leave A Reply

Your email address will not be published.