Indian Railways Train : ಭಾರತೀಯ ರೈಲುಗಳಿಗೆ ಅವುಗಳ ಹೆಸರನ್ನು ಯಾವ ಆಧಾರದಲ್ಲಿ ನೀಡಲಾಗಿದೆ ಗೊತ್ತೇ? ಸಂಪೂರ್ಣ ವಿವರ ಇಲ್ಲಿದೆ
Indian Railways Train : ಭಾರತೀಯ ರೈಲ್ವೇಗಳು (Indian Railway) ಪ್ರಯಾಣಿಕರ ಅಗತ್ಯತೆಗಳನ್ನು ಪೂರೈಸಲು ಪ್ರತಿದಿನ ಸಾವಿರಾರು ರೈಲುಗಳ ಸೇವೆಗಳನ್ನು ನೀಡುತ್ತಿದೆ. ಹಾಗೆನೇ ವಿಶ್ವದಲ್ಲಿಯೇ ಭಾರತೀಯ ರೈಲ್ವೆ ಮಾರ್ಗದ ಉದ್ದವು ನಾಲ್ಕನೇ ಅತಿದೊಡ್ಡ ರಾಷ್ಟ್ರೀಯ ರೈಲ್ವೆ ವ್ಯವಸ್ಥೆಯನ್ನು ಹೊಂದಿರುವ ಹೆಗ್ಗಳಿಕೆಯನ್ನು ಪಡೆದಿದೆ.
ನಿಮಗೆ ತಿಳಿದಿದೆಯೇ, ಹೆಚ್ಚಿನ ದೂರ ಪ್ರಯಾಣದ ರೈಲುಗಳಿಗೆ ಗಮ್ಯಸ್ಥಾನದ ಹೆಸರನ್ನು ಇಡುವ ಪರಿಪಾಠ ಇದೆ. ಆದರೂ, ರಾಜಧಾನಿ ಎಕ್ಸ್‌ಪ್ರೆಸ್, ಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ಡುರೊಂಟೊ ಎಕ್ಸ್‌ಪ್ರೆಸ್ ಸೇರಿದಂತೆ ಮೂರು ರೈಲುಗಳು ಕೆಲವೊಂದು ನಿಯಮವನ್ನು ಅನುಸರಿಸುತ್ತವೆ. ಹಾಗಾದರೆ ಈ ರೈಲುಗಳಿಗೆ ಹೇಗೆ ಹೆಸರಿಡಲಾಗಿದೆ? ಅವರ ಹೆಸರುಗಳು ಏನನ್ನು ಪ್ರತಿನಿಧಿಸುತ್ತವೆ? ಎಂಬುದರ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಶತಾಬ್ದಿ ಎಕ್ಸ್‌ಪ್ರೆಸ್ ( Shatabdi Express)
ಇದು 1989 ರಲ್ಲಿ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ 100 ನೇ ಜನ್ಮದಿನದಂದು ಪ್ರಾರಂಭವಾಯಿತು. ಆದ್ದರಿಂದ ಶತಾಬ್ದಿ ಎಕ್ಸ್‌ಪ್ರೆಸ್ ಎಂದು ಹೆಸರಾಯಿತು. ಶತಾಬ್ದಿ ಎಂದರೆ ಶತಮಾನ. ಈ ರೈಲು 400-800 ಕಿಮೀ ವ್ಯಾಪ್ತಿಯಲ್ಲಿ ಚಲಿಸುತ್ತದೆ. ಇದು ಗಂಟೆಗೆ 160 ಕಿಲೋಮೀಟರ್‌ಗಳ ಗರಿಷ್ಠ ವೇಗವನ್ನು ಹೊಂದಿದೆ ಮತ್ತು ಭಾರತೀಯ ರೈಲ್ವೇಯಿಂದ ನಡೆಸಲ್ಪಡುವ ದೂರದ ರೈಲುವಾದ ರಾಜಧಾನಿ ಎಕ್ಸ್‌ಪ್ರೆಸ್‌ನಂತೆಯೇ ವೈಶಿಷ್ಟ್ಯಗಳನ್ನು ಹೊಂದಿದೆ.
