SSC MTS Job 2023 : ಎಸ್ ಎಸ್ ಸಿ ಯಿಂದ 11,409 ಹುದ್ದೆ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ!

ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ ಪಡೆಯುವುದು ಸುಲಭದ ಮಾತಲ್ಲ.  ಪೈಪೋಟಿಯ ನಡುವೆ ನೆಚ್ಚಿನ ಕೆಲ್ಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಾಗೆಂದ ಮಾತ್ರಕ್ಕೆ ಉದ್ಯೋಗದ ವಿಷಯದಲ್ಲಿ ಅನೇಕ ಅವಕಾಶದ ಬಾಗಿಲುಗಳು ತೆರೆದಿದ್ದು ಇವುಗಳ ಕುರಿತಂತೆ ಮಾಹಿತಿ ಎಷ್ಟೋ ಮಂದಿಗೆ ತಿಳಿದಿಲ್ಲ. ವ್ಯಾಸಂಗ ಮುಗಿಯುತ್ತಿದ್ದಂತೆ ತಮ್ಮ ವಿದ್ಯಾರ್ಹತೆ ಹಾಗೂ ತಮಗೆ ಆಸಕ್ತಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಸಹಜ.

ಇತ್ತೀಚೆಗಷ್ಟೆ ಭಾರತ ಸರ್ಕಾರದ ವಿವಿಧ ಸಚಿವಾಲಯಗಳು, ಸಂಸ್ಥೆಗಳು, ಇಲಾಖೆಗಳು, ಕಚೇರಿಗಳಲ್ಲಿ ನೇಮಕ ಮಾಡಲು ಸಿಬ್ಬಂದಿ ನೇಮಕಾತಿ ಆಯೋಗವು 11,409 ಎಂಟಿಎಸ್, ಹವಾಲ್ದಾರ್ ಪೋಸ್ಟ್‌ಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿತ್ತು. ಇದೀಗ, ಸದರಿ ಹುದ್ದೆಗಳಿಗೆ ಆಸಕ್ತರು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ಹುದ್ದೆಯ ವಿವರ, ನೇಮಕಾತಿ ಪ್ರಕ್ರಿಯೆಯ ಜೊತೆಗೆ ವೇತನದ ಬಗ್ಗೆ ಮಾಹಿತಿ ತಿಳಿದಿರುವುದು ಅವಶ್ಯಕ.

ಹುದ್ದೆಗಳ ವಿವರ
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) : 10,880
ಹವಾಲ್ದಾರ್ ಇನ್ ಸಿಬಿಐಸಿ ಮತ್ತು ಸಿಬಿಎನ್ : 529

ಪ್ರಮುಖ ದಿನಾಂಕಗಳು

ಆನ್‌ಲೈನ್‌ ರಿಜಿಸ್ಟ್ರೇಷನ್ ಮಾಡಲು  18-01-2023ಆರಂಭಿಕ ದಿನವಾಗಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಗೆ 19-02-2023 ಕೊನೆ ದಿನವಾಗಿದೆ. ಅದೇ ರೀತಿ, ಆನ್‌ಲೈನ್‌ ರಿಜಿಸ್ಟ್ರೇಷನ್ ಮಾಡಲು 17-02-2023 ಕೊನೆ ದಿನವಾಗಿದ್ದು ಅರ್ಹ ಅಭ್ಯರ್ಥಿಗಳು ಈ ದಿನಾಂಕದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

ಒಂದು ವೇಳೆ, ನೀವು ಆಫ್‌ಲೈನ್‌  ಮೂಲಕ ಅರ್ಜಿ ಸಲ್ಲಿಸುವುದಾದರೆ, ಚಲನ್‌ ಜೆನೆರೇಟ್ ಮಾಡಲು 19-02-2023 ಕೊನೆಯ ದಿನವಾಗಿದೆ.ಅದೇ ರೀತಿ,  20-02-2023 ಆಫ್‌ಲೈನ್‌ ಮೂಲಕ ಶುಲ್ಕ ಪಾವತಿಗೆ ಕೊನೆ ದಿನಾಂಕವಾಗಿದೆ. ಫೆಬ್ರುವರಿ 23 ರಿಂದ 24 ರಂದು ಅಪ್ಲಿಕೇಶನ್‌ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.

