2023 ಎಪ್ರಿಲ್ ನಂತರ ಈ ಟಾಪ್ ಫೆವರೇಟ್ ಕಾರು ಸಿಗಲ್ಲ!!!
ಇತ್ತೀಚೆಗೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಹವಾ ಹೆಚ್ಚಿದೆ. ಅವುಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. ಈ ಮೊದಲು ಬೇಡಿಕೆಯಲ್ಲಿದ್ದ ವಾಹನಗಳೆಲ್ಲಾ ಹಿಂದೆ ಸರಿದಿವೆ. ಸದ್ಯ ಭಾರತದಲ್ಲಿ ಎರಡನೇ ಹಂತದ ಭಾರತ್ ಸ್ಟೇಜ್ VI ಮಾಲಿನ್ಯ ನಿಯಮಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ. ಆರ್ಡಿಇ ನಿಯಮಗಳ ಜೊತೆಗೆ ಹಲವು ವಾಹನಗಳು ಭಾರತೀಯ ಮಾರುಕಟ್ಟೆಯಿಂದ ತೆರಳಲಿವೆ. ಹೊಸ ನಿಯಮಗಳ ಜಾರಿಯಿಂದ ಡೀಸೆಲ್ ಕಾರುಗಳ ಸಂಖ್ಯೆ ಇಳಿಕೆಯಾಗಲಿದೆ. ಹಾಗೆಯೇ ಕೆಲವು ಸೂಪರ್ ಕಾರುಗಳು ಕೂಡ 2023 ರ ಏಪ್ರಿಲ್ ಬಳಿಕ ಕಣ್ಮರೆಯಾಗಲಿವೆ. ಅವುಗಳಲ್ಲಿ ಸೆಡಾನ್ಗಳು ಕಾರುಗಳೂ ಇವೆ. ಇವನ್ನು ಸ್ಥಗಿತಗೊಳಿಸುವ ಮೊದಲೇ ಗ್ರಾಹಕರು ಖರೀದಿಸಬಹುದು. ಈ ಕಾರುಗಳ ಬಗೆಗಿನ ಮಾಹಿತಿ ಇಲ್ಲಿದೆ.
ಹೋಂಡಾ ಸಿಟಿ ಪೆಟ್ರೋಲ್ :
ಜಪಾನಿನ ವಾಹನ ತಯಾರಕ ಕಂಪನಿ ಹೋಂಡಾ ಏಪ್ರಿಲ್ನಿಂದ ಸಿಟಿ ಸೆಡಾನ್ನ ನಾಲ್ಕನೇ ತಲೆಮಾರಿನ ಮಾದರಿಯ ಪೆಟ್ರೋಲ್ ರೂಪಾಂತರಗಳನ್ನು ಸ್ಥಗಿತಗೊಳಿಸಲು ಯೋಜನೆ ರೂಪಿಸಿದೆ.
ಈ ಕಾರಿನ ಎಕ್ಸ್ ಶೋ ರೂಂ. ಬೆಲೆ ರೂ. 9.49 ಲಕ್ಷ ಮತ್ತು ರೂ. 9.99 ಲಕ್ಷ ಇದೆ. ಇದು 1.5-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಿದೆ. ಹಾಗೆಯೇ ಈ ಕಾರು ಸುಮಾರು 17.4 kmpl ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ.
ಹೋಂಡಾ ಸಿಟಿ ಡೀಸೆಲ್ :
ಐದನೇ ತಲೆಮಾರಿನ ಹೋಂಡಾ ಸಿಟಿಯ ಡೀಸೆಲ್ ಎಂಜಿನ್ ಆವೃತ್ತಿಗಳು ಕೂಡ ಭಾರತದ ಮಾರುಕಟ್ಟೆಯಿಂದ ಕಣ್ಮರೆ ಆಗಲಿವೆ. ಜಪಾನಿನ ಬ್ರ್ಯಾಂಡ್ 1.5-ಲೀಟರ್ i-DTEC ಡೀಸೆಲ್ ಎಂಜಿನ್ ಅನ್ನು ನಿಲ್ಲಿಸಲಿದ್ದು, ಈ ಕಾರಿನ ಮೈಲೇಜ್ 24.1 ಕಿ.ಮೀ ಆಗಿದೆ. ಈ ಕಾರು V, VX ಮತ್ತು ZX ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ 13.73 ಲಕ್ಷದಿಂದ 15.52 ಲಕ್ಷ ರೂಪಾಯಿ ಇದೆ.
