NPS : ಪಿಂಚಣಿ ನಿರೀಕ್ಷೆಯವರಿಗೆ ಕೊನೆಗೂ ಸಿಕ್ತು ಗುಡ್‌ ನ್ಯೂಸ್‌ !

ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (National Pension System) ಜನರ ನಿವೃತ್ತಿಯ ನಂತರದ ಅಗತ್ಯಗಳನ್ನು ಪೂರೈಸಲು ಕೇಂದ್ರ ಸರ್ಕಾರವು ವಿಶೇಷವಾಗಿ ರೂಪಿಸಿದೆ. ಸದ್ಯ NPS ಅಡಿಯಲ್ಲಿ ಸರ್ಕಾರಿ ನೌಕರರಿಗೆ ಕೊನೆಯ ವೇತನದ ಶೇ. 50 ರಷ್ಟು ಪೆನ್ಸನ್ ನೀಡಲು ಚಿಂತನೆ ನಡೆಸಿದೆ.

ಕಳೆದ ವರ್ಷದಿಂದ NPS ಅಡಿಯಲ್ಲಿ ಸರ್ಕಾರಿ ನೌಕರರಿಗೆ ಕೊನೆಯ ವೇತನದ ಶೇ. 50 ರಷ್ಟು ಪೆನ್ಸನ್ ನೀಡಲು ಚಿಂತನೆ ನಡೆಸಿದೆ. ಹಳೆಯ ಪಿಂಚಣಿ ಯೋಜನೆ (Old Pension Scheme) ಜಾರಿಗೆ ತರಲು ಹಲವು ರಾಜ್ಯಗಳು ಒತ್ತಾಯಿಸಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ (Central government) NPS ನ ಅಳವಡಿಕೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ.

NPS ಅಡಿಯಲ್ಲಿ ಸರ್ಕಾರಿ ನೌಕರರಿಗೆ ಕೊನೆಯ ವೇತನದ ಶೇ. 50 ರಷ್ಟು ಪೆನ್ಸನ್ ನೀಡಲು ಚಿಂತನೆ ನಡೆಸಿದ್ದು, ಆರ್ಥಿಕವಾಗಿ ದುಬಾರಿ ಹಳೆಯ ಪಿಂಚಣಿ ಯೋಜನೆ ಮತ್ತು ಸುಧಾರಣಾ-ಆಧಾರಿತ ರಾಷ್ಟ್ರೀಯ ಪಿಂಚಣಿ ಯೋಜನೆಯ ಹೆಚ್ಚು ಸಮತೋಲಿತ ವಿಧಾನವನ್ನು ತೆಗೆದುಕೊಳ್ಳುವ ಪ್ರಯತ್ನದಲ್ಲಿ ಈ ಆಯ್ಕೆಯನ್ನು ಪರಿಗಣಿಸಲಾಗಿದ್ದು, ಕೇಂದ್ರವು 2004 ರಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಬದಲಿಸಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಅನ್ನು ಪರಿಚಯಿಸಿತು.

ಆದರೆ ರಾಜಸ್ಥಾನ, ಛತ್ತೀಸ್‌ಗಢ ಮತ್ತು ಜಾರ್ಖಂಡ್ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ OPS ಅನ್ನು ಮತ್ತೆ ಪ್ರಾರಂಭಿಸುವ ನಿರ್ಧಾರವನ್ನು ಮಾಡಿದ್ದು, ಈ ಬಗ್ಗೆ ಕೇಂದ್ರ ಮತ್ತು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(PFRDA) ಗೆ ತಿಳಿಸಿದ್ದು, ಇದರ ಬಳಿಕ RBI ವರದಿಯನ್ನು ಬಿಡುಗಡೆ ಮಾಡಿದೆ.

ಹಳೆಯ ಪಿಂಚಣಿ ಯೋಜನೆ ಸರ್ಕಾರಿ ನೌಕರರಿಗೆ ಕೊನೆಯ ವೇತನದ ಶೇ. 50 ರಷ್ಟು ಪೆನ್ಸನ್ ನೀಡುವ ವ್ಯಾಖ್ಯಾನಿತ ಪಿಂಚಣಿ ಯೋಜನೆಯನ್ನು ನೀಡಿತು. ಮತ್ತು ಉದ್ಯೋಗದ ಅವಧಿಯಲ್ಲಿ ಪಿಂಚಣಿ ಮೊತ್ತವನ್ನು ಸಂಬಳದಿಂದ ತೆಗೆದಿಲ್ಲ. ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಅಡಿಯಲ್ಲಿ ನೌಕರರು ತಮ್ಮ ಸಂಬಳದ 10 ಪ್ರತಿಶತವನ್ನು ಕೊಡುಗೆ ನೀಡುತ್ತಾರೆ. ಮತ್ತು ಸರ್ಕಾರವು ನೌಕರರ ರಾಷ್ಟ್ರೀಯ ಪಿಂಚಣಿ ಯೋಜನೆ ಖಾತೆಗಳಿಗೆ 14 ಪ್ರತಿಶತವನ್ನು ಕೊಡುಗೆ ನೀಡುತ್ತದೆ ಎಂದು ಹೇಳಲಾಗಿದೆ.

Leave A Reply

Your email address will not be published.