ಶೈಕ್ಷಣಿಕ ಅರ್ಹತೆ  ಹಾಗೂ ವಯೋಮಿತಿ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ / 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆ ಪಾಸ್‌ ಆಗಿರಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ  ಕನಿಷ್ಠ  ವಯೋಮಿತಿ 18 ವರ್ಷ ಆಗಿರಬೇಕಾಗುತ್ತದೆ.

ಎಂಟಿಎಸ್ ಮತ್ತು ಹವಾಲ್ದಾರ್ ಇನ್‌ ಸಿಬಿಎನ್ (ಕಂದಾಯ ಇಲಾಖೆ) ಹುದ್ದೆಗಳಿಗೆ ಗರಿಷ್ಠ 25 ವರ್ಷ ಮೀರಿರಬಾರದು.
ಹವಾಲ್ದಾರ್ ಇನ್ ಸಿಬಿಐಸಿ (ಕಂದಾಯ ಇಲಾಖೆ) ಮತ್ತು ಕೆಲವು ಎಂಟಿಎಸ್ ಹುದ್ದೆಗಳಿಗೆ ಗರಿಷ್ಠ 27 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ 100 ರೂ. ಆಗಿದ್ದು, ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ, ಮಹಿಳಾ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ವೇತನ ಶ್ರೇಣಿ : Rs.5200-20200.
ಅರ್ಜಿ ಸಲ್ಲಿಸಲು https://ssc.nic.in/ ಭೇಟಿ ನೀಡಿ ಮಾಹಿತಿ ಪಡೆಯಬಹುದು.

ವಯೋಮಿತಿ ಸಡಿಲಿಕೆ ನಿಯಮಗಳು ಹೀಗಿವೆ:
ಎಸ್‌ಸಿ / ಎಸ್‌ಟಿ ಅಭ್ಯರ್ಥಿ : 5 ವರ್ಷ
ಒಬಿಸಿ ಅಭ್ಯರ್ಥಿ : 3 ವರ್ಷ
ಪಿಡಬ್ಲ್ಯೂಡಿ ಅಭ್ಯರ್ಥಿ (Unreserved) : 10 ವರ್ಷ
Pwd (OBC) : 13 ವರ್ಷ
Pwd (SC/ST) : 15 ವರ್ಷ
ಮಾಜಿ ಸೈನಿಕ (ESM) : 3 ವರ್ಷ

ಜನವರಿ 18 ರಿಂದ ಫೆಬ್ರುವರಿ 17, 2023ರವರೆಗೆ  ಅಭ್ಯರ್ಥಿಗಳಿಗೆ ಪರೀಕ್ಷೆಗೆ ರಿಜಿಸ್ಟ್ರೇಷನ್‌ ಪಡೆಯಲು ಅವಕಾಶ   ಕಲ್ಪಿಸಲಾಗಿದ್ದು,  ಈ ಹುದ್ದೆಗಳಿಗೆ ಏಪ್ರಿಲ್ ತಿಂಗಳಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸುವುದಾಗಿ ವೇಳಾಪಟ್ಟಿಯಲ್ಲಿ ಮಾಹಿತಿ ನೀಡಲಾಗಿದೆ.  7ನೇ ವೇತನ ಆಯೋಗದ ಅನುಸಾರ ಈ ಹುದ್ದೆಗಳಿಗೆ  ಲೆವೆಲ್-1 ವೇತನ ಲಭ್ಯವಾಗಲಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ 2023 ರ ಏಪ್ರಿಲ್ ನಲ್ಲಿ ಆರಂಭವಾಗಲಿದೆ.