ಸ್ಕೋಡಾ ಆಕ್ಟೇವಿಯಾ :
ಸೆಡಾನ್ಗಳ ರಾಜ ಎಂದೇ ಖ್ಯಾತಿ ಪಡೆದಿದ್ದ ಕಾರು ಇದು, ಸದ್ಯ ಭಾರತದ ಮಾರುಕಟ್ಟೆಗೆ ವಿದಾಯ ಹೇಳಲಿದೆ. ಈ ಕಾರು 2.0-ಲೀಟರ್ TSI ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ಬಾಕ್ಸ್ಗೆ ಜೋಡಿಸುತ್ತದೆ. ಸ್ಟೈಲ್ ಮತ್ತು ಎಲ್ & ಕೆ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಬೆಲೆ ರೂ. 31.70 ಲಕ್ಷದಿಂದ ರೂ. 35.41 ಲಕ್ಷ ಇದೆ.
ಹುಂಡೈ ವೆರ್ನಾ :
ಎಪ್ರಿಲ್ ವೇಳೆ ಹಿಂಪಡೆಯಲಿರುವ ಕಾರುಗಳ ಪೈಕಿ ಇದೂ ಒಂದಾಗಿದೆ. ಇದು ಡೀಸೆಲ್ ಎಂಜಿನ್ನೊಂದಿಗೆ ಸ್ವಯಂಚಾಲಿತ ಗೇರ್ಬಾಕ್ಸ್ನ ಜೊತೆಗೆ ಬರುವ ಏಕೈಕ ಸೆಡಾನ್ ಮಾದರಿಯಾಗಿದೆ. S+, SX, SX(AT), SX(O) ಮತ್ತು SX(O)AT ಎಂಬ ಐದು ವೆರ್ನಾ ಡೀಸೆಲ್ ರೂಪಾಂತರಗಳು ಲಭ್ಯವಿದೆ. ಭಾರತದಲ್ಲಿ ಇದರ ಎಕ್ಸ್ ಶೋ ರೂಂ ಬೆಲೆ 11.28 ಲಕ್ಷದಿಂದ 15.73 ಲಕ್ಷದವರೆಗೆ ಇದೆ.
ಸ್ಕೋಡಾ ಸೂಪರ್ಬ್ :
ಇದು ಉತ್ತಮ ಮಾದರಿಯ ಕಾರಾಗಿದ್ದು, ಈ ಪ್ರೀಮಿಯಂ ಸೆಡಾನ್ ಸ್ಪೋರ್ಟ್ಲೈನ್ L&K ಎಂಬ ಎರಡು ರೂಪಾಂತರಗಳನ್ನು ಹೊಂದಿದೆ. ಈ ಸ್ಕೋಡಾ ಕಾರು 2.0-ಲೀಟರ್ TSI ಪೆಟ್ರೋಲ್ ಎಂಜಿನ್ನಿಂದ ನಿಯಂತ್ರಿಸಲ್ಪಡುತ್ತದೆ. ಸ್ಕೋಡಾ ಕಾರಿನ ಬೆಲೆ ರೂ. 39.52 ಲಕ್ಷದಿಂದ 44 ಲಕ್ಷ ರೂಪಾಯಿಗಳವರೆಗೆ ಇದೆ. ಇವುಗಳೆಲ್ಲಾ ಅತ್ಯುತ್ತಮ ಕಾರಾಗಿದ್ದು, ಏಪ್ರಿಲ್ ಬಳಿಕ ಭಾರತದ ಮಾರುಕಟ್ಟೆಗೆ ವಿದಾಯ ಹೇಳಲಿದೆ.