Huawei Watch Buds : ಈ ವಾಚ್ ಖರೀದಿಸಲು ಜನ ತೋರಿಸ್ತಾರೆ ಎಲ್ಲಿಲ್ಲದ ಆತುರ, ವಿಶ್ವದಾದ್ಯಂತ ಗಮನ ಸೆಳೆದ ಈ ಸ್ಮಾರ್ಟ್ ವಾಚ್ ನ ವಿಶೇಷತೆ ಏನು ಗೊತ್ತಾ?

ಮೊದಲೆಲ್ಲ ಸಮಯ ನೋಡಬೇಕೆಂದರೆ ಎಲ್ಲರಲ್ಲೂ ಒಂದೇ ರೀತಿಯ ವಾಚ್ ಇತ್ತು. ಹಿಂದೆ ಹೆಚ್ಚಾಗಿ ಚೈನ್ ರೀತಿಯ ವಾಚ್ ಇತ್ತು. ಈಗಲೂ ಇದೆ ಕೂಡ. ಜೊತೆಗೆ ಇದೀಗ ವಿಧ ವಿಧವಾದ ವಾಚ್ ಗಳೂ ಮಾರುಕಟ್ಟೆಗೆ ಬಂದಿದೆ. ವಿವಿಧ ಬಣ್ಣದ, ಅದ್ಭುತ ವಿನ್ಯಾಸದ, ಉತ್ತಮ ಫೀಚರ್ ಇರುವ ಅಷ್ಟೇ ಅಲ್ಲ ಸ್ಮಾರ್ಟ್ ವಾಚ್ ಕೂಡ ಬಂದಿದೆ. ಇದಂತೂ ಇತ್ತೀಚಿನ ಜನರ ಕೈಯಲ್ಲಿ ಇದು ಸಾಮಾನ್ಯವಾಗಿಬಿಟ್ಟಿದೆ. ಹಲವು ವೈಶಿಷ್ಟ್ಯಗಳನ್ನು ಒಳಗೊಂಡ ಸ್ಮಾರ್ಟ್ ವಾಚ್ (Smart watch) ಇಂದಿನ ಫ್ಯಾಷನ್ ಆಗಿಬಿಟ್ಟಿದೆ. ಇದೀಗ ಅಂತಹದೇ ವಿಭಿನ್ನ ವಿನ್ಯಾಸದ ವಾಚ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಜನಪ್ರಿಯ ಟೆಕ್ ಬ್ರ್ಯಾಂಡ್ Huawei ಕಂಪೆನಿಯು Huawei Watch Buds ಸಾಧನವನ್ನು ಬಿಡುಗಡೆ ಮಾಡಿದ್ದು, ಇದರ ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿದೆ.

ಈ ಹೊಸ ಡಿವೈಸ್, ಸ್ಮಾರ್ಟ್‌ವಾಚ್ ಮತ್ತು ವೈರ್‌ಲೆಸ್ ಸ್ಟಿರಿಯೊ ಹೆಡ್‌ಫೋನ್( headphone) ಎರಡು ಸಾಧನಗಳನ್ನು ಒಳಗೊಂಡಿದ್ದು, ನೋಡೋದಿಕ್ಕೆ ಈ Huawei Watch Buds ಒಂದು ಸ್ಮಾರ್ಟ್‌ವಾಚ್ ರೀತಿಯಿದ್ದರೂ, ಇದು TWS ಇಯರ್‌ಬಡ್‌ಗಳನ್ನು (earbud) ಸಂಗ್ರಹಿಸುವ ಸಾಮರ್ಥ್ಯವನ್ನು ಪಡೆದಿದೆ. ಈ ಸ್ಮಾರ್ಟ್‌ವಾಚ್ 466×466 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 1.43-ಇಂಚಿನ AMOLED ಬಣ್ಣದ ಟಚ್‌ಸ್ಕ್ರೀನ್ ಹೊಂದಿದೆ.

ಈ ಡಿವೈಸ್ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP54 ರೇಟಿಂಗ್ ಹೊಂದಿದ್ದು, ಆಪ್ಟಿಕಲ್ ಹಾರ್ಟ್ ರೇಟ್ ಸೆನ್ಸಾರ್ 5.0, ಆಂಬಿಯಂಟ್ ಆಪ್ಟಿಕಲ್ ಸೆನ್ಸಾರರ್, ಹಾಲ್ ಎಫೆಕ್ಟ್ ಸೆನ್ಸಾರ್, ಬೋನ್ ಕಂಡೆಕ್ಷನ್ ಕಾಂಪೊನೆಂಟ್ (VACC) ನಂತಹ ಹಲವು ಪ್ರೀಮಿಯಂ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹಾಗೇ ಮೂರು ದಿನಗಳ ಬ್ಯಾಟರಿ ಅವಧಿ ಹೊಂದಿದೆ ಎಂದು ಕಂಪೆನಿ ತಿಳಿಸಿದೆ.

ಅಲ್ಲದೆ, ಇದು ಬ್ಲೂಟೂತ್ ಬೆಂಬಲ ಹೊಂದಿದ್ದು, ಇಯರ್‌ಬಡ್‌ಗಳು ಪ್ಲ್ಯಾನರ್ ಡಯಾಫ್ರಾಮ್ ಘಟಕ ಮತ್ತು ಅಂತರ್ಗತ ಮೈಕ್ರೊಫೋನ್ ಒಳಗೊಂಡಿವೆ. ಇದರಲ್ಲಿನ ಅಡಾಪ್ಟಿವ್ ಐಡೆಂಟಿಫಿಕೇಶನ್ ತಂತ್ರಜ್ಞಾನದ ಮೂಲಕ ಸ್ವಯಂಚಾಲಿತವಾಗಿ ಎಡ ಅಥವಾ ಬಲಭಾಗ ಅನುಗುಣವಾಗಿ ಕೆಲಸ ಮಾಡುತ್ತದೆ. ಕರೆಗಳಿಗಾಗಿ AI ಶಬ್ದ ರದ್ದತಿ ಇದ್ದು, 40 ಗಂಟೆಗಳವರೆಗೆ ಸಂಗೀತ (music) ಪ್ಲೇಬ್ಯಾಕ್ ನೀಡುವ ಸಾಮರ್ಥ್ಯವನ್ನೂ ಈ ಇಯರ್‌ಬಡ್‌ಗಳು ಪಡೆದಿವೆ. ಜೊತೆಗೆ ಇದು Android 7.0 ಮತ್ತು iOS 9.0 ನಂತರ ಫೋನ್‌ಗಳಿಗೆ ಹೊಂದಿಕೊಳ್ಳುತ್ತವೆ.

ಬೆಲೆ ಮತ್ತು ಲಭ್ಯತೆ :

Huawei Watch Buds ಸಾಧನ ಇದೀಗ ಯನೈಟೆಡ್ ಕಿಂಗಡಮ್ (United Kingdom) ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಅಲ್ಲಿ ಇದರ ಬೆಲೆ GBP 449.99 ಅಂದ್ರೆ ಅಂದಾಜು 45,000 ರೂ. ಗಳಾಗಿದೆ. ಈ ಸಾಧನ ಬ್ಲ್ಯಾಕ್ ಕರೆಂಟ್ ಬಣ್ಣದಲ್ಲಿ ಬಿಡುಗಡೆಯಾಗಿದೆ. ಈ ಸಾಧನವು ಮಾರ್ಚ್ 1 ರಿಂದ ಮಾರಾಟಕ್ಕೆ ಬರಲಿದೆ ಎಂದು ಕಂಪೆನಿ ತಿಳಿಸಿದೆ. ಆದರೆ, ಭಾರತದ(India) ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಬಗ್ಗೆ ಕಂಪೆನಿ ಸದ್ಯಕ್ಕೆ ತಿಳಿಸಿಲ್ಲ.

Leave A Reply

Your email address will not be published.