ಕೊರೊನಾ ಮಹಾಮಾರಿ ಬೆನ್ನಲ್ಲೇ ಮತ್ತೊಂದು ಸಾಂಕ್ರಾಮಿಕ ರೋಗ ಪತ್ತೆ- WHO ಎಚ್ಚರಿಕೆ
ದೇಶದ ಜನತೆಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ದೇಶಾದ್ಯಂತ ಜನರಲ್ಲಿ ನಡುಕ ಹುಟ್ಟಿಸಿದ ಕೋರೋನಾ ಮಹಾಮಾರಿ ತಗ್ಗಿತು ಎಂದು ನಿಟ್ಟುಸಿರು ಬಿಟ್ಟ ಮಂದಿಗೆ ಇದೀಗ ಮತ್ತೊಂದು ಸಾಂಕ್ರಾಮಿಕ ರೋಗ ಪತ್ತೆಯಾಗಿರುವ ಕುರಿತು WHO ಮಾಹಿತಿ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಈಕ್ವಟೋರಿಯಲ್ ಗಿನಿಯಾದಲ್ಲಿ ಮೊಟ್ಟಮೊದಲ ಬಾರಿಗೆ ಮಾರ್ಬರ್ಗ್ ಕಾಯಿಲೆ ಸೃಷ್ಟಿಯಾಗಿದ್ದು, ಎಬೋಲಾ-ಸಂಬಂಧಿತ ವೈರಸ್ ನಿಂದಾಗಿ ದೇಶದಲ್ಲಿ ಒಂಬತ್ತು ಮಂದಿ ಮೃತಪಟ್ಟಿರುವುದನ್ನು
ವಿಶ್ವ ಆರೋಗ್ಯ ಸಂಸ್ಥೆಯು ಈಕ್ವಟೋರಿಯಲ್ ಗಿನಿಯಾದಲ್ಲಿ ಮೊಟ್ಟಮೊದಲ ಬಾರಿಗೆ ಮಾರ್ಬರ್ಗ್ ಕಾಯಿಲೆ ಸೃಷ್ಟಿಯಾಗಿದ್ದು, ಎಬೋಲಾ-ಸಂಬಂಧಿತ ವೈರಸ್ ನಿಂದಾಗಿ ದೇಶದಲ್ಲಿ ಒಂಬತ್ತು ಮಂದಿ ಮೃತಪಟ್ಟಿರುವುದನ್ನು ದೃಢಪಡಿಸಿದೆ. ಸದ್ಯ, ಮೃತಪಟ್ಟ ಒಂಬತ್ತು ಮಂದಿಗೆ ಜ್ವರ, ಆಯಾಸ, ಅತಿಸಾರ ಮತ್ತು ವಾಂತಿ ಸೇರಿದಂತೆ ರೋಗಲಕ್ಷಣಗಳು ಪತ್ತೆಯಾಗಿದ್ದವು ಎನ್ನಲಾಗಿದೆ. ಇದಲ್ಲದೆ, 16 ಶಂಕಿತ ಪ್ರಕರಣಗಳಿವೆ ಎಂದು ವರ್ಲ್ಡ್ ಹೆಲ್ತ್ ಆರ್ಗನೈಜೇಷನ್ ತಿಳಿಸಿದೆ.
ಮಾರ್ಬರ್ಗ್ ಒಂದು ಹೆಮರಾಜಿಕ್ ಜ್ವರವಾಗಿದ್ದು, ಇದರಿಂದ ದೇಹದ ಅಂಗಗಳ ಮೇಲೆ ಪ್ರಭಾವ ಬೀರುತ್ತದೆ. ಇದಲ್ಲದೆ ರಕ್ತಸ್ರಾವ ಕೂಡ ಉಂಟಾಗುವ ಸಾಧ್ಯತೆಗಳಿವೆ ಎಂಬುದಾಗಿ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಮಾಹಿತಿ ನೀಡಿದೆ. ಇದು ಝೂನೋಟಿಕ್ ವೈರಸ್ ಆಗಿದ್ದು, ಆರು ಜಾತಿಯ ಎಬೋಲಾ ವೈರಸ್ ಜೊತೆಗೆ ಫಿಲೋವೈರಸ್ ಕುಟುಂಬವನ್ನು ಒಳಗೊಂಡಿದೆ ಎನ್ನಲಾಗಿದೆ.
ಎಬೋಲಾದ ರೀತಿಯಲ್ಲೇ, ಮಾರ್ಬರ್ಗ್ ವೈರಸ್ ಬಾವಲಿಗಳಲ್ಲಿ ಹುಟ್ಟುತ್ತದೆ ಎನ್ನಲಾಗಿದ್ದು, ಇದರಿಂದ ಸೋಂಕಿತರಾದ ಜನರು ಇಲ್ಲವೇ ಮೇಲ್ಮೈಗಳ ದೈಹಿಕ ದ್ರವಗಳೊಂದಿಗೆ ನಿಕಟ ಸಂಪರ್ಕ ಹೊಂದುವುದರಿಂದ ಈ ರೋಗವು ಉಳಿದವರಿಗೆ ಹರಡುತ್ತದೆ. ಈಕ್ವಟೋರಿಯಲ್ ಗಿನಿಯಾದ ಮಾದರಿಗಳನ್ನು ಕಳೆದವಾರ ಸೆನೆಗಲ್‌ನ ಲ್ಯಾಬ್‌ಗೆ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ಈ ಬಳಿಕ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ರೋಗವನ್ನು ದೃಢಪಡಿಸಿದೆ. ಸದ್ಯ ಈಕ್ವಟೋರಿಯಲ್ ಗಿನಿಯಾ ಸಾಂಕ್ರಮಿಕ ರೋಗವನ್ನು ನಿಯಂತ್ರಿಸಲು ಅಧಿಕಾರಿಗಳಿಗೆ ನೆರವಾಗುವ ನಿಟ್ಟಿನಲ್ಲಿ ವೈದ್ಯಕೀಯ ತಜ್ಞರನ್ನು ಕಳುಹಿಸಲಾಗುತ್ತಿದೆ ಎಂದು ತಿಳಿದುಬಂದಿದೆ.