Mangalore Ayushmati Womens Clinic : ಮಂಗಳೂರಿನಲ್ಲಿ ಆಯುಷ್ಮತಿ ಮಹಿಳಾ ಕ್ಲಿನಿಕ್‌ ! ಹೆಚ್ಚಿನ ವಿವರ ಇಲ್ಲಿದೆ

ಮಹಿಳೆಯರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಅನೇಕ ಸೇವೆಗಳನ್ನು ಸರ್ಕಾರ ಒದಗಿಸಿದ್ದು ಗೊತ್ತಿರುವ ವಿಚಾರವೇ. ಈ ನಡುವೆ ಮಹಿಳೆಯರಿಗೆ ಮತ್ತೊಂದು ಸಿಹಿಸುದ್ದಿ ಇದ್ದು, ಇನ್ನೂ ಮುಂದೆ ಯಾವುದೇ ಆರೋಗ್ಯ ಸಮಸ್ಯೆ ಬಂದರೂ ಅಲ್ಲಿ ಇಲ್ಲಿ ಎಂದೂ ಓಡಾಡುವ ತಾಪತ್ರಯ ತಪ್ಪಿಸುವ ಸಲುವಾಗಿ ನಗರದ ಆರೋಗ್ಯ ಕೇಂದ್ರಗಳಲ್ಲಿಯೇ ಎಲ್ಲ ಸೇವೆಗಳು ದೊರೆಯುವಂತೆ ಮಾಡುವ ಉದ್ದೇಶದಿಂದ ಆಯುಷ್ಮತಿ ಮಹಿಳಾ ಕ್ಲಿನಿಕ್‌ ಸ್ಥಾಪಿಸಲಾಗಿದೆ.

 

ಸದ್ಯ, ಮಹಿಳೆಯರಿಗೆ ನೆರವಾಗುವ ಸಲುವಾಗಿ ಮಂಗಳೂರಿನ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯುಷ್ಮತಿ ಮಹಿಳಾ ಕ್ಲಿನಿಕ್‌ ಸ್ಥಾಪನೆ ಮಾಡಲಾಗಿದೆ. ಚಿಕ್ಕವರಿಂದ ಹಿಡಿದು ವಯಸ್ಸಾದವರ ವರೆಗೂ ಈ ಕ್ಲಿನಿಕ್‌ನಲ್ಲಿ ಆರೋಗ್ಯ ಸೇವೆ (health services)ಲಭ್ಯವಾಗಲಿದೆ. ಹೀಗಾಗಿ,ಅತೀ ಶೀಘ್ರದಲ್ಲಿ ಆಯುಷ್ಮತಿ ಮಹಿಳಾ ಕ್ಲಿನಿಕ್‌ನಲ್ಲಿ(ayushmati clinic) ವಾರದಲ್ಲಿ ದಿನಕ್ಕೊಂದು ವೈದ್ಯರು(doctors) ಮಹಿಳೆಯರಿಗೆ ನುರಿತ ಸ್ತ್ರಿರೋಗ ತಜ್ಞರು ಮಹಿಳೆಯರ ಆರೋಗ್ಯಕ್ಕೆ ಸಂಬಧ ಪಟ್ಟ ಆರೋಗ್ಯ ಸಲಹೆ, ತಪಾಸಣೆ, ಚಿಕಿತ್ಸೆ ನೀಡಲಿದ್ದಾರೆ. ಗರ್ಭಿಣಿಯರ ನಿಯಮಿತ ಆರೋಗ್ಯ ತಪಾಸಣೆ( regular health checkup)ಪೌಷ್ಟಿಕ ಆಹಾರ ಸೇವನೆ ಮತ್ತು ವೈಯಕ್ತಿಕ ಸ್ವಚ್ಛತೆ ಕುರಿತು ಸಲಹೆ ( health tips)ಉಚಿತ ಔಷಧಗಳೂ ಕ್ಲಿನಿಕ್‌ನಲ್ಲಿ ದೊರೆಯಲಿದೆ.

 

ಮಹಿಳೆಯರು ಹೆಚ್ಚಾಗಿ ಎದುರಿಸುವ ಮುಟ್ಟಿನ ಸಮಸ್ಯೆ, ಮಧುಮೇಹ, ರಕ್ತದೊತ್ತಡ, ಬೊಜ್ಜು, ಸಂಧಿವಾತ ಮೊದಲಾದ ಸಮಸ್ಯೆಗಳಿಗೆ ಚಿಕಿತ್ಸೆಯ ಜೊತೆಗೆ ಮಹಿಳೆಯರಿಗೆ ಸಂಬಂಧಿಸಿದ ಎಲ್ಲಾ ವೈದ್ಯಕೀಯ ಸೇವೆಗಳು ಇನ್ನೂ ಲಭ್ಯವಾಗಲಿದೆ.

 

ಮಂಗಳೂರಿನ ಒಟ್ಟು ನಾಲ್ಕು ಕಡೆಯಲ್ಲಿ ಮಹಿಳಾ ಕ್ಲಿನಿಕ್‌ ಪ್ರಾರಂಭವಾಗಲಿದೆ. ಮಂಗಳೂರಿನ ಬಂದರು, ಪಡೀಲ್‌, ಸುರತ್ಕಲ್‌ ಮತ್ತು ಬಿಜೈನಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಹಿಳಾ ಕ್ಲಿನಿಕ್‌ಗಳು ಪ್ರಾರಂಭವಾಗಲಿದ್ದು, ಪ್ರಸ್ತುತ ಇರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೇ ಒಂದು ವಿಭಾಗವಾಗಿ ಮಹಿಳಾ ಕ್ಲಿನಿಕ್‌ ಆರಂಭಿಸಲು ಇಲಾಖೆಯಿಂದ ಸೂಚನೆ ಬಂದಿದೆ ಎಂದು ತಿಳಿದು ಬಂದಿದೆ.

Leave A Reply

Your email address will not be published.