ಉದ್ಯೋಗ ವಿವರ
ಹುದ್ದೆಯ ಹೆಸರು- ಎಂಟಿಎಸ್, ಹವಾಲ್ದಾರ್
ವಿವರ – ಸಿಬ್ಬಂದಿ ನೇಮಕಾತಿ ಆಯೋಗ ಅಧಿಸೂಚನೆ
ಪ್ರಕಟಣೆ ದಿನಾಂಕ – 2023-01-18
ಕೊನೆ ದಿನಾಂಕ – 2023-02-17
ಉದ್ಯೋಗ ಕ್ಷೇತ್ರ- ಕೇಂದ್ರ ಸರ್ಕಾರಿ ಹುದ್ದೆಗಳು
ವೇತನ ವಿವರ – INR 5200 to 20200 /Month

ಕೌಶಲ ಮತ್ತು ಶೈಕ್ಷಣಿಕ ಅರ್ಹತೆ
ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ / 10ನೇ ತರಗತಿ / ತತ್ಸಮಾನ ಪರೀಕ್ಷೆ ಪಾಸ್ ಆಗಿರಬೇಕು.
ನೇಮಕಾತಿ ಸಂಸ್ಥೆ-  ಸಿಬ್ಬಂದಿ ನೇಮಕಾತಿ ಆಯೋಗ
ವೆಬ್‌ಸೈಟ್‌ ವಿಳಾಸ   – https://ssc.nic.in/
ವಿಳಾಸ – ಕೇಂದ್ರ ಸರ್ಕಾರಿ ಸಚಿವಾಲಯ, ಸಂಸ್ಥೆ ಇಲಾಖೆಗಳು
ಸ್ಥಳ – ನವದೆಹಲಿ
ಪ್ರದೇಶ – ನವದೆಹಲಿ
ಅಂಚೆ ಸಂಖ್ಯೆ – 110001

SSC MTS ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ಇದ್ದು, ಎರಡು ಸೆಷನ್‌ಗಳಲ್ಲಿ ಪರೀಕ್ಷೆ ನಡೆಯಲಿದೆ. ಸೆಷನ್‌ 1ರ ಪರೀಕ್ಷೆಯಲ್ಲಿ ನೆಗೆಟಿವ್ ಅಂಕಗಳು ಇರುವುದಿಲ್ಲ. ಆದರೆ ಎರಡನೇ ಸೆಷನ್ ಪರೀಕ್ಷೆಯಲ್ಲಿ ನೆಗೆಟಿವ್ ಅಂಕಗಳು ಇರಲಿವೆ.

ಎಂಟಿಎಸ್‌ ಹುದ್ದೆಯ ಸೆಷನ್-1 ಸಿಬಿಟಿ ಪರೀಕ್ಷೆ ಮಾದರಿ/ ಅಂಕಗಳು
ಎಂಟಿಎಸ್‌ ಹುದ್ದೆಯ ಸೆಷನ್-1 ಸಿಬಿಟಿ ಪರೀಕ್ಷೆಯಲ್ಲಿ ಆಬ್ಜೆಕ್ಟಿವ್ ಟೈಪ್, ಮಲ್ಟಿಪಲ್ ಚಾಯ್ಸ್‌ ಪ್ರಶ್ನೆಗಳು ಇರಲಿದ್ದು,  45 ನಿಮಿಷ ಅವಧಿಗೆ 120 ಅಂಕದ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಇದರ ಜೊತೆಗೆ ನ್ಯುಮೆರಿಕಲ್ ಮತ್ತು ಮ್ಯಾಥೆಮೆಟಿಕಲ್ ಎಬಿಲಿಟಿಯ ಕುರಿತಾದ 60 ಅಂಕಗಳ  20ಪ್ರಶ್ನೆಗಳು ಇರಲಿದ್ದು, ಇವುಗಳಿಗೆ 45 ನಿಮಿಷದಲ್ಲಿ ಉತ್ತರ ನೀಡಬೇಕಾಗುತ್ತದೆ. ಇದೆ ಮಾದರಿಯಲ್ಲಿ ರೀಸನಿಂಗ್ ಎಬಿಲಿಟಿ ಮತ್ತು ಸಮಸ್ಯೆ ಬಗೆಹರಿಸುವುದು 20 ಪ್ರಶ್ನೆಗಳು  60 ಅಂಕಗಳಿಗೆ ಇರಲಿದ್ದು 45 ನಿಮಿಷ ಅವಧಿಗೆ ಉತ್ತರಿಸಬೇಕಾಗುತ್ತದೆ.

