Scoopy Neo Retro Scooter : ಹೋಂಡಾ ಪರಿಚಯಿಸಿದೆ ಹೊಸ ವಿನ್ಯಾಸದ ಸ್ಕೂಪಿ ಸ್ಕೂಟರ್!
ಮಾರುಕಟ್ಟೆಗೆ ಧೂಳೆಬ್ಬಿಸಲು ಹೊಸ ಹೊಸ ವಾಹನಗಳು ಲಗ್ಗೆ ಇಡುತ್ತಿವೆ. ಗ್ರಾಹಕರನ್ನು ಸೆಳೆಯಲು ಕಂಪನಿಗಳು ವಿಭಿನ್ನ ವಿನ್ಯಾಸದ ವಾಹನಗಳನ್ನು ಬಿಡುಗಡೆ ಮಾಡುತ್ತಿವೆ. ಸದ್ಯ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ (Honda) ತನ್ನ ಹೊಸ ವಿನ್ಯಾಸದ ನಿಯೋ-ರೆಟ್ರೋ ಸ್ಕೂಟರ್ (Neo Retro Scooter) ಅನ್ನು ಭಾರತದಲ್ಲಿ ಪರಿಚಯಿಸಲು ಸಜ್ಜಾಗಿದೆ.
ಕಂಪನಿಯು ಭಾರತದಲ್ಲಿ ಸ್ಕೂಪಿ ಎಂಬ ಹೆಸರಿನಲ್ಲಿ ಪೇಟೆಂಟ್ ಸಲ್ಲಿಸಿದ್ದು, ಕಂಪನಿಯು ಸ್ಕೂಟರ್ ಅನ್ನು 2023ರ ಮಾದರಿಯಾಗಿ ಹೊಸ ವೈಶಿಷ್ಟ್ಯಗಳು ಮತ್ತು ಬಣ್ಣ ಆಯ್ಕೆಗಳೊಂದಿಗೆ ನವೀಕರಿಸಿದೆ.
ಇದರ ವಿನ್ಯಾಸದ ಬಗ್ಗೆ ಹೇಳಬೇಕೆಂದರೆ, ಸ್ಕೂಟರ್ ನಲ್ಲಿ ಟರ್ನ್ ಇಂಡಿಕೇಟರ್ಸ್ ಗಳೊಂದಿಗೆ ಸುತ್ತುವರಿದ ಶೈಲಿಯಲ್ಲಿ ಹೆಡ್ಲೈಟ್ ಜೋಡಣೆ ಇದ್ದು, ಈ ಏಪ್ರನ್ನ ಮೇಲ್ಭಾಗದಲ್ಲಿ ಸ್ಕೂಪಿಯ ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಹೊಂದಿದೆ. ಹಾಗೇ ಈ ಏಪ್ರನ್ನ ಹಿಂದೆ ಸ್ಮಾರ್ಟ್ಫೋನ್ಗಳಿಗಾಗಿ USB ಚಾರ್ಜರ್ ಸೇರಿದಂತೆ ಸ್ಟೋರೇಜ್ ಸ್ಪೇಸ್ ಇದೆ.
ಸ್ಕೂಪಿ ಸ್ಕೂಟರ್ 8 ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದ್ದು, ಈ ಸ್ಕೂಟರ್ ಡ್ಯುಯಲ್-ಟೋನ್ ಶೇಡ್ ಹೊಂದಾದ್ದು, ಹೋಂಡಾ ವಿಭಿನ್ನ ಶೈಲಿಯ ಸೀಟ್, ಫ್ಲೋರ್ಬೋರ್ಡ್, ಏಪ್ರನ್ ಪ್ಲಾಸ್ಟಿಕ್ ಮತ್ತು ಸೈಡ್ ಬಾಡಿ ಪ್ಯಾನೆಲ್ಗಳಲ್ಲಿ ಡಿಕಾಲ್ಗಳನ್ನು ನೀಡುತ್ತದೆ. ಸ್ಕೂಟರ್ ಹಿಂಭಾಗದಲ್ಲಿ ಗ್ರ್ಯಾಬ್ ಹ್ಯಾಂಡಲ್ ಇದ್ದು, ಸೀಟ್ ಬಾಹ್ಯ ಲೈನ್ ಗಳನ್ನು ಹೊಂದಿದೆ. ಸುರಕ್ಷತೆ ದೃಷ್ಟಿಯಲ್ಲಿ, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಗಳನ್ನು ನೀಡಲಾಗಿದೆ. ಈ ಸ್ಕೂಟರ್ 4.5 ಲೀಟರ್ ಫ್ಯೂಯಲ್ ಟ್ಯಾಂಕ್ ನೊಂದಿಗೆ, ಕೇವಲ 95 ಕೆಜಿ ತೂಕ ಇದೆ.
ಅಲ್ಲದೆ, ಈ ಸ್ಕೂಟರ್ ಸ್ಮಾರ್ಟ್ ಕೀಯನ್ನು ಹೊಂದಿದ್ದು, ಸ್ಕೂಪಿ ರೆಟ್ರೊ ಸ್ಕೂಟರ್ ನಲ್ಲಿ 109.5 cc ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ 109.5 cc ಎಂಜಿನ್ 9 bhp ಪವರ್ ಮತ್ತು 9.3 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಈ ಸ್ಕೂಟರ್ ನಲ್ಲಿ ರೌಂಡ್ ORVM ಗಳು ಇದ್ದು, ಇವು ಅದಕ್ಕೆ ರೆಟ್ರೊ ಲುಕ್ ಅನ್ನು ನೀಡುತ್ತದೆ. ಉತ್ತಮ ವೈಶಿಷ್ಟ್ಯ ಹೊಂದಿದ್ದು, ಸದ್ಯ ಇಂಡೋನೇಷ್ಯಾದ ಮಾರುಕಟ್ಟೆಯಲ್ಲಿ ಐದನೇ ತಲೆಮಾರಿನ ಹೋಂಡಾ ಸ್ಕೂಪಿ ಸ್ಕೂಟರ್ ಅನ್ನು ಮಾರಾಟ ಮಾಡುತ್ತಿದೆ. ಹೋಂಡಾ ಕಂಪನಿಯು ಭಾರತದಲ್ಲಿ ಬಿಡುಗಡೆ ಮಾಡುಲು ಯೋಜನೆ ರೂಪಿಸಿದೆ.