Aadhar Mitra : ಭಾರತದಲ್ಲಿ ಲಾಂಚ್‌ ಆದ ಆಧಾರ್‌ ಮಿತ್ರ ಕುರಿತು ಇಲ್ಲಿ ಉಪಯುಕ್ತ ಮಾಹಿತಿ!

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಉತ್ತಮ ನಿವಾಸಿ ಅನುಭವಕ್ಕಾಗಿ ಹೊಸ AI/ML ಆಧಾರಿತ ಚಾಟ್‌ಬಾಟ್ ‘ಆಧಾರ್ ಮಿತ್ರ’ ಅನ್ನು ಪ್ರಾರಂಭಿಸಿದೆ.
ಆಧಾರ್‌ ಕಾರ್ಡ್‌ಗೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಉತ್ತರ ಸಿಗದೆ ಪರದಾಡುವುದನ್ನು ತಪ್ಪಿಸಲು ಮುಂದಾಗಿದೆ. ಇದಕ್ಕಾಗಿ ಹೊಸ AI ಬ್ಯಾಕಪ್ ಚಾಟ್‌ಬಾಟ್ ‘ಆಧಾರ್‌ ಮಿತ್ರ’ ವನ್ನು ಅನಾವರಣಗೊಳಿಸಿದೆ. ಈ ಹೊಸ ಚಾಟ್‌ಬಾಟ್‌ ನಿಮ್ಮ ಆಧಾರ್‌ ಸಂಬಂಧಿತ ಪ್ರಶ್ನೆಗಳಿಗೆ ಉತ್ತರವನ್ನು ನೀಡಲಿದೆ .

AI/ML-ಆಧಾರಿತ ಚಾಟ್‌ಬಾಟ್ ಆಧಾರ್-ಆಧಾರಿತ ಇದರಲ್ಲಿ ಆಧಾರ್ PVC ಸ್ಟೇಟಸ್‌ ಟ್ರ್ಯಾಕ್‌ ಮಾಡುವುದು, ಕುಂದುಕೊರತೆಗಳನ್ನು ನೋಂದಾಯಿಸುವುದು ಮತ್ತು ಟ್ರ್ಯಾಕ್ ಮಾಡುವುದು ಸೇರಿದಂತೆ ಹಲವು ಕೆಲಸಗಳನ್ನು ಮಾಡಲಿದೆ.

UIDAI ನ ಪರಿಚಯಿಸಿರುವ ಹೊಸ ಚಾಟ್‌ಬಾಟ್ ಅನ್ನು “ಆಧಾರ್ ಮಿತ್ರ,” ಎಂದು ಹೆಸರಿಸಲಾಗಿದ್ದು ಇದನ್ನು ನೀವು UIDAI ಅಧಿಕೃತ ವೆಬ್‌ಸೈಟ್‌ www.uidai.gov.in ಮೂಲಕ ಪ್ರವೇಶಿಸಬಹುದಾಗಿದೆ. ಇನ್ನು UIDAI ವೆಬ್‌ಸೈಟ್‌ನಲ್ಲಿ ನೀವು ಆಧಾರ್‌ ಸಂಬಂಧಿತ ಸಮಸ್ಯೆಗಳು, ಆಧಾರ್‌ ಕೇಂದ್ರದ ಸ್ಥಳದ ಮಾಹಿತಿ, ದಾಖಲಾತಿ/ ಅಪ್ಡೇಟ್‌ ಸ್ಟೇಟಸ್‌ ಪರಿಶೀಲನೆ, ಪಿವಿಸಿ ಕಾರ್ಡ್‌ ಆದೇಶದ ಪರಿಶೀಲನೆ ಬಗ್ಗೆ ಉತ್ತರ ಪಡೆದುಕೊಳ್ಳಲು ಆಧಾರ್‌ ಮಿತ್ರ ಸಹಾಯ ಮಾಡಲಿದೆ.

ಇನ್ನು ಆಧಾರ್ ಚಾಟ್‌ಬಾಟ್ ಆಧಾರ್‌ ಮಿತ್ರ ನಿಮಗೆ ಆಧಾರ್‌ ಸೆಂಟರ್‌ ಅನ್ನು ಪತ್ತೆ ಮಾಡಿಕೊಡಲಿದೆ. ಅಲ್ಲದೆ ಆಧಾರ್ ನೋಂದಣಿ, ಅಪ್ಡೇಟ್‌ ಸ್ಟೇಟಸ್‌, ಪಿವಿಸಿ ಕಾರ್ಡ್‌ ಆರ್ಡರ್‌ ಸ್ಟೇಟಸ್‌ ಟ್ರ್ಯಾಕ್‌ ಮಾಹಿತಿಯನ್ನು ತಿಳಿಸಲಿದೆ. ಜೊತೆಗೆ ಆಧಾರ್‌ ಸೆಂಟರ್‌ನಲ್ಲಿ ನಿಮ್ಮ ಅಪಾಯಿಂಟ್‌ಮೆಂಟ್ ಕಾಯ್ದಿರಿಸುವಂತಹ ಮಾಹಿತಿಯನ್ನು ಕೇಳಲು ಈ ಚಾಟ್‌ಬಾಟ್‌ ಸಹಾಯ ಮಾಡಲಿದೆ.

