OnePlus Monitor E24 : ಭಾರತದಲ್ಲಿ ಇಂದಿನಿಂದ OnePlus ನ ಎರಡು ಮಾನಿಟರ್‌ಗಳು ಲಭ್ಯ!

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರೀಮಿಯಂ ಫೋನುಗಳ ಮೂಲಕ ಒನ್‌ಪ್ಲಸ್ (OnePlus) ಕಂಪನಿಯು ಛಾಪನ್ನು ಮೂಡಿಸಿದ್ದು, ತನ್ನದೇ ಗ್ರಾಹಕ ಬಳಗವನ್ನು ಹೊಂದಿದೆ. ಭಾರತದ ಮಾರುಕಟ್ಟೆಯಲ್ಲಿ ತನ್ನದೇ ಗಟ್ಟಿ ನೆಲೆಯನ್ನು ಕಂಡುಕೊಂಡಿರುವ ಚೀನಾ ಮೂಲದ ಒನ್‌ಪ್ಲಸ್ ಕಂಪನಿಯು ಪರಿಚಯಿಸಿದ್ದ, ಮಾನಿಟರ್ ಎಕ್ಸ್ 27 (Monitor X27) ಮತ್ತು ಮಾನಿಟರ್ ಇ 24 (Monitor E24) ಎಂಬ ಎರಡು ಮಾನಿಟರ್‌ಗಳನ್ನು ಇಂದಿನಿಂದ(ಫೆಬ್ರವರಿ 16, 2023) ಗ್ರಾಹಕರಿಗೆ ಕೇವಲ 11,999 ರೂ.ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರಿಂದ ಗುಣಮಟ್ಟದ ಮಾನಿಟರ್ ಬಜೆಟ್ ಬೆಲೆಯಲ್ಲಿ ಗ್ರಾಹಕರ ಕೈ ಸೇರಲಿದ್ದು, ಇದು ಅತ್ಯುತ್ತಮ ಆಯ್ಕೆಯ ಸಾಧನವಾಗಿದೆ. ಬಜೆಟ್ ಬೆಲೆಯ OnePlus Monitor ಗಳ ವೈಶಿಷ್ಟ್ಯಗಳನ್ನು ನೋಡೋಣ ಬನ್ನಿ.

OnePlus ಲಾಂಚ್ ಮಾಡಿರುವ ನೂತನ Monitor E24 ಸಾಧನವು 24-ಇಂಚಿನ ಪರದೆಯನ್ನು ಹೊಂದಿದ್ದು, ಈ ಡಿಸ್‌ಪ್ಲೇ(Display) ಪ್ಯಾನಲ್ 75Hz ರಿಫ್ರೆಶ್ ರೇಟ್ ನೀಡಲಿದೆ. ಹಾಗೂ FHD ರೆಸಲ್ಯೂಶನ್ ಬೆಂಬಲಿಸುತ್ತದೆ. ಈ ಸ್ಮಾರ್ಟ್’ಫೋನ್ ಅಡಾಪ್ಟಿವ್-ಸಿಂಕ್ ಟೆಕ್ನಾಲಜಿಯನ್ನು ಬೆಂಬಲಿಸುವುದರ ಜೊತೆಗೆ ಡೈನಾಮಿಕ್ ಫ್ರೇಮ್ ರೇಟ್ ನಿರ್ವಹಣೆ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ TUV ರೈನ್‌ಲ್ಯಾಂಡ್ ಪ್ರಮಾಣೀಕರಣದೊಂದಿಗೆ ಬಂದಿರುವ ಈ ಡಿಸ್‌ಪ್ಲೇಯು ಕಡಿಮೆ ನೀಲಿ ಬೆಳಕು ಮತ್ತು ಫ್ಲಿಕರ್-ಮುಕ್ತ ದೃಶ್ಯಗಳನ್ನು ಒದಗಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ನಯವಾದ ಮತ್ತು ಕನಿಷ್ಠ ವಿನ್ಯಾಸ, ಗಟ್ಟಿಮುಟ್ಟಾದ ಹೊಂದಾಣಿಕೆಯ ಲೋಹದ ಸ್ಟ್ಯಾಂಡ್ ಅನ್ನು ಕೂಡ ಹೊಂದಿದೆ. ಇದಲ್ಲದೆ ಇನ್‌ಬಿಲ್ಟ್‌ ಕೇಬಲ್ ಮ್ಯಾನೇಜ್‌ ಫೀಚರ್ಸ್‌, ಟೈಪ್-ಸಿ ಪೋರ್ಟ್ ಸಂಪರ್ಕದಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. , -5 ಡಿಗ್ರಿ ಯಿಂದ 15 ಡಿಗ್ರಿ ವರೆಗೂ ಅಗತ್ಯಕ್ಕೆ ಅನುಗುಣವಾಗಿ ಹೊಂದಿಸಿಕೊಳ್ಳಬಹುದಾಗದ ಆಯ್ಕೆ ಇದ್ದು, ಗೇಮಿಂಗ್ ಪ್ರಿಯರಿಗೆ ಹೇಳಿಮಾಡಿಸಿದಂತಿದೆ. ಹಾಗೂ ಅಂತರ್ನಿರ್ಮಿತ ಕೇಬಲ್ ನಿರ್ವಹಣಾ ವೈಶಿಷ್ಟ್ಯವು ಪ್ರೀಮಿಯಂ ಅನುಭವವನ್ನು ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ.

OnePlus.in, Flipkart, Amazon, OnePlus ಎಕ್ಸ್‌ಪೀರಿಯೆನ್ಸ್ ಸ್ಟೋರ್‌ ಮತ್ತು OnePlus ಸ್ಟೋರ್ ಅಪ್ಲಿಕೇಶನ್‌ ಪ್ಲಾಟ್‌ಫಾರ್ಮ್‌ಗಳಲ್ಲಿ OnePlus Monitor E24 ಮಾನಿಟರ್ ಲಭ್ಯವಿದೆ.

OnePlus Monitor X27 ಮಾನಿಟರ್ ಖರೀದಿಸಲು ಬಯಸಿದರೆ, ಇದು 27 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಮಾನಿಟರ್‌ 165Hz ರಿಫ್ರೆಶ್ ರೇಟ್‌ ಬೆಂಬಲಿಸಲಿದೆ. ಇದು ವೇಗವಾದ 1ms ಪ್ರೊಸೆಸರ್‌ ಟೈಂ ನೀಡಲಿದೆ. ಇದು ವೃತ್ತಿಪರ-ಮಟ್ಟದ ಗೇಮಿಂಗ್ ಅನುಭವವನ್ನು ನೀಡಲಿದೆ. ಇದಕ್ಕಾಗಿ AMD ಫ್ರೀಸಿಂಕ್ ಪ್ರೀಮಿಯಂ, 2K QHD ವಿಶ್ಯುಯಲ್‌ ರೆಸಲ್ಯೂಶನ್ ಅನ್ನು ಒಳಗೊಂಡಿದೆ. ಅಲ್ಲದೆ, ಮಾನಿಟರ್‌ ಸ್ಟ್ಯಾಂಡರ್ಡ್ ಮೋಡ್, ಮೂವೀ ಮೋಡ್, ಪಿಕ್ಚರ್ ಮೋಡ್, ವೆಬ್ ಮೋಡ್ ಮತ್ತು ಗೇಮ್ ಮೋಡ್ ಸೇರಿದಂತೆ ಐದು ವಿಭಿನ್ನ ಮೋಡ್‌ಗಳೊಂದಿಗೆ ಬರುತ್ತದೆ. 27,999 ರೂ. ಬೆಲೆಯ ಮಾನಿಟರ್ (Monitor) ಅನ್ನು ಸಹ ಶೀಘ್ರದಲ್ಲೇ ಖರೀದಿಸುವ ಅವಕಾಶ ದೊರೆಯಲಿದೆ. ಆದರೆ, ಈ ಸಾಧನ ಮಾರಾಟದ ದಿನಾಂಕ ಯಾವುದು ಎಂಬ ಬಗ್ಗೆ ಅಧಿಕೃತ ಮಾಹಿತಿ ದೊರೆತಿಲ್ಲ.

Leave A Reply

Your email address will not be published.