ರಾಜಧಾನಿ ಎಕ್ಸ್‌ಪ್ರೆಸ್ (Rajadhani Express)
ರಾಜಧಾನಿ ಎಕ್ಸ್‌ಪ್ರೆಸ್ ಅನ್ನು ಭಾರತದ ಉನ್ನತ ಶ್ರೇಣಿಯ ರೈಲುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ, ಇದು ದೆಹಲಿ ಮತ್ತು ಇತರ ರಾಜ್ಯಗಳ ರಾಜಧಾನಿಗಳ ನಡುವೆ ಚಲಿಸುತ್ತದೆ. ರಾಜಧಾನಿ ಎಂದರೆ ಹಿಂದಿಯಲ್ಲಿ ರಾಜಧಾನಿ, ಆದ್ದರಿಂದ ಈ ರೈಲನ್ನು ರಾಜಧಾನಿ ಎಕ್ಸ್‌ಪ್ರೆಸ್ ಎಂದು ಕರೆಯಲಾಗುತ್ತದೆ. ರೈಲಿನ ಗರಿಷ್ಠ ವೇಗ ಗಂಟೆಗೆ 140 ಕಿಲೋಮೀಟರ್. ಇದು ಹವಾನಿಯಂತ್ರಿತ ರೈಲು ಆಗಿದ್ದು, ಜೊತೆಗೆ ಆಹಾರ ಕೂಡಾ ದೊರೆಯುತ್ತದೆ.
ದುರಂಟೋ ಎಕ್ಸ್‌ಪ್ರೆಸ್ (Duronto Express)
ಬಂಗಾಳಿ ಭಾಷೆಯಲ್ಲಿ ದುರೊಂಟೋ ಎಂದರೆ ‘ಅಡೆತಡೆಯಿಲ್ಲದ’ ಎಂದರ್ಥ. ಆದ್ದರಿಂದ ರೈಲಿಗೆ ದುರಂಟೋ ಎಕ್ಸ್‌ಪ್ರೆಸ್ ಎಂದು ಹೆಸರಿಸಲಾಗಿದೆ ಏಕೆಂದರೆ ಇದು ತನ್ನ ಪ್ರಯಾಣದ ಸಮಯದಲ್ಲಿ ಕನಿಷ್ಠ ಸಂಖ್ಯೆಯ ನಿಲ್ದಾಣಗಳಲ್ಲಿ ಹೊಂದಿದೆ ಮತ್ತು ಹೆಚ್ಚಿನ ದೂರವನ್ನು ಮಾತ್ರ ಕ್ರಮಿಸುತ್ತದೆ. ಇದು ಗಂಟೆಗೆ ಗರಿಷ್ಠ 140 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ.
ಈ ರೈಲುಗಳ ಹೊರತಾಗಿ, ಭಾರತೀಯ ರೈಲ್ವೇ ರೈಲುಗಳಿಗೆ ಹೆಸರನ್ನು ನಿಯೋಜಿಸುವ ಅತ್ಯಂತ ಸಾಮಾನ್ಯವಾದ ಮಾರ್ಗವೆಂದರೆ ರೈಲು ಎಂಡ್ ಪಾಯಿಂಟ್ ಮತ್ತು ರೈಲು ವರ್ಗದ ಹೆಸರನ್ನು ಒದಗಿಸುವುದು. ಉದಾಹರಣೆಗೆ, ಬೆಂಗಳೂರು-ಚೆನ್ನೈ ಮೇಲ್, ಪೂರ್ಣ-ಹೈದರಾಬಾದ್ ಪ್ಯಾಸೆಂಜರ್, ಚೆನ್ನೈ-ಜೈಪುರ ಎಕ್ಸ್‌ಪ್ರೆಸ್, ಹೌರಾ-ಮುಂಬೈ ಮೇಲ್ ಇತ್ಯಾದಿ.