Mangalore : ಮಂಗಳೂರಿನ ಸಮುದ್ರ ತೀರದ ನಿವಾಸಿಗಳಿಗೆ ಎಚ್ಚರಿಕೆಯ ಸಂದೇಶ!

Share the Article

ಹವಾಮಾನದಲ್ಲಿ( weather)ಬದಲಾವಣೆ ಕಂಡುಬರುವುದು ಸಹಜ. ಅದೇ ರೀತಿ, ಕರಾವಳಿ, ಕೇರಳ ಸೇರಿದಂತೆ ಕಡಲ ತೀರದ(coastal areas) ಜನತೆಗೆ ಬಹು ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ. ಹೌದು!! ಕರ್ನಾಟಕ, ಕೇರಳ, ಲಕ್ಷದೀಪ, ತಮಿಳುನಾಡು, ಗೋವಾ, ಮಹಾರಾಷ್ಟ್ರ, ಸಮುದ್ರದಲ್ಲಿ ಕಡಲು ಅಬ್ಬರದಿಂದಿರುವ ಸಾಧ್ಯತೆ ದಟ್ಟವಾಗಿದೆ ಎಂದು ಅಧ್ಯಯನ ಸಂಶೋಧನಾ ಕೇಂದ್ರ (ಐನ್ ಸಿಓಐಎಸ್)ಮಾಹಿತಿ ನೀಡಿದೆ.

 

ಇದರ ಜೊತೆಗೆ ಫೆ. 15 ರಿಂದ ಫೆ.16ರ ರಾತ್ರಿ 8.30 ರವರೆಗೆ ಕಡಲಬ್ಬರ ಹೆಚ್ಚಾಗುವ ಕುರಿತು ಕೂಡ( ಕೇಂದ್ರ ಸಮುದ್ರ ಸ್ಥಿತಿ ಗತಿ)ಬಗ್ಗೆ ಎಚ್ಚರಿಕೆ ನೀಡಿದೆ. ಹೀಗಾಗಿ, ಬೆಸ್ತರು ಇಲ್ಲವೇ ಮೀನುಗಾರರು(fishery) ಮತ್ತು ಕಿನಾರೆಯ ಜನರು ಮುನ್ನೆಚ್ಚರಿಕೆಯ ಜೊತೆಗೆ ಜಾಗ್ರತೆ ವಹಿಸಬೇಕು ಎಂದು ಅಧ್ಯಯನ ಸಂಶೋಧನಾ ಕೇಂದ್ರ ಸೂಚನೆ ನೀಡಿ ಎಚ್ಚರಿಕೆ ನೀಡಿದೆ.

 

ಈ ಅವಧಿಯಲ್ಲಿ ಕಡಲಿನಲ್ಲಿ ಭಾರಿ ಗಾತ್ರದ ಅಲೆಗಳು ಉಂಟಾಗುವ ಸಾಧ್ಯತೆ ದಟ್ಟವಾಗಿದ್ದು, ಅಷ್ಟೆ ಅಲ್ಲದೇ, ಕೇರಳ ಕಿನಾರೆಯಲ್ಲಿ ಎರಡು ಮೀಟರ್ ವರೆಗೆ ಮತ್ತು ಕರ್ನಾಟಕ ಕಿನಾರೆಯಲ್ಲಿ 1.8 ಮೀಟರ್ ಎತ್ತರದವರೆಗಿನ ಅಲೆಗಳು ಸೃಷ್ಟಿಯಾಗುವ ಸಂಭವ ಕೂಡ ಇದೆ ಎಂದು ಎಚ್ಚರಿಕೆ ನೀಡಿದೆ. ಈ ರೀತಿಯ ವಿಷಮ ಪರಿಸ್ಥಿತಿಯಲ್ಲಿ, ಕಡಲ ಕೊರೆತ ಮತ್ತು ಸಮುದ್ರ ಅಬ್ಬರದಿಂದ ಅಪಾಯವಾಗುವ ಸಾಧ್ಯತೆ ಹೆಚ್ಚಿದ್ದು, ಹೀಗಾಗಿ, ಸಮುದ್ರ ಕಿನಾರೆಯಲ್ಲಿ ನೆಲೆಸಿರುವ ನಿವಾಸಿಗಳು ಈ ನಿಟ್ಟಿನಲ್ಲಿ ರಕ್ಷಣೆಯ ನಿಟ್ಟಿನಲ್ಲಿ ಕರಾವಳಿಯಿಂದ ತಾತ್ಕಾಲಿಕ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Leave A Reply