Aadhaar PAN Link : ಮಂದಿನ ತಿಂಗಳು ಈ ಕೆಲಸ ಮಾಡದಿದ್ದರೆ ನಿಮಗೆ ರೂ.10,000 ದಂಡ ಗ್ಯಾರಂಟಿ!
ಪ್ರತಿಯೊಂದು ಹಣಕಾಸಿನ ಕೆಲಸಕ್ಕೂ ನಮಗೆ ಪಾನ್ ಕಾರ್ಡ್ ಬೇಕೇ ಬೇಕು ಪಾನ್ ಕಾರ್ಡ್ ಇಲ್ಲದೆ ನಮಗೆ ಯಾವ ಹಣಕಾಸಿನ ಕೆಲಸವೂ ಸುಗಮವಾಗಿ ಸಾಗುವುದಿಲ್ಲ. ಸದ್ಯ ಪ್ಯಾನ್ ಕಾರ್ಡ್ ಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ನೀಡಿರುವ ಎಚ್ಚರಿಕೆಯ ಪ್ರಕಾರ, ಮಾರ್ಚ್ 31, 2023 ರೊಳಗೆ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡದಿದ್ದರೆ, ಪ್ಯಾನ್ ಅಮಾನ್ಯವಾಗುತ್ತದೆ. ಪ್ಯಾನ್ ಕಾರ್ಡ್ ಬಳಕೆಯನ್ನು ನಿಷೇಧಿಸಲಾಗುವುದು. ಆದರೆ, ಈಗಾಗಲೇ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿದ್ದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
ಇದೀಗ ಬಂದ ಹೊಸ ರೂಲ್ಸ್ ಪ್ರಕಾರ ನಿಮಗೆಲ್ಲ ತಿಳಿದಿರುವಂತೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡನ್ನು ಲಿಂಕ್ ಮಾಡಬೇಕಾಗಿದೆ. ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ಕೊನೆಯ ದಿನಾಂಕ ಹತ್ತಿರ ಬಂದಿದೆ. ಮುಂದಿನ ತಿಂಗಳಿನ ಒಳಗಡೆ ನೀವು ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ ನಿಮ್ಮ ಪಾನ್ ಕಾರ್ಡ್ ಯಾವುದೇ ಕಾರ್ಯನಿರ್ವಹಿಸಲ್ಲ ಇದು ಯಾವುದೇ ಪ್ರಯೋಜನಕ್ಕೆ ಬರಲ್ಲ. ಅಷ್ಟೇ ಅಲ್ಲದೆ ನೀವು ಪಾನ್ ಕಾರ್ಡನ್ನು ಲಿಂಕ್ ಮಾಡದೆ ಇದ್ದಲ್ಲಿ 10,000 ದಂಡವನ್ನು ಪಾವತಿಸಬೇಕಾಗುತ್ತದೆ.
ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡದೆ ಇದ್ದಲ್ಲಿ ಕೊನೆಯ ದಿನಾಂಕದವರೆಗೆ ಕಾಯಬೇಡಿ. ತಕ್ಷಣವೇ ಈ ಕೆಲಸವನ್ನು ಪೂರ್ಣಗೊಳಿಸಿ ಏಕೆಂದರೆ ಒಂದು ಸಲ ಪ್ಯಾನ್ ನಿಷ್ಕ್ರಿಯಗೊಂಡರೆ ನಿಮ್ಮ ಹಣಕಾಸಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ನಿಷ್ಕ್ರಿಯಗೊಂಡ ಪಾನ್ ಕಾರ್ಡ್ ಡಾಕ್ಯೂಮೆಂಟ್ ಅನ್ನು ನೀವು ಬಳಸಿದರೆ ಹತ್ತು ಸಾವಿರ ರೂಪಾಯಿವರೆಗೂ ದಂಡ ವಿಧಿಸಲಾಗುವುದು.
ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಸೆಕ್ಷನ್ 282B ಅಡಿಯಲ್ಲಿ ಈ ದಂಡವನ್ನು ವಿಧಿಸಲಾಗುತ್ತದೆ. ಮ್ಯೂಚುಯಲ್ ಫಂಡ್, ಸ್ಟಾಕ್, ಬ್ಯಾಂಕ್ಇ, ನ್ಕಮ್ ಟ್ಯಾಕ್ಸ್ ಕೆಲಸಗಳನ್ನು ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಅಲ್ಲದೆ ಒಂದು ಸಲ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಹೊಸ ಪಾನ್ ಕಾರ್ಡ್ ಪಡೆಯುವುದು ಸಹ ನಿಷೇಧಿಸಲಾಗಿದೆ.
ಸದ್ಯ ಅಸ್ಸಾಂ ಜಮ್ಮು ಕಾಶ್ಮೀರ ಮತ್ತು ಮೇಘಾಲಯದಲ್ಲಿ ವಾಸಿಸುವ ನಾಗರಿಕರು ಆಧಾರ್ ಮತ್ತು ಫ್ಯಾನ್ ಅನ್ನು ಲಿಂಕ್ ಮಾಡುವ ಅಗತ್ಯವಿಲ್ಲ ಅಲ್ಲದೆ 80 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಇದನ್ನು ಮಾಡುವ ಅಗತ್ಯವಿಲ್ಲ ಅವರಿಗೆ ರಿಯಾಯಿತಿ ನೀಡಲಾಗಿದೆ.
ಸದ್ಯ ನೀವು ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡದೆ ಇದ್ದಲ್ಲಿ ಮನೆಯಲ್ಲಿ ಕೂತುಕೊಂಡು ನಿಮ್ಮ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಬಹುದು. ಹೌದು ಆನ್ಲೈನ್ ಮೂಲಕವೇ ಲಿಂಕ್ ಮಾಡಬಹುದು.
ಒಟ್ಟಿನಲ್ಲಿ ಈ ಲಿಂಕ್ ಪ್ರಕ್ರಿಯೆಯು ಸರ್ಕಾರ ಮತ್ತು ತೆರಿಗೆದಾರರಿಗೆ ಪ್ರಯೋಜನವನ್ನು ನೀಡುತ್ತದೆ. ಅದಲ್ಲದೆ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದರಿಂದ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್‌ಗಳನ್ನು ಹೊಂದಿರುವ ಜನರನ್ನು ಗುರುತಿಸುವುದು ಸುಲಭವಾಗುತ್ತದೆ. ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡಿದರೆ, ಆದಾಯ ತೆರಿಗೆ ರಿಟರ್ನ್ ಪ್ರಕ್ರಿಯೆ ಮತ್ತು ಪರಿಶೀಲನೆ ಸುಲಭವಾಗುತ್ತದೆ ಎಂಬ ಉದ್ದೇಶವನ್ನು ಆದಾಯ ತೆರಿಗೆ ಇಲಾಖೆ ಹೊಂದಿದೆ.