ಆಧಾರ್ ಮಿತ್ರವನ್ನು ಬಳಸುವ ವಿಧಾನ :
• ಮೊದಲಿಗೆ UIDAIಯ ಅಧಿಕೃತ ವೆಬ್‌ಸೈಟ್‌ www.uidai.gov.in ಗೆ ಹೋಗಿ
• ಇದೀಗ ಮುಖಪುಟದಲ್ಲಿ, ಕೆಳಗಿನ ಬಲ ಮೂಲೆಯಲ್ಲಿ ‘ಆಧಾರ್ ಮಿತ್ರ’ ಬಾಕ್ಸ್ ಮಿನುಗುವುದು ಕಾಣಲಿದೆ
• ನಂತರ ಚಾಟ್‌ಬಾಟ್ ತೆರೆಯುವ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
• ಚಾಟ್‌ಬಾಟ್‌ನಲ್ಲಿ ನಿಮ್ಮ ಪ್ರಶ್ನೆಯನ್ನು ಕೇಳಲು ‘ಪ್ರಾರಂಭಿಸಿ’ ಮೇಲೆ ಟ್ಯಾಪ್ ಮಾಡಿ.
• ಇದೀಗ ಸರ್ಚ್‌ ಬಾಕ್ಸ್‌ನಲ್ಲಿ ನಿಮ್ಮ ಪ್ರಶ್ನೆಯನ್ನು ಕೇಳಬಹುದು
• ಇಲ್ಲವೇ ಮೇಲ್ಭಾಗದಲ್ಲಿ ಲಭ್ಯವಿರುವ ಸೂಚಿಸಲಾದ ಪ್ರಶ್ನೆ ಆಯ್ಕೆಯ ಮೇಲೆ ಕ್ಲಿಕ್ ಮಾಡಬಹುದು.

ಈ ಮೇಲಿನ ಸೂಚನೆಗಳನ್ನು ಅನುಸರಿಸುವ ಮೂಲಕ ಆಧಾರ್‌ ಮಿತ್ರವನ್ನು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ.

ಆಧಾರ್‌ ಮಿತ್ರ ಮೂಲಕ ನಿಮ್ಮ ಆಧಾರ್‌ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ವಿಧಾನ ಇಲ್ಲಿ ತಿಳಿಸಲಾಗಿದೆ:
ಮುಖ್ಯವಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಹೊಸ ಡಿಜಿಟಲ್‌ AI ಬ್ಯಾಕ್‌ಅಪ್‌ ಚಾಟ್‌ಬಾಟ್‌ ಅನ್ನು ಪರಿಚಯಿಸಿರುವುದಾಗಿ ಟ್ವೀಟ್‌ ಮಾಡಿದೆ. ತನ್ನ ಟ್ವೀಟ್‌ನಲ್ಲಿ #ResidentFirst #UIDAI ಯ ಹೊಸ AI/ML ಆಧಾರಿತ ಚಾಟ್ ಬೆಂಬಲ ನಿಮಗೆ ಈಗ ಲಭ್ಯವಿದೆ. ಉತ್ತಮ ನಿವಾಸಿ ಸಂವಹನಕ್ಕಾಗಿ ಇದು ಸಹಾಯ ಮಾಡಲಿದೆ. #AadhaarMitra ಜೊತೆಗೆ, ಭೇಟಿ ನೀಡಿ- https://uidai.gov.in/en/.” ಇದಲ್ಲದೆ ತನ್ನ ಟ್ವೀಟ್‌ನೊಂದಿಗೆ, UIDAI QR ಕೋಡ್ ಅನ್ನು ಒಳಗೊಂಡಿರುವ ಪೋಸ್ಟರ್ ಅನ್ನು ಸಹ ಲಗತ್ತಿಸಿದೆ. ಸದ್ಯ UIDAI ಪರಿಚಯಿಸಿರುವ ಹೊಸ ಆಧಾರ್‌ ಮಿತ್ರ AI ನಲ್ಲಿ ಉತ್ತರ ಪಡೆದುಕೊಳ್ಳಲು UIDAI ಲಗತ್ತಿಸಿರುವ ಕ್ಯೂಆರ್‌ ಕೋಡ್‌ ಅನ್ನು ಸ್ಕ್ಯಾನ್‌ ಮಾಡಬಹುದು ಎನ್ನಲಾಗಿದೆ.

ಈ ಮೇಲಿನ ಕ್ರಮಗಳನ್ನು ಅನುಸರಿಸಿದಲ್ಲಿ ನಿಮ್ಮ ಆಧಾರ್‌ ಸಂಬಂಧಿತ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

Leave A Reply

Your email address will not be published.