Maruti Suzuki ciaz Launch : ಅಬ್ಬಾ ಭರ್ಜರಿ ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮಾರುತಿ ಸುಜುಕಿ ಸಿಯಾಜ್!
ಭಾರತದಲ್ಲಿ ವಾಹನಗಳ ಮಾರುಕಟ್ಟೆಯು ವಿಸ್ತಾರವಾಗಿ ಬೆಳೆದಿದೆ. ವಾಹನ ತಯಾರಕ ಕಂಪನಿಗಳು ಒಂದಲ್ಲಾ ಒಂದು ಹೊಸ ಫೀಚರನ್ನೊಳಗೊಂಡ ಕಾರುಗಳನ್ನು ಪರಿಚಯಿಸುತ್ತಲೇ ಇದೆ. ಸದ್ಯ, ಪ್ರಯಾಣಿಕರ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿಯ ಕಾರುಗಳು, ಕೈಗೆಟುಕುವ ಬೆಲೆ ಹಾಗೂ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಗ್ರಾಹಕರು ಬಿಡುವಿಲ್ಲದೆ ಖರೀದಿಸುತ್ತಿದ್ದಾರೆ. ಇದೀಗ, ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯ ಬಹುನಿರೀಕ್ಷಿತ ‘ಸಿಯಾಜ್’ ಸೆಡಾನ್ ಡ್ಯುಯಲ್ ಟೋನ್ ಲಗ್ಗೆಯಿಡಲು ತಯಾರಾಗಿ ನಿಂತಿದ್ದು, ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರ ಮನಸೆಳೆಯಲು ಮಾರುಕಟ್ಟೆಗೆ ಬಂದಿದೆ. ಇದರ ಅದ್ಭುತ ಡಿಸೈನ್, ಭರಪೂರಿತ ಫೀಚರ್, ಬೆಲೆ ಈ ಎಲ್ಲಾ ಮಾಹಿತಿ ಇಲ್ಲಿದೆ.
ನೂತನ ಮಾರುತಿ ಸುಜುಕಿ ಸಿಯಾಜ್’ನ ಸುತ್ತಳತೆಯ ಬಗ್ಗೆ ಹೇಳುವುದಾದರೆ, ಇದು 4,490 ಎಂಎಂ ಉದ್ದ, 1,730 ಎಂಎಂ ಅಗಲ, 1,480 ಎಂಎಂ ಎತ್ತರ ಹಾಗೂ 2,650 ಎಂಎಂ ವೀಲ್ಬೇಸ್ ಹೊಂದಿದೆ. ಇದರ ಇಂಜಿನ್ ಕಾರ್ಯಕ್ಷಮತೆಯನ್ನು ತಿಳಿಯುವುದಾದರೆ, ಇದು 1.5-ಲೀಟರ್ ಫೋರ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. 6,000 rpm 104.6 PS ಗರಿಷ್ಠ ಪವರ್ ಹಾಗೂ 4,400 rpmನಲ್ಲಿ 138 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯಲ್ಲಿ 20.65 kmpl ಮೈಲೇಜ್ ನೀಡಲಿದ್ದು, ಆಟೋಮೆಟಿಕ್ ಟ್ರಾನ್ಸ್ಮಿಷನ್ ಆಯ್ಕೆಯಲ್ಲಿ 20.04 kmpl ಇಂಧನ ದಕ್ಷತೆಯನ್ನು ಪಡೆದಿದೆ.
ಈ ಕಾರು ಮೂರು ಡ್ಯುಯಲ್ ಟೋನ್ ಕಲರ್ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ಅವುಗಳೆಂದರೆ, ಪರ್ಲ್ ಮೆಟಾಲಿಕ್ ಒಪ್ಯುಲೆಂಟ್ ರೆಡ್ ಜೊತೆಗೆ ಬ್ಲಾಕ್ ರೂಫ್, ಪರ್ಲ್ ಮೆಟಾಲಿಕ್ ಗ್ರ್ಯಾಂಡಿಯರ್ ಗ್ರೇ ಜೊತೆಗೆ ಬ್ಲಾಕ್ ರೂಫ್ ಹಾಗೂ ಡಿಗ್ನಿಟಿ ಬ್ರೌನ್ ಜೊತೆಗೆ ಬ್ಲಾಕ್ ರೂಫ್. ಸಿಯಾಜ್ ಮನಮೋಹಕ ಕಲರ್ ಆಯ್ಕೆಯ ಜೊತೆಗೆ, ಸಾಕಷ್ಟು ನೂತನ ಸುರಕ್ಷತಾ ವೈಶಿಷ್ಟ್ಯಗಳಾದ ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಹಿಲ್ ಹೋಲ್ಡ್ ಅಸಿಸ್ಟ್, ಎರಡು ಏರ್ಬ್ಯಾಗ್ಸ್, ಚೈಲ್ಡ್ ಸೀಟ್ ಆಂಕಾರೇಜ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್ಸ್ ನಿಂದ ಕೂಡಿದೆ.
ಇನ್ನು ಇದರ ಟೆಕ್ನಾಲಜಿ ಫೀಚರ್ ಕಡೆ ಕಣ್ಣು ಹಾಯಿಸಿದಾಗ, ನಮಗೆ 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಆಟೋಮೆಟಿಕ್ ಎಲ್ಇಡಿ ಹೆಡ್ಲೈಟ್ಸ್, ಪುಶ್ ಬಟನ್ ಸ್ಟಾರ್ಟ್, ಕೀಲೆಸ್ ಎಂಟ್ರಿ, ಕ್ರೂಸ್ ಕಂಟ್ರೋಲ್ ಹಾಗೂ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹತ್ತು ಹಲವು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ. ತನ್ನ ಸ್ಮಾರ್ಟ್ ಲುಕ್, ಡಿಸೈನ್ ಜೊತೆಗೆ ಆಕರ್ಷಕ ಫೀಚರ್ ನಿಂದಾಗಿ ಗ್ರಾಹಕರ ಮನಸ್ಸನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ.
ಈ ಹೊಚ್ಚ ಹೊಸ ಸಿಯಾಜ್ ಟಾಪ್ ಎಂಡ್ ಮ್ಯಾನುವಲ್ ಆಲ್ಫಾ ವೇರಿಯಂಟ್ ನ ಬೆಲೆಯು ರೂ.11.15 ಲಕ್ಷ. ಹಾಗೂ ಆಟೋಮೆಟಿಕ್ ವೇರಿಯಂಟ್ ರೂ.12.35 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗಲಿದೆ. ಆಸಕ್ತ ಗ್ರಾಹಕರು, ಸಮೀಪದ ನೆಕ್ಸಾ (Nexa) ಶೋರೂಂಗೆ ಭೇಟಿ ನೀಡುವ ಮೂಲಕ ಖರೀದಿ ಮಾಡಬಹುದು.
2014ರಲ್ಲಿ ಭಾರತದ ಮಾರುಕಟ್ಟೆಗೆ ಆಗಮಿಸಿದ ಮಾರುತಿ ಸುಜುಕಿಯ ಸಿಯಾಜ್ ಸೆಡಾನ್, ಫೋಕ್ಸ್ವ್ಯಾಗನ್ ವರ್ಟಸ್, ಸ್ಕೋಡಾ ಸ್ಲಾವಿಯಾ, ಹ್ಯುಂಡೈ ವೆರ್ನಾ ಹಾಗೂ ಹೋಂಡಾ ಸಿಟಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ. ತನ್ನೊಳಗೆ ಸಾಕಷ್ಟು ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ತುಂಬಿಕೊಂಡು ಈ ಕಾರು ಗ್ರಾಹಕರ ಮನೆಗೆ ಬರಲಿದೆ. ಬೆಲೆಯು ಕೂಡ ಕೈಗೆಟುಕುವಂತಿದ್ದು, ಅತ್ಯಾಧುನಿಕ ವಿಶೇಷತೆಗಳಿವೆ. ಮಾರಾಟ ಆರಂಭವಾದ ಮೇಲೆ ಸಿಯಾಜ್ ಯಾವ ರೀತಿಯಾಗಿ ಜನರಲ್ಲಿ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.