Pulsar 220F : ಬಜಾಜ್ ಪಲ್ಸರ್ 220F ಶೀಘ್ರ ಮಾರುಕಟ್ಟೆಗೆ ! ಕೆಲವೇ ದಿನಗಳಲ್ಲಿ ವಿತರಣೆ ಪ್ರಾರಂಭ
ಟೂ ವ್ಹೀಲರ್‌ಗಳ ಕ್ರೇಜ್ ಯಾರಿಗೆ ಇರಲ್ಲ ಹೇಳಿ. ಅದರಲ್ಲೂ ಬಜಾಜ್ ಕಂಪನಿಯ ವಾಹನಗಳಿಗೆ ಬೇಡಿಕೆ ಹೆಚ್ಚೇ ಇದೆ ಎಂದು ಹೇಳಬಹುದು. ಇದೊಂದು ಜನ ಮೆಚ್ಚಿನ ವಾಹನವಾಗಿದೆ. ಜನರ ನೆಚ್ಚಿನ ಬಜಾಜ್ ಪಲ್ಸರ್ 220ಎಫ್ (ಬಜಾಜ್ ಪಲ್ಸರ್ 220 ಎಫ್) ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲು ಸಜ್ಜಾಗಿದೆ. ವರದಿಗಳ ಪ್ರಕಾರ, ಪಲ್ಸರ್ 220F ಕೆಲವು ನಗರಗಳ ಡೀಲರ್‌ಶಿಪ್‌ಗಳಿಗೆ ತಲುಪಿಸಿದೆ. ಸ್ಥಗಿತಗೊಂಡ ನಂತರವೂ ಜನರಲ್ಲಿ ಪಲ್ಸರ್ 220 ಎಫ್‌ಗೆ ಭಾರಿ ಬೇಡಿಕೆಯಿದ್ದ ಕಾರಣ, ಮಾದರಿಯನ್ನು ಮತ್ತೆ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ ಎಂದು ವರದಿ ತಿಳಿಸಿದೆ
ಮುಂದಿನ ವಾರಗಳಲ್ಲಿ ಕೆಲವು ನಗರಗಳಲ್ಲಿ ಪಲ್ಸರ್ 220 ಎಫ್ ವಿತರಣೆಯನ್ನು ಪ್ರಾರಂಭವಾಗಲಿದೆ ಎನ್ನಲಾಗಿದೆ. ಆದರೆ, ಈ ಬೈಕ್ ಬಿಡುಗಡೆ ಬಗ್ಗೆ ಕಂಪನಿ ಅಧಿಕೃತ ಮಾಹಿತಿ ನೀಡಿಲ್ಲ. ವರದಿಯ ಪ್ರಕಾರ, ಬಜಾಜ್ ಪಲ್ಸರ್ 220ಎಫ್ ಬೆಲೆ 1.35 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಆಗಿರಬಹುದು. ಬೆಲೆಯ ಬಗ್ಗೆ ಇನ್ನೂ ಅಧಿಕೃತ ದೃಢೀಕರಣವಿಲ್ಲ.
ಪಲ್ಸರ್ ಎನ್ 250 ಮತ್ತು ಪಲ್ಸರ್ ಎಫ್ 250 ರ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ನಂತರ ಕಂಪನಿಯು ಪಲ್ಸರ್ 220 ಎಫ್ ಅನ್ನು ನಿಲ್ಲಿಸಿತ್ತು. ಆದರೆ ಈ ಬೈಕ್ ಬಜಾಜ್‌ನ ಅತಿ ಹೆಚ್ಚು ಮಾರಾಟವಾಗುವ ಬೈಕ್‌ಗಳಲ್ಲಿ ಒಂದಾಗಿದೆ. ಈ ಬೈಕ್ ವಿತರಣೆ ನಿಲ್ಲಿಸಿದ ನಂತರವೂ ಈ ಬೈಕ್‌ಗೆ ಫ್ಯಾನ್ ಫಾಲೋಯಿಂಗ್ ಕಡಿಮೆಯಾಗಿಲ್ಲ ಮತ್ತು ಈಗಲೂ ಕಂಪನಿಯು ಈ ಬೈಕ್ ಅನ್ನು ಮರುಪ್ರಾರಂಭಿಸಲು ಜನರಿಂದ ಭಾರಿ ಬೇಡಿಕೆಯನ್ನು ಪಡೆಯುತ್ತಿದೆ ಎಂದು ಹೇಳಲಾಗಿದೆ.
ಬಜಾಜ್ ಪಲ್ಸರ್ 220F 220cc ಇಂಧನ-ಇಂಜೆಕ್ಟೆಡ್ ಸಿಂಗಲ್ ಸಿಲಿಂಡರ್ DTSi ಎಂಜಿನ್ ಹೊಂದಿದೆ. ಇದು 20.9 bhp ಮತ್ತು 18.5 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್ 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಬಜಾಜ್ ಪಲ್ಸರ್ ಆರಾಮ ಮತ್ತು ಸವಾರಿ ಕಾರ್ಯಕ್ಷಮತೆ ಎರಡರಲ್ಲೂ ಉತ್ತಮವಾಗಿದೆ. ಬಜಾಜ್ ಪಲ್ಸರ್ 220F ಅನ್ನು ಮೊದಲ ಬಾರಿಗೆ 2009 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಅಂದಿನಿಂದ ಅದರ ಎಂಜಿನ್, ವಿನ್ಯಾಸ ಮತ್ತು ಕಾರ್ಯಕ್ಷಮತೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ.