Fire-Boltt Quantum : ಸ್ಪೋರ್ಟ್ಸ್ ಪ್ರಿಯರಿಗಾಗಿ ಬಿಡುಗಡೆಗೊಂಡಿದೆ ಅಲ್ಟ್ರ ಸೂಪರ್ ವಾಚ್, ಇದರ ವೈಶಿಷ್ಟ್ಯ ಅನೇಕ!
ಟೆಕ್ನಾಲಜಿ ಮಾರುಕಟ್ಟೆಗಳಲ್ಲಿ ಇತ್ತೀಚೆಗೆ ಭಾರೀ ಮುಂಚೂಣಿಯಲ್ಲಿರುವ ಸಾಧನಗಳೆಂದರೆ ಅದು ಸ್ಮಾರ್ಟ್‌ವಾಚ್ (Smartwatch) ಗಳು. ಅದೇ ರೀತಿ ಮಾರಕಟ್ಟೆಯಲ್ಲಿ ಈ ಸಾಧನಗಳಿಗೆ ಭಾರೀ ಬೇಡಿಕೆಯೂ ಇದೆ. ಇದನ್ನೆಲ್ಲಾ ಗಮನಿಸಿದ ಕೆಲವೊಂದು ಟೆಕ್ ಕಂಪನಿಗಳು ಹೊಸ ವಿನ್ಯಾಸದೊಂದಿಗೆ ಸ್ಮಾರ್ಟ್ವಾಚ್ಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ. ಇದೀಗ ಭಾರತದ ಜನಪ್ರಿಯ ಸ್ಮಾರ್ಟ್‌ವಾಚ್ ಬ್ರ್ಯಾಂಡ್‌ಗಳಲ್ಲಿ ಒಂದಾದ ಫೈರ್ ಬೋಲ್ಟ್ (Fire-Boltt) ವಿನೂತನ ಮಾದರಿಯ ಫೈರ್ ಬೋಲ್ಟ್ ಕ್ವಾಂಟಮ್ (Fire-Boltt Quantum) ಸ್ಮಾರ್ಟ್‌ವಾಚ್ ಅನ್ನು ಪರಿಚಯಿಸಿದೆ. ಇದು ನೀರು, ಧೂಳು ಹಾಗೂ ತುಕ್ಕು ನಿರೋಧ ಗುಣಲಕ್ಷಣಗಳನ್ನು ಹೊಂದಿರುವುದರ ಜೊತೆಗೆ ಬಹು-ಕ್ರೀಡಾ ವಿಧಾನಗಳೊಂದಿಗೆ ಬಂದಿರುವ ಈ ಹೊಸ ಸ್ಮಾರ್ಟ್‌ವಾಚ್ ಸ್ಪೋರ್ಟ್ಸ್ ಪ್ರಿಯರಿಗೆ ಅಚ್ಚು ಮೆಚ್ಚು ಆಗೋದ್ರಲ್ಲಿ ಸಂದೇಹವಿಲ್ಲ. ಹಾಗಾದರೆ, ಈ ಹೊಚ್ಚ ಹೊಸ ‘Fire-Boltt Quantum’ ಸ್ಮಾರ್ಟ್‌ವಾಚ್ ಹೇಗಿದೆ ಮತ್ತು ಲಭ್ಯತೆ ಕುರಿತಂತೆ ಹೆಚ್ಚು ಮಾಹಿತಿ ತಿಳಿಯೋಣ ಬನ್ನಿ.
ಈ ನೂತನ Fire-Boltt Quantum’ ಸ್ಮಾರ್ಟ್‌ವಾಚ್ 1.28 ಇಂಚಿನ HD ಡಿಸ್‌ಪ್ಲೇ ಯ, 240×240 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದ್ದು, ಪ್ರೀಮಿಯಂ ವಿನ್ಯಾಸದಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ SpO2 ಮಾನಿಟರಿಂಗ್, ಡೈನಾಮಿಕ್ ಹಾರ್ಟ್‌ಬೀಟ್ ಟ್ರ್ಯಾಕಿಂಗ್, ಸ್ತ್ರೀ ಆರೋಗ್ಯ ಟ್ರ್ಯಾಕರ್ ಮತ್ತು ಸ್ಲೀಪಿಂಗ್ ಟ್ರ್ಯಾಕ್ ಅನ್ನು ಕೂಡ ಟ್ರ್ಯಾಕ್ ಮಾಡುತ್ತದೆ. ಇನ್ನು ದೈಹಿಕ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಸ್ಪೋರ್ಟ್ಸ್ ಮೋಡ್‌ಗಳನ್ನು ಹೊಂದಿದ್ದು, 50 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್‌ವಾಚ್ ಗೆಸ್ಚರ್ ಕಂಟ್ರೋಲ್ ಬೆಂಬಲವನ್ನು ಸಹ ಹೊಂದಿದ್ದು, ಇದರಿಂದ ಸ್ಮಾರ್ಟ್‌ವಾಚ್ ಬಳಕೆದಾರರು ತಮ್ಮ ಮಣಿಕಟ್ಟನ್ನು ಮೇಲಕ್ಕೆ ಎತ್ತಿದ ತಕ್ಷಣವೇ ಇದರ ಡಿಸ್‌ಪ್ಲೇ ಆನ್ ಆಗಲಿದೆ.
ಬ್ಲೂಟೂತ್ ಕಾಲಿಂಗ್ ಬೆಂಬಲಿಸುವ ಈ ಸ್ಮಾರ್ಟ್‌ಫೋಚ್ ಸ್ಕ್ರೀನ್ ಮೂಲಕ ಫೋನ್ ಕರೆಗಳನ್ನು ಮಾಡಲು, ಸ್ವೀಕರಿಸಲು, ಡಯಲ್ ಮಾಡಿದ ಸಂಖ್ಯೆಗಳನ್ನು ಪ್ರದರ್ಶಿಸುವುದು ಮಾತ್ರವಲ್ಲದೇ ಡಯಲ್ ಮಾಡಿದ ಸಂಖ್ಯೆಗಳನ್ನು ಸೇವ್ ಮಾಡುವ ಆಯ್ಕೆ ಹೊಂದಿದೆ. ಆಂಡ್ರಾಯ್ಡ್ 5.0 ಮತ್ತು ಐಒಎಸ್ 9.0 ಅಥವಾ ಅದಕ್ಕಿಂತ ಹೆಚ್ಚಿನ ಚಾಲನೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳೊಂದಿಗೆ ಹೊಂದಿಕೊಳ್ಳುವ ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ವಿ 5.1 ಬೆಂಬಲ ಪಡೆದಿದೆ. ಇದರೊಂದಿಗೆ ಪ್ರಮುಖ ಫೀಚರ್ಸ್ ಆದ ಗೂಗಲ್ ಅಸಿಸ್ಟೆಂಟ್ (google assistant) ಹಾಗೂ ಸಿರಿ (siri) ಗೆ ಸಹ ಸಪೋರ್ಟ್ ಆಗುತ್ತದೆ.
ಇನ್ನು ಈ ಸ್ಮಾರ್ಟ್‌ವಾಚ್‌ನ ಸುರಕ್ಷತೆಗಾಗಿ, ನೀರು ಮತ್ತು ಧೂಳು ಹಾಗೂ ತುಕ್ಕು ನಿರೋಧ ಗುಣಲಕ್ಷಣಗಳನ್ನು ಹೊಂದಿರುವುದರಿಂದ, IP67 ರೇಟಿಂಗ್ ಅನ್ನು ಪಡೆದಿರುವುದು ಮತ್ತಷ್ಟು ವಿಶೇಷವಾಗಿದೆ. ಇನ್ನುಳಿದಂತೆ, ಮ್ಯೂಸಿಕ್ ಮತ್ತು ರಿಮೋಟ್ ಕ್ಯಾಮೆರಾ ಕಂಟ್ರೋಲ್, ಅಲಾರಾಂ, ಟೈಮರ್ ಮತ್ತು ಹವಾಮಾನ ಮುನ್ಸೂಚನೆ ಒದಗಿಸಲಿದೆ.
Fire-Boltt Quantum ಸ್ಮಾರ್ಟ್‌ವಾಚ್ 350mAh ಸಾಮರ್ಥ್ಯದ ಬ್ಯಾಟರಿ (Battery) ಬ್ಯಾಕ್‌ಅಪ್ ಹೊಂದಿದೆ. ಈ ಸ್ಮಾರ್ಟ್‌ವಾಚ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 7 ದಿನಗಳವರೆಗೆ ನಿರಂತರವಾಗಿ ಬಳಕೆ ಮಾಡಬಹುದಾಗಿದೆ. ಹಾಗೂ ಬ್ಲೂಟೂತ್ ಕಾಲ್ ಆಕ್ಟಿವ್ ಮಾಡಿದ್ದರೆ ಎರಡು ದಿನಗಳ ಬ್ಯಾಕ್‌ಅಪ್ ಬ್ಯಾಟರಿ ಇದ್ದು, ಇದು ಎರಡು ಗಂಟೆಗಳ ಅವಧಿಯಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಿಲಿದೆ.
Fire-Boltt Quantum ಸ್ಮಾರ್ಟ್‌ವಾಚ್ ಭಾರತದಲ್ಲಿ 2,999 ರೂಪಾಯಿಗಳಷ್ಟು ಬೆಲೆ ನಿಗದಿ ಮಾಡಲಾಗಿದೆ. ಬಿಡುಗಡೆಯಾಗಿರುವ ಹೊಸ Fire-Boltt Quantum’ ಸ್ಮಾರ್ಟ್‌ವಾಚ್ ಅನ್ನು ಖರೀದಿ ಮಾಡುವ ಪ್ಲ್ಯಾನ್ನಲ್ಲಿದವರು ಅಧಿಕೃತ ಫೈರ್-ಬೋಲ್ಟ್ ಹಾಗೂ ಅಮೆಜಾನ್ (Amazon) ವೆಬ್ಸೈಟ್ ಮೂಲಕ ಖರೀದಿ ಮಾಡಬಹುದಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್ ಕಪ್ಪು, ಹಸಿರು, ನೀಲಿ ಹಾಗೂ ಕಪ್ಪು ಮತ್ತು ಕೆಂಪು ಬಣ್ಣದ ನಾಲ್ಕು ಆಯ್ಕೆಗಳಲ್ಲಿ ಖರೀದಿ ಮಾಡುವ ಅವಕಾಶವಿದೆ.