ಬ್ರೇಕ್ ಬದಲು ಎಕ್ಸಲೇಟರ್ ತುಳಿದ ಚಾಲಕ : ಮನೆಯ ಗೋಡೆ ಪುಡಿಪುಡಿ: Tata Nexon ಕಾರಿನಿಂದ ಚಾಲಕ ಸೇಫ್
ಅನೇಕ ಸಲ ವಾಹನ ಚಾಲನೆ ಮಾಡುವಾಗ ಚಾಲಕರು ಪೆಡಲ್ಲುಗಳ ಮಧ್ಯೆ ಗೊಂದಲಕ್ಕೊಳಗಾಗುತ್ತಾರೆ. ಅದೂ ತುರ್ತು ಸಂದರ್ಭಗಳಲ್ಲಿ ಗಾಬರಿಗೊಂಡು ಒಂದರ ಬದಲು ಇನ್ನೊಂದನ್ನು ಒತ್ತಿ ಅನಾಹುತವನ್ನು ಆಹ್ವಾನಿಸಿಕೊಳ್ಳುತ್ತಾರೆ. ಬ್ರೇಕ್ ನ ಬದಲು ಆಕ್ಸಿಲರೇಟರ್ ತುಳಿದರಂತೂ ಆಗುವ ಅನಾಹುತದ ಅಂದಾಜು ಮಾಡಲೂ ಕಷ್ಟ. ಇಂತದ್ದೇ ಒಂದು ಅವಘಡ ನಡೆದಿದ್ದು ವರದಿಯಾಗಿದೆ.
ವ್ಯಕ್ತಿಯೊಬ್ಬರು ಕಾರು ಚಾಲನೆ ವೇಳೆ ಗಲಿಬಿಲಿಗೊಂಡು ಬ್ರೇಕ್ ಬದಲಿಗೆ ಎಕ್ಸಲೇಟರ್ ತುಳಿದು ಕಾರನ್ನು ದುರ್ಘಟನೆಗೆ ಈಡುಮಾಡಿದ್ದಾರೆ. ಇತ್ತೀಚೆಗೆ ಇದೇ ರೀತಿ ಬ್ರೇಕ್ ಬದಲು ಎಕ್ಸಲೇಟರ್ ಪೆಡಲ್ ತುಳಿದು ಮನೆಯ ಗೋಡೆ ಪುಡಿಪುಡಿ ಮಾಡಿದ್ದಾರೆ.
ಆ ವ್ಯಕ್ತಿಯು ತನ್ನ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಎಸ್‍ಯುವಿ ಕಾರನ್ನು ರಿವರ್ಸ್ ತೆಗೆಯುವಾಗ ಬ್ರೇಕ್ ಬದಲಿಗೆ ಎಕ್ಸಲೇಟರ್ ಅದುಮಿದ್ದಾರೆ. ಇದರಿಂದ ಕಾರು ಏಕಾಏಕಿ ಹಿಮ್ಮುಖವಾಗಿ ನುಗ್ಗಿದೆ. ಒಂದೇ ಸಮನೆ ವೇಗವಾಗಿ ರಿವರ್ಸ್ ಚಲಿಸಿರುವುದರಿಂದ ಕಾರು ಮನೆಯ ಗೋಡೆ ಮತ್ತು ಗೇಟ್ ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಾಶತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಡಿಕ್ಕಿ ಹೊಡೆದ ಟಾಟಾ ನೆಕ್ಸಾನ್ ಕಾರಿನ ಚಾಲಕ ಕೂಡ ಸೇಫ್ ಆಗಿದ್ದಾರೆ. ಟಾಟಾ ನೆಕ್ಸಾನ್ ನ ಆ ಎಲೆಕ್ಟ್ರಿಕ್ ಕಾರಿಗೆ ಸಣ್ಣ ಪ್ರಮಾಣದ ಹಾನಿಗಳಾಗಿದೆ. ಈ ಘಟನೆಯ ವಿಡಿಯೋವನ್ನು Nikhil rana ಎನ್ನುವವರ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ಕಾರು ರಿವರ್ಸ್ ತೆಗೆಯುವಾಗ ಪಕ್ಕದಲ್ಲಿ ಮನೆ ಮತ್ತು ಕಾಂಪೌಂಡ್ ಗೋಡೆ ಇದ್ದದ್ದು ಅನುಕೂಲಕರವಾಗಿದೆ. ಬೇರೆಲ್ಲೂ ಕಡಿದಾದ ರಸ್ತೆ ಪ್ರದೇಶಗಳಲ್ಲಿ ವಾಹನ ಏಕಾಏಕಿ ಹಿಮ್ಮುಖವಾಗಿ ಚಲಿಸಿದರೆ ದೊಡ್ಡ ಪ್ರಮಾಣದಲ್ಲಿ ಅನಾಹುತ ಸಂಭವಿಸುತ್ತಿತ್ತು.