ಎಂಟಿಎಸ್‌ ಹುದ್ದೆಯ ಸೆಷನ್-2 ಸಿಬಿಟಿ ಪರೀಕ್ಷೆ ಮಾದರಿ/ ಅಂಕಗಳು
ಎಂಟಿಎಸ್‌ ಹುದ್ದೆಗೆ ಗರಿಷ್ಠ 150 ಅಂಕಗಳಿಗೆ ಸೆಷನ್‌ 2 ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯಲಿದ್ದು, ಈ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಗಳಿಗೆ ನೆಗೆಟಿವ್ ಅಂಕಗಳು ಇರಲಿವೆ. ಇದರ ಜೊತೆಗೆ  ಜೆನೆರಲ್ ಅವಾರ್ನೆಸ್  ಕುರಿತ 25 ಪ್ರಶ್ನೆಗಳು  75 ಅಂಕಗಳನ್ನು ಹೊಂದಿರಲಿದ್ದು 45 ನಿಮಿಷದ ಅವಧಿಗೆ ಉತ್ತರ ನೀಡಬೇಕಾಗುತ್ತದೆ. ಅದೇ ರೀತಿ, ಇಂಗ್ಲಿಷ್ ಲಾಂಗ್ವೇಜ್ ಮತ್ತು ಕಂಪ್ರೆಹೆನ್ಷನ್  ವಿಷಯಕ್ಕೆ ಸಂಬಂಧಿಸಿದಂತೆ 75 ಅಂಕಗಳಿಗೆ 25 ಪ್ರಶ್ನೆ ಕೇಳಲಾಗುತ್ತದೆ. ಈ ಪೇಪರ್ ಅನ್ನು  45 ನಿಮಿಷದಲ್ಲಿ ಪೂರ್ಣಗೊಳಿಸಬೇಕು.

ಹವಾಲ್ದಾರ್ ಹುದ್ದೆಗಳಿಗೆ ಪರೀಕ್ಷೆಯ ಮಾದರಿ:
ಹವಾಲ್ದಾರ್ ಪೋಸ್ಟ್‌ಗಳಿಗೆ PET, PST ಪರೀಕ್ಷೆಗಳು  ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ನಡೆಸಲಾಗುತ್ತದೆ. ಪುರುಷ ಅಭ್ಯರ್ಥಿಗಳಿಗೆ ಸಹಿಷ್ಣುತಾ ಪರೀಕ್ಷೆಯ ಜೊತೆಗೆ  ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗುತ್ತದೆ. ವಾಕಿಂಗ್ ಜೊತೆಗೆ 15 ನಿಮಿಷದಲ್ಲಿ 1600 ಮೀಟರ್ ನಡಿಗೆಯ ಪರೀಕ್ಷೆ ಇರಲಿದೆ. ಪುರುಷ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ಎತ್ತರ: 157.5 ಸೆಂ.ಮೀ ಇರಬೇಕಾಗುತ್ತದೆ.

ಮಹಿಳಾ ಅಭ್ಯರ್ಥಿಗಳಿಗೆ ಸಹಿಷ್ಣುತಾ ಪರೀಕ್ಷೆಯ ಜೊತೆಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗುತ್ತದೆ.
ವಾಕಿಂಗ್ : 20 ನಿಮಿಷದಲ್ಲಿ 1 km ನಡಿಗೆಯ ಪರೀಕ್ಷೆ ಇರಲಿದೆ. ಎದೆ ಸುತ್ತಳತೆ: 81 ಸೆಂ.ಮೀ (ಕನಿಷ್ಠ ಹಿಗ್ಗುವಿಕೆ 5 ಸೆಂ.ಮೀ) ಮಹಿಳಾ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆಯ ಅನುಸಾರ ಎತ್ತರ: 152 ಸೆಂ.ಮೀ ಮತ್ತು ತೂಕ: 48 ಕೆ.ಜಿ ಇರಬೇಕು.

Leave A Reply

Your email address will not be published.