Pakistan : ಪಾಕಿಸ್ತಾನದ ಆಡಳಿತಾತ್ಮಕ ಇತಿಹಾಸದಲ್ಲೇ ಮೊದಲು!! ಸಹಾಯಕ ಆಯುಕ್ತೆಯಾಗಿ ಹಿಂದೂ ಯುವತಿಯ ನೇಮಕ!!

Share the Article

ಪಾಕಿಸ್ತಾನದ ಆಡಳಿತಾತ್ಮಕ ಇತಿಹಾಸದಲ್ಲೇ ಮೊದಲ ಬಾರಿಗೆ ಹಿಂದೂ ಯುವತಿಯೊಬ್ಬಳು ಸಹಾಯಕ ಆಯುಕ್ತೆ, ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಇಲ್ಲಿನ ಅಲ್ಪಸಂಖ್ಯಾತ ಸಮುದಾಯದ ಸನಾ ರಾಮಚಂದ್ ಅಧಿಕಾರ ವಹಿಸಿಕೊಂಡ ಯುವತಿಯಾಗಿದ್ದು, ಪಂಜಾಬ್ ಪ್ರಾಂತ್ಯದ ಹಸನಾಬ್ದಲ್ ನ ಸಹಾಯಕ ಆಯುಕ್ತ ಹಾಗೂ ಅಲ್ಲಿನ ಆಡಳಿತಾಧಿಕಾರಿಯಾಗಿ ಹಿಂದೂ ಯುವತಿಯ ಆಯ್ಕೆ ಇತಿಹಾಸದಲ್ಲೇ ಮೊದಲು ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.

ಇಲ್ಲಿನ ಸಿಂಧ್ ಪ್ರಾಂತ್ಯದ ಶಿಕಾರಿಪುರ್ ಮೂಲದವರಾದ ಸನಾ 2020 ರ ಸಿ.ಎಸ್.ಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಸದ್ಯ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

Leave A Reply