ಜಗತ್ತಿಗೆ ಗೊತ್ತಿರುವಂತೆ, ಟಾಟಾ ಕಾರುಗಳು ಗರಿಷ್ಠ ಪ್ರಮಾಣದ ಸುರಕ್ಷತೆಯಲ್ಲಿ ಜನಪ್ರಿಯತೆಗಳಿಸಿದೆ. ದಿನೇ ದಿನೇ ಟಾಟಾ ಕಾರುಗಳು ತನ್ನ ಸುರಕ್ಷತಾ ಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಈಗ ಅವಘಡ ಸಂಭವಿಸಿದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಕೂಡಾ ಅತ್ಯುತ್ತಮ ಸುರಕ್ಷತೆಯಿಂದ ಕೂಡಿದೆ. ಎಲೆಕ್ಟ್ರಿಕ್ ಕಾರುಗಳು ಟಾರ್ಕ್ ತುಂಬಾ ಹೆಚ್ಚಾದ ಕಾರಣ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು. ಪೂರ್ಣ ಪ್ರಮಾಣದ ಟಾರ್ಕ್, ಸೊನ್ನೆ rpm ನಿಂದ ಲಭ್ಯವಿರುತ್ತದೆ ಎಂಬ ಅಂಶವು ಹೊಸ ಡ್ರೈವರ್‌ಗಳಿಗೆ ತಿಳಿಯದೆ ಇದ್ದರೆ ಕಾರುಗಳನ್ನು ನಿಯಂತ್ರಿಸಲು ತುಂಬಾ ಕಷ್ಟ ಆಗುತ್ತದೆ. ಅನೇಕ ಎಲೆಕ್ಟ್ರಿಕ್ ವಾಹನ ಮಾಲೀಕರು ಹಣ ಉಳಿತಾಯಕ್ಕೆ ಮಾತ್ರ ಟಾಟಾ ದಂತಹ ಗಾಡಿ ಖರೀದಿಸುತ್ತಾರೆ. ವಾಹನದ ವರ್ಷನ್, ವೆರಿಯಂಟ್ ಬದಲಾದಂತೆ ಗಾಡಿಯ ವರ್ತನೆ ಕೂಡಾ ಬದಲಾಗುತ್ತದೆ. ಅದರಲ್ಲೂ ಎಲೆಕ್ಟ್ರಿಕ್ ವಾಹನಗಳು ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳಿಗಿಂತ ವಿಭಿನ್ನವಾಗಿದೆ ಎಂಬ ಅಂಶ ಗಮನದಲ್ಲಿಟ್ಟುಕೊಂಡು ಗಾಡಿ ಓಡಿಸಬೇಕಾಗುತ್ತದೆ. ಇಲ್ಲದೆ ಹೋದರೆ ಇಂತಹಾ ತೊಂದರೆಗಳು ಸಾಮಾನ್ಯ.