Papaya Seeds Benefits : ಪರಂಗಿ ಬೀಜದಿಂದ ಅತ್ಯುತ್ತಮ ಪ್ರಯೋಜನ ಏನು ಗೊತ್ತಾ?
ಪರಂಗಿ ಹಣ್ಣು ಅಥವಾ ಪಪ್ಪಾಯಿ ಹಣ್ಣು (Papaya fruits) ನೋಡಲು ಇಷ್ಟ. ತಿನ್ನಲಂತು ಇನ್ನೂ ಇಷ್ಟ. ಅದರ ರುಚಿ ಆಹಾ!! ಸಿಹಿ (sweet) ಸಿಹಿಯಾಗಿರುವ ಪಪ್ಪಾಯವನ್ನು ವಯಸ್ಸಾದವರು, ಹಲ್ಲುಗಳ ಬಾಧೆ ಇದ್ದವರು ಕೂಡಾ ಸ್ವಾದ ಅನುಭವಿಸಿ ಆನಂದಿಸುತ್ತಾರೆ.
ಪಪ್ಪಾಯ ಹಣ್ಣನ್ನು ತಿನ್ನಲೆಂದು ಅದನ್ನು ಕಟ್ ಮಾಡುವಾಗ ಸಿಗುವ ಪರಂಗಿ ಹಣ್ಣಿನ ಬೀಜ (Papaya seeds) ಗಳು ಕಹಿ ಎನ್ನುವ ಕಾರಣಕ್ಕೆ ನಾವು ಅದನ್ನು ಬೇರ್ಪಡಿಸಿ ಕೇವಲ ಹಣ್ಣನ್ನು ಮಾತ್ರ ಸೇವಿಸಿ ಖುಷಿಪಡುತ್ತೇವೆ. ಆದರೆ ಹೆಚ್ಚಿನವರಿಗೆ ಪರಂಗಿ ಹಣ್ಣಿನ ಬೀಜಗಳ ಆರೋಗ್ಯ ಗುಟ್ಟು ತಿಳಿದಿಲ್ಲ. ನಾವಿಂದು ನಿಮಗೆ ಪರಂಗಿ ಹಣ್ಣಿನ ಬೀಜಗಳ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ತಿಳಿಸಲಿದ್ದೇವೆ.
ಪಪ್ಪಾಯಿ ಬೀಜಗಳು ಫೈಬರ್, ಸ್ಯಾಚುರೇಟೆಡ್ ಮತ್ತು ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್, ಜೀವಸತ್ವಗಳು, ಸತು, ರಂಜಕ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ ಮತ್ತು ಕ್ಯಾಲ್ಸಿಯಂ ಸೇರಿದಂತೆ ಹಲವು ಖನಿಜಗಳ ಗಣಿಯಾಗಿದೆ. ಹೆಚ್ಚುವರಿಯಾಗಿ, ಪಪ್ಪಾಯಿ ಹಣ್ಣಿನ ಬೀಜಗಳು ಹೆಚ್ಚಿನ ಪ್ರಮಾಣದ ಒಲಿಕ್ ಆಮ್ಲ, ಪಾಲಿಫಿನಾಲ್ ಗಳು ಮತ್ತು ಫ್ಲೇವನಾಯ್ಡ್ ಗಳನ್ನು ಹೊಂದಿರುತ್ತವೆ, ಅವು ಶಕ್ತಿಯುತ ಉತ್ಕರ್ಷಣ ನಿರೋಧಕಗಳಾಗಿವೆ.
ಪಪ್ಪಾಯಿ ಬೀಜಗಳು ಕಪ್ಪು ಬಣ್ಣದ್ದಾಗಿರುತ್ತವೆ, ಇದರಲ್ಲಿ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಇದನ್ನು ನೇರವಾಗಿ ತಿಂದರೆ ಕಹಿ ರುಚಿಯಾಗಿರುತ್ತದೆ. ಸಾಮಾನ್ಯವಾಗಿ ಈ ಬೀಜಗಳನ್ನು ಮೊದಲು ಬಿಸಿಲಿನಲ್ಲಿ ಒಣಗಿಸಿ, ನಂತರ ಪುಡಿಮಾಡಿ ಸೇವಿಸಲಾಗುತ್ತದೆ.
ಚರ್ಮದ ಸಮಸ್ಯೆ (skin problem) : ನೀವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಪಪ್ಪಾಯಿ ಬೀಜಗಳು ನಿಮಗೆ ಲಾಭದಾಯಕ ವ್ಯವಹಾರವೆಂದು ಸಾಬೀತುಪಡಿಸಬಹುದು. ಇದರಲ್ಲಿರುವ ಆಂಟಿಯೇಜ್ ಗುಣಲಕ್ಷಣಗಳು ಚರ್ಮವನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.
ಗಂಟು ನೋವು(lump pain) : ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಪಪ್ಪಾಯಿ ಬೀಜದ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ಗಂಟು ನೋವು ನಿವಾರಣೆಯಾಗುತ್ತದೆ.
ರೋಗನಿರೋಧಕ ಶಕ್ತಿ( immunity): ಪಪ್ಪಾಯಿ ಹಣ್ಣಿನ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳು ತುಂಬಿದೆ. ಹಾಗಾಗಿ ಇದು, ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಅಲ್ಲದೆ ದೇಹವನ್ನು ಸೋಂಕುಗಳು ಮತ್ತು ರೋಗಗಳಿಂದ ಸಹ ರಕ್ಷಿಸುತ್ತದೆ.
ಕೊಲೆಸ್ಟ್ರಾಲ್(Cholesterol) : ಇದು ದೇಹದಲ್ಲಿರುವಂತಹ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅವು ಓಲಿಕ್ ಆಮ್ಲ ಮತ್ತು ಇತರ ಮೊನೊಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ, ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್ಗಳು ನಮ್ಮ ದೇಹವನ್ನು ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ಈ ಬೀಜಗಳ ಸಹಾಯದಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು.
ಕ್ಯಾನ್ಸರ್(cancer) : ಪಪ್ಪಾಯಿ ಬೀಜಗಳು ಕ್ಯಾನ್ಸರ್ ಕೋಶಗಳು ಮತ್ತು ಗೆಡ್ಡೆಗಳ ಬೆಳವಣಿಗೆಯನ್ನು ತಡೆಯುವ ಏಜೆಂಟ್ಗಳನ್ನು ಹೊಂದಿರುತ್ತವೆ. ಪಪ್ಪಾಯಿ ಬೀಜಗಳು ಐರೋಥಿಯೋಸೈನೇಟ್ ಹಾಗೂ ಪಾಲಿಫಿನಾಲ್ ಗಳನ್ನು ಹೊಂದಿರುತ್ತವೆ. ಇದು ಕೊಲೊನ್, ಸ್ತನ, ಶ್ವಾಸಕೋಶ, ಲ್ಯುಕೇಮಿಯಾ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಸಮಸ್ಯೆಯನ್ನು ತಡೆಯುತ್ತದೆ.
ಕರುಳಿನ ಆರೋಗ್ಯ: ಪಪ್ಪಾಯಿ ಹಣ್ಣಿನ ಒಳಗಿರುವ ಬೀಜಗಳು ಕಾರ್ಪೈನ್ ಎಂಬ ವಸ್ತುವನ್ನು ಹೊಂದಿದ್ದು, ನಿಮ್ಮ ಕರುಳಿನಲ್ಲಿರುವ ಹುಳುಗಳು ಮತ್ತು ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯಮಾಡುತ್ತದೆ. ಅಲ್ಲದೆ, ಮಲಬದ್ಧತೆಯನ್ನು ತಪ್ಪಿಸುತ್ತದೆ ಮತ್ತು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಸಿರುತ್ತದೆ.
ಹೊಟ್ಟೆನೋವು(stomach ache) : ಒಂದು ಚಮಚ ಪಪ್ಪಾಯಿ ಬೀಜದ ಪುಡಿಯನ್ನು ದಿನಕ್ಕೆ 3 ಬಾರಿ ನೀರಿನಲ್ಲಿ ಮಿಶ್ರಣ ಮಾಡಿ ಕುಡಿಯುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ.
ತೂಕ (weight) : ನೀವು ದೇಹದ ತೂಕದಿಂದ ಬಳಲುತ್ತಿದ್ದೀರಾ? ಹಾಗಾದ್ರೆ, ಪಪ್ಪಾಯಿ ಬೀಜಗಳನ್ನು ಸೇವಿಸಿರಿ. ಪಪ್ಪಾಯಿ ಹಣ್ಣಿನಲ್ಲಿರುವ ಬೀಜಗಳಲ್ಲಿ ಕಡಿಮೆ ಕ್ಯಾಲೊರಿಗಳು ಮತ್ತು ಹೆಚ್ಚಿನ ಫೈಬರ್ ಇರುತ್ತದೆ. ಇದು ದೇಹದ ತೂಕವನ್ನು ಇಳಿಸಿಕೊಳ್ಳಲು ಉತ್ತಮ ಆಹಾರವಾಗಿದೆ.