Pregnancy : ನೀವು ಗರ್ಭಿಣಿಯಾಗದೇ ಇದ್ದರೂ, ಟೆಸ್ಟ್ ನಲ್ಲಿ ಪಾಸಿಟಿವ್ ಬಂದರೆ ಇವು ಮುಖ್ಯ ಕಾರಣವಾಗಿರಬಹುದು!

ಕಂದನ ನಿರೀಕ್ಷೆ ಇಟ್ಟುಕೊಂಡಿರುವ ಹೆಣ್ಣು ಮುಟ್ಟು ಆಗದೇ ಇದ್ದಾಗ ಮೊದಲು ಉತ್ಸಾಹ, ಕುತೂಹಲದಿಂದ ಮಾಡುವುದೇ ಪರೀಕ್ಷೆ. ಅದೂ ಮನೆಯಲ್ಲೇ ಮಾಡಬಹುದಾದ ಪರೀಕ್ಷೆ. ಇದೀಗ ಕೈಗೆಟಕುವ ದರದಲ್ಲೇ ಪ್ರೆಗ್ನೆನ್ಸಿ ಟೆಸ್ಟ್ ಕಿಟ್‌ಗಳು ಸಿಗುವುದರಿಂದ ಗರ್ಭಧರಿಸಿದ್ದೇವೆಯೇ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಆದರೆ ಕೆಲವೊಮ್ಮೆ ಪರೀಕ್ಷೆ ಮಾಡಿದಾಗ ಪಾಸಿಟಿವ್ ಅಂತ ಗೊತ್ತಾದಾಗ ಮಗುವಿನ ನಿರೀಕ್ಷೆಯಲ್ಲಿದ್ದರೆ ತುಂಬಾನೇ ಖುಷಿಯಾಗುವುದು, ಆದರೆ ಎಷ್ಟೋ ಬಾರಿ ನಾವು ನೋಡಿದ್ದು ನಿಜವಾಗಿರಬೇಕಾಗಿಲ್ಲ. ಆಸ್ಪತ್ರೆಗೆ ಹೋಗಿ ಮತ್ತೊಮ್ಮೆ ಖಚಿತ ಪಡಿಸಲು ಮೂತ್ರ ಪರೀಕ್ಷೆ ಮಾಡಿಸಿದಾಗಲೂ ಗರ್ಭನಿಂತಿದೆ ಎಂದು ಮತ್ತೊಮ್ಮೆ ಖಚಿತವಾಗುವುದು, ಆದರೆ ಅಲ್ಟ್ರಾಸೌಂಡ್‌ ಮಾಡಿಸಿದಾಗ ತಿಳಿಯುವುದು ನಿಜವಾಗಿ ಗರ್ಭಧಾರಣೆಯಾಗಿಲ್ಲ ಎಂದು. ಹೌದು ಎಷ್ಟೋ ಜನರಿಗೆ ಈ ಅನುಭವವಾಗಿರುತ್ತದೆ.

ಮುಖ್ಯವಾಗಿ ಚೆಕ್‌ ಮಾಡುವ ಸಾಧನ ಸರಿಯಿಲ್ಲದಿದ್ದರೆ
ಕೆಲವೊಮ್ಮೆ ಉಪಕರಣಗಳು ಸರಿಯಿಲ್ಲದಿದ್ದರೆ ತಪ್ಪಾದ ಫಲಿತಾಂಶ ಬರುವುದು. ನೀವು ಪ್ರೆಗ್ನೆನ್ಸಿ ಕಿಟ್‌ ತಂದು ಪರೀಕ್ಷೆ ಮಾಡಿದಾಗ ಅದು ಸರಿಯಿಲ್ಲದಿದ್ದರೆ ಈ ರೀತಿಯ ತಪ್ಪಾದ ಮಾಹಿತಿ ಸಿಗುವುದು. ಮಖ್ಯವಾಗಿ ನೀವು ಮನೆಯಲ್ಲಿ ಪರೀಕ್ಷೆ ಮಾಡಿಸಿದಾಗ ಗರ್ಭಿಣಿ ಅಂತ ಬಂದರೂ ಆಸ್ಪತ್ರೆಗೆ ಹೋಗಿ ಸ್ಕ್ಯಾನಿಂಗ್ ಮಾಡಿಸಿದ ಮೇಲಷ್ಟೇ ಖಚಿತ ಪಡಿಸಬಹುದು.

