ಗಾಂಜಾ ಸೇವಿಸಿದ್ರೆ ತಿಂಗಳಿಗೆ ಸಿಗತ್ತೆ 2 ಲಕ್ಷ ಸಂಬಳ : ಕಂಪನಿಯ ವಿಚಿತ್ರ ಆಫರ್ ಕೇಳಿ ಮುಗಿಬಿದ್ದು ಅರ್ಜಿ ಹಾಕಿದ ಜನ
ಕಷ್ಟಪಟ್ಟು ನಡು ಬಗ್ಗಿಸಿ ದುಡಿದವನಿಗೆ ಸರಿಯಾದ ಸಂಬಳ ಭತ್ಯೆ ಸಿಗದ ಕಾಲವಿದು. ಸದಾ ಮರುಗುವ ಹೊಟ್ಟೆಗಾಗಿ ಮತ್ತು ಹೊಟ್ಟೆ ತುಂಬಿದ ಮೇಲೆ ಉಂಟಾಗುವ ಹಲವಾರು ಆಸೆಗಳಿಗಾಗಿ ಜನ ಒಂದಿಲ್ಲೊಂದು ಉದ್ಯೋಗದ ಹುಡುಕಾಟಕ್ಕೆ ಹೋಗ್ತಾರೆ. ಆದ್ರೂ ಸರಿಯಾದ ಉದ್ಯೋಗ ಸಿಗದು, ಸಿಕ್ರೂ ಸ್ಯಾಲರಿ ಕಮ್ಮಿ ಮತ್ತು ತಿಂಗಳ ಕೊನೆಗೆ ಸಾಲ ರೀ !
ಹೀಗಿರುವಾಗ ಅಲ್ಲಿ ದೊಡ್ಡ ಕಂಪನಿಯೊಂದು ಹೊಸ ಜಾಬ್ ಹುಟ್ಟುಹಾಕಿದೆ. ಅಮೆರಿಕದ ಆ ಕಂಪನಿ ಮರಿಜುವಾನಾ ಅಂದರೆ ಸಾಮನ್ಯವಾಗಿ ಭಾರತದಲ್ಲಿ ಕರೆಯುವ ಗಾಂಜಾ (ಗಾಂಜಾದ ವೈಜ್ಞಾನಿಕ ಹೆಸರು) ಸೇವಿಸುವವರಿಗೆ ತಿಂಗಳಿಗೆ ಎರಡು ಲಕ್ಷ ರೂ. ವೇತನ ನೀಡುವುದಾಗಿ ಘೋಷಿಸಿದೆ. ಬರೋಬ್ಬರಿ ಎರಡು ಲಕ್ಷ ಸಂಬಳದ ಜತೆಗೆ ಮಜಾ ಮಾಡಲು ಗಾಂಜಾ !. ಈ ಜಾಬ್ ಆಫರ್ ನೋಡಿ ಕೇಳಿದ ವಿಲಾಸಿ ಹೊಗೆಕೋರರು ತುಂಡು ಬೀಡಿ ಬಿಸಾಕಿ ಜಾಬ್ ಗೆ ಅಪ್ಪ್ಲೈ ಮಾಡಿದ ಸುದ್ದಿ ಬಂದಿದೆ. ಇದೀಗಾಗಲೇ, 3000 ಜನ ಜಾಬ್
ಅಮೆರಿಕನ್ ಮರಿಜುವಾನಾ ಎಂಬ ಆನ್’ಲೈನ್ ಸಂಶೋಧನಾ ಸಂಸ್ಥೆ ಮರಿಜುವಾನಾ ಹಾಗೂ ಅದರ ಉಪ ಉತ್ಪನ್ನಗಳ ಸೇವನೆಗೆಂದೇ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿದೆ.
ಸಂಶೋಧನಾ ಕ್ರಮದ ಭಾಗವಾಗಿ ಮರಿಜುವಾನಾ ಮತ್ತು ಅದರ ಉಪ ಉತ್ಪನ್ನಗಳನ್ನು ಸೇವಿಸಿ ಅದರಿಂದಾಗುವ ಪರಿಣಾಮಗಳ ಕುರಿತು ವಿವರಸುವುದೇ ಆಯ್ಕೆಯಾದ ಉದ್ಯೋಗಿಯ ಕೆಲಸ. ಈ ವಿಚಿತ್ರ ಕೆಲಸಕ್ಕಾಗಿ ಅಮೆರಿಕನ್ ಮರಿಜುವಾನಾ ತಿಂಗಳಿಗೆ ಬರೋಬ್ಬರಿ 3,000 ಡಾಲರ್ (2,15,000 ರೂ.) ನೀಡುವುದಾಗಿ ಘೋಷಿಸಿದೆ. ಗಾಂಜಾ, ವೇಪ್ಸ್, ಎಡಿಬ್ಲಸ್ ಹಾಗೂ ಸಿಬಿಡಿ ಸೇವೆನೆ ಮಾಡಿ ಅದರ ಪರಿಣಾಮಗಳ ಕುರಿತು ವಿವರಣೆ ನೀಡಬೇಕು ಎಂದು ಕಂಪನಿ ತಿಳಿಸಿದೆ.
ಕೆಲಸಕ್ಕೆ ಅರ್ಹತೆ ಏನು ಎಂದು ಕೇಳಿದರೆ, ಆಕಾಂಕ್ಷಿ ಗಾಂಜಾ ಸೇವನೆ ಕಾನೂನು ಬದ್ಧವಾಗಿರುವ ಅಮೆರಿಕ ಹಾಗೂ ಕೆನಾಡಾದ ಪ್ರದೇಶದ ನಿವಾಸಿಯಾಗಿರಬೇಕು. ಮರಿಜುವಾನಾ ಹಾಗೂ ಅದರ ಉಪ ಉತ್ಪನ್ನಗಳನ್ನು ಸೇವಿಸಿ ಅದರ ಪರಿಣಾಮಗಳ ಕುರಿತು ನೈಜ ವಿವರಣೆ ನೀಡಬೇಕು. ಆ ಕಂಪನಿ ಈ ಪ್ರಕಟಣೆ ಹೊರಡಿಸಿದ ಗಂಟೆಗಳಲ್ಲೇ ಸುಮಾರು 3,000 ಅಪ್ಲಿಕೇಶನ್ ಬಂದಿದ್ದು, ಸಂದರ್ಶನದ ಬಳಿಕ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಅಲ್ಲಿನ ಮ್ಯಾಗಜೀನ್ ಪತ್ರಿಕೆಯ ಪ್ರಧಾನ ಸಂಪಾದಕ ಡ್ವೈಟ್ ಕೆ ಬ್ಲೇಕ್ ಹೇಳಿದ್ದಾರೆ.