ಈ ಕೆಳಗಿನ ಸಂದರ್ಭಗಳಲ್ಲಿ ಗರ್ಭಿಣಿ ಅಂತ ಟೆಸ್ಟ್ ಮಾಡಿದಾಗ ತಿಳಿಯುತ್ತೆ, ಆದರೆ ಆ ಗರ್ಭ ನಿಜವಾಗಿರಲ್ಲ :

• ಕೆಲವೊಂದು ಔಷಧಗಳ ಪರಿಣಾಮ Novarel, Pregnyl, Ovidrel, Profasi, ಈ ಮೇಲಿನಂತೆ ಬ್ರ್ಯಾಂಡ್‌ ಅಡಿಯಲ್ಲಿ ಮಾರಾಟವಾಗುವ ಔಷಧಗಳನ್ನು ಸೇವಿಸಿದಾಗ ಕೂಡ ಈ ರೀತಿ ತಪ್ಪಾದ ಪ್ರೆಗ್ನೆನ್ಸಿ ರಿಸಲ್ಟ್ ಬರಲು ಸಾಧ್ಯವಿದೆ.

• ಕೆಲವೊಂದು ಕಾಯಿಲೆಗಳಿದ್ದಾಗ ಅಂದರೆ ಕೀಮೋಥೆರಪಿ, ಮೋಲಾರ್ ಪ್ರೆಗ್ನೆನ್ಸಿ, ಅಪರೂಪದ ಆ್ಯಂಟಿಬಾಡಿ ಉತ್ಪತ್ತಿಯಾದಾಗ, ಮೂತ್ರನಾಳದ ಸೋಂಕು, ಕಿಡ್ನಿ ಸಮಸ್ಯೆ, ಗರ್ಭಕೋಶದ ಕ್ಯಾನ್ಸರ್, ಮೇಧೋಜೀರಕ ಸಮಸ್ಯೆಈ ಮೇಲಿನ ಕಾಯಿಲೆ ಇದ್ದಾಗ ಪಾಸಿಟಿವ್ ಎಂದು ತೋರಿಸುವ ಸಾಧ್ಯತೆ ಇದೆ.

• ಕೆಮಿಕಲ್ ಪ್ರೆಗ್ನೆನ್ಸಿ: ಫಲವತ್ತತೆಯಾದ ಅಂಡಾಣು ಅಂದರೆ ಭ್ರೂಣ ಸರಿಯಾಗಿ ಬೆಳವಣಿಗೆಯಾಗದೇ ಇದ್ದಾಗ, ಗರ್ಭಿಣಿ ಅಂತ ಟೆಸ್ಟ್ ಮಾಡಿದಾಗ ಬರುತ್ತೆ, ಆದರೆ ಮಗುವಾಗಲು ಸಾಧ್ಯವಿಲ್ಲ. ಕೆಮಿಕಲ್‌ ಪ್ರೆಗ್ನೆನ್ಸಿಗೆ ನಿಖರ ಕಾರಣವೇನು ಎಂಬುವುದು ವೈದ್ಯಕೀಯ ಜಗತ್ತಿಗೂ ಗೊತ್ತಿಲ್ಲ. ನಿಮ್ಮ ಮುಟ್ಟಿನ ದಿನಾಂಕದಲ್ಲಿ ಮುಟ್ಟಾಗದಿದ್ದರೆ ತಕ್ಷಣ ಪ್ರೆಗ್ನೆನ್ಸಿ ಟೆಸ್ಟ್ ಮಾಡಬೇಡಿ. ಒಂದು ವಾರ ಕಾದು ಮಾಡಿಸಿದರೆ ಒಳ್ಳೆಯದು.

• ಎಕ್ಟೋಪಿಕ್‌ ಪ್ರೆಗ್ನೆನ್ಸಿ: ಇದರಲ್ಲಿ ಭ್ರೂಣವನ್ನು ಗರ್ಭಕೋಶದಿಂದ ಹೊರಗಡೆ ಫಾಲೀಪಿಯನ್‌ ಟ್ಯೂಬ್‌ನಲ್ಲಿ ಬೆಳೆಯುವುದು. ಇದು ತುಂಬಾನೇ ಅಪಾಯಕಾರಿ, ಈ ರೀತಿಯಾದಾಗ ಕೂಡಲೇ ಆ ಭ್ರೂಣವನ್ನು ತೆಗೆಯಬೇಕು.
ಅಂದರೆ ಎಕ್ಟೋಪಿಕ್ ಗರ್ಭಧಾರಣೆಗೆ ಕಾರಣಗಳು ಹಲವಾರು ಇವೆ. ಫಾಲೋಪಿಯನ್‌ಗೆ ಏನಾದರೂ ಹಾನಿಯಾಗಿದ್ದರೆ, ಸಂತಾನೋತ್ಪತ್ತಿಗೆ ಚಿಕಿತ್ಸೆ ಪಡೆದಿದ್ದರೆ, ಟ್ಯೂಬೆಲ್‌ ಸರ್ಜರಿಯಾಗುದ್ದರೆ, ಈ ಮೊದಲು ಮೂತ್ರನಾಳದ ಸೋಂಕು ಇದ್ದರೆ ಅಥವಾ ಈ ಮೊದಲು ಎಕ್ಟೋಪಿಕ್‌ ಪ್ರೆಗ್ನೆನ್ಸಿಯಾಗಿದ್ದರೆ ಪಾಸಿಟಿವ್ ಬರುವ ಸಾಧ್ಯತೆ ಇದೆ.

ಅದಲ್ಲದೆ ಎಕ್ಟೋಪಿಕ್‌ ಪ್ರೆಗ್ನೆನ್ಸಿಯಲ್ಲಿ ಮುಖ್ಯವಾಗಿ ಹೊಟ್ಟೆ ನೋವು, ಸೊಂಟ ನೋವು, ಬೆನ್ನು, ಕುತ್ತಿಗೆಯಲ್ಲಿ ನೋವು ಕಂಡು ಬರುವುದು, ಹೊಟ್ಟೆಯ ಒಂದು ಬದಿಯಲ್ಲಿ ತುಂಬಾ ನೀವು ಇರುವುದು, ರಕ್ತಸ್ರಾವ ಕಂಡು ಬರುವುದು, ಸುಸ್ತು, ತಲೆಸುತ್ತು, ಗುದಧ್ವಾರದ ಬಳಿ ಒತ್ತಡವಿರುತ್ತದೆ ಈ ಲಕ್ಷಣ ಎಲ್ಲರಿಗೂ ಕಂಡು ಬರಬೇಕೆಂದಿಲ್ಲ.

• ಇತ್ತೀಚೆಗೆ ಗರ್ಭಪಾತವಾಗಿದ್ದರೆ: ಗರ್ಭಿಣಿಯಾಗಿದ್ದಾಗ ಉತ್ಪತ್ತಿಯಾದ ಹಾರ್ಮೋನ್ ನಿಮ್ಮ ರಕ್ತದಲ್ಲಿ 6 ವಾರಗಳ ಕಾಲ ಇರುವ ಸಾಧ್ಯತೆ ಇದೆ. ಆದ್ದರಿಂದ ಗರ್ಭಪಾತವಾದ ಬಳಿಕ 6 ವಾರದೊಳಗೆ ಪರೀಕ್ಷೆ ಮಾಡಿದರೆ ಪಾಸಿಟಿವ್ ಅಂತ ಬರಬಹುದು.

• ಕೆಲವೊಮ್ಮೆ ಎರಡು ಲೈನ್ ಡಾರ್ಕ್ ಆಗಿರದಿದ್ದರೆ
ಮನೆಯಲ್ಲಿಯೇ ಪ್ರೆಗ್ನೆನ್ಸಿ ಟೆಸ್ಟ್‌ ಮಾಡಿದಾಗ ಒಂದು ಲೈನ್‌ ಡಾರ್ಕ್ ಆಗಿ ಕಂಡು ಬಂದು ಮತ್ತೊಂದು ಅಷ್ಟೊಂದು ಡಾರ್ಕ್‌ ಇಲ್ಲದಿದ್ದರೆ ಒಂದು ಗರ್ಭಧಾರಣೆಯ ಆರಂಭವಷ್ಟೇ ಅಥವಾ ಗರ್ಭಧಾರಣೆಯಾಗಿರುವುದಿಲ್ಲ.

ಆದ್ದರಿಂದ ನೀವು ಪ್ರೆಗ್ನೆನ್ಸಿ ಪರೀಕ್ಷೆ ಮಾಡಿದಾಗ ಪಾಸಿಟಿವ್ ಅಂತ ಗೊತ್ತಾದಾಗ ಮಗುವಿನ ನಿರೀಕ್ಷೆಯಲ್ಲಿದ್ದರೆ ಈ ಮೇಲಿನ ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳುವುದು ಮುಖ್ಯವಾಗಿದೆ.

Leave A Reply

Your email